ಲಾಕ್ಡೌನ್ ಸಮಯದಲ್ಲಿ 15 ಲಕ್ಷ ರೂ. ಗಳಿಕೆ, ಸಹ ಕಲಾವಿದರ ನೆರವಿಗೆ ಪಣತೊಟ್ಟ ಗಾಯಕ
ಚೆನ್ನೈ: ಕೊರೊನಾ ಮಹಾಮರಿಯ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಘೋಷಿಸಿದ ಲಾಕ್ಡೌನ್ನಿಂದ ದೇಶದ ಎಲ್ಲಾ ಚಿತ್ರರಂಗಗಳು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದವು. ಕೇವಲ ನಟರಲ್ಲದೆ ಇತರೆ ಕಲಾವಿದರು ಮತ್ತು ತಂತ್ರಜ್ಞರು ಸಹ ಈ ವೇಳೆಯಲ್ಲಿ ಆದಾಯವಿಲ್ಲದೆ ಬಳಲಿ ಬೆಂಡಾಗಿ ಹೋದರು. ಇದರಲ್ಲಿ ತಮಿಳುನಾಡಿನ ಕಾಲಿವುಡ್ ಚಿತ್ರರಂಗದ ಕಲಾವಿದರು ಕೂಡ ಒಬ್ಬರು. ಸಹ ಗಾಯಕರ ನೆರವಿಗೆ ನಿಂತ ಸತ್ಯನ್ ಮಹಾಲಿಂಗಂ ಆದರೆ, ಇಂಥ ಸಮಯದಲ್ಲಿ ಧೃತಿಗೆಡದೆ, ಕಾಲಿವುಡ್ನ ಖ್ಯಾತ ಹಿನ್ನೆಲೆ ಗಾಯಕನೊಬ್ಬ ತನ್ನ ಸಹ ಗಾಯಕರ ನೆರವಿಗೆ ಮುಂದಾಗಿದ್ದಾರೆ. ಸೋಷಿಯಲ್ […]
ಚೆನ್ನೈ: ಕೊರೊನಾ ಮಹಾಮರಿಯ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಘೋಷಿಸಿದ ಲಾಕ್ಡೌನ್ನಿಂದ ದೇಶದ ಎಲ್ಲಾ ಚಿತ್ರರಂಗಗಳು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದವು. ಕೇವಲ ನಟರಲ್ಲದೆ ಇತರೆ ಕಲಾವಿದರು ಮತ್ತು ತಂತ್ರಜ್ಞರು ಸಹ ಈ ವೇಳೆಯಲ್ಲಿ ಆದಾಯವಿಲ್ಲದೆ ಬಳಲಿ ಬೆಂಡಾಗಿ ಹೋದರು. ಇದರಲ್ಲಿ ತಮಿಳುನಾಡಿನ ಕಾಲಿವುಡ್ ಚಿತ್ರರಂಗದ ಕಲಾವಿದರು ಕೂಡ ಒಬ್ಬರು.
ಸಹ ಗಾಯಕರ ನೆರವಿಗೆ ನಿಂತ ಸತ್ಯನ್ ಮಹಾಲಿಂಗಂ ಆದರೆ, ಇಂಥ ಸಮಯದಲ್ಲಿ ಧೃತಿಗೆಡದೆ, ಕಾಲಿವುಡ್ನ ಖ್ಯಾತ ಹಿನ್ನೆಲೆ ಗಾಯಕನೊಬ್ಬ ತನ್ನ ಸಹ ಗಾಯಕರ ನೆರವಿಗೆ ಮುಂದಾಗಿದ್ದಾರೆ. ಸೋಷಿಯಲ್ ಮೀಡಿಯಾವನ್ನ ಅಸ್ತ್ರವಾಗಿ ಬಳಸಿಕೊಂಡು ತಮ್ಮ ಪ್ರತಿಭೆಯ ಆಧಾರದ ಮೇಲೆ ಕಳೆದ 64ದಿನಗಳಲ್ಲಿ ಬರೋಬ್ಬರಿ 15 ಲಕ್ಷ ರೂಪಾಯಿಗಳನ್ನು ಸಂಪಾದಿಸಿದ್ದಾರೆ. ಇವರು ಬೇರೆ ಯಾರು ಅಲ್ಲ ಚೆನ್ನೈ ಮೂಲದ ಸತ್ಯನ್ ಮಹಾಲಿಂಗಂ.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ‘ಸತ್ಯನ್ ಉತ್ಸವ’ ಎಂಬ ಹೆಸರಿನ ಲೈವ್ ಕಾರ್ಯಕ್ರಮದ ಮೂಲಕ ಸತತವಾಗಿ ಹಾಡುಗಳನ್ನ ಹಾಡಿದ ಸತ್ಯನ್ ಅದರಲ್ಲಿ ಬಂದ ಹಣವನ್ನ ತಮ್ಮ ಸಹ ಗಾಯಕರಿಗೆ ನೀಡಿದ್ದಾರೆ. ‘ಮ್ಯೂಸಿಕ್ ಫಾರ್ ಮ್ಯುಸಿಶಿಯನ್ಸ್ ’ ಎಂಬ ಯೋಜನೆ ಅಡಿಯಲ್ಲಿ ಇಂಡಸ್ಟ್ರಿಯ ಇತರರ ಸಹಾಯಕ್ಕೆ ಮುಂದಾಗಿದ್ದಾರೆ. ಗಾಯಕರ ಸಂಕಷ್ಟಗಳನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಹಾಗಾಗಿ ಅವರಿಗೆ ಸಹಾಯ ಮಾಡಲು ಮುಂದಾಗಿದ್ದೇನೆ ಎಂದು ಹೇಳಿರುವ ಸತ್ಯನ್ ಕಳೆದ ಮೇ 30ರಂದು 25 ಗಂಟೆಗಳ ಕಾಲ ನಿರಂತರವಾಗಿ ಹಾಡುತ್ತಾ ಆರ್ಕೆಸ್ಟ್ರಾ ಗಾಯಕರ ನೆರವಿಗೆ ಮುಂದಾಗಿದ್ದರು.