ನಿವೇದಾ ಥಾಮಸ್ ಕೇರಳದವರಿಗೆ ಮುದ್ದಿನ ಮಗಳು. ತಮಿಳು ಚಿತ್ರರಂಗಕ್ಕೆ ಮರೆಯಲಾರದ ಬಾಲ್ಯ ನಟಿ. ತನ್ನ ಮುಗ್ಧ ನಟನೆಯ ಮೂಲಕ ಸಿನಿ ರಸಿಕರನ್ನು ತನ್ನತ್ತ ಸೆಳೆದ ಬ್ಯೂಟಿ. ಪಾತ್ರ ಯಾವುದಾದರೂ ಅದಕ್ಕೆ ಜೀವ ತುಂಬುವ ಕೆಪಾಸಿಟಿ ನಿವೇದಾ ಅವರಲ್ಲಿದೆ.
ಹೊಳೆಯೋ ಕಣ್ಗಳು, ಚಬ್ಬಿ ಚಬ್ಬಿಯಾದ ಕೆನ್ನೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವ ಚೆಲುವೆ. ಯೆಸ್ ನಿವೇದಾ ನಟನೆಯಲ್ಲಿ ಎಷ್ಟು ಪರ್ಫೆಕ್ಟ್ ಇದ್ದರೋ ಅಷ್ಟೇ ಪರ್ಫೆಕ್ಟ್ ಸೌಂದರ್ಯ ಮತ್ತು ಆರೋಗ್ಯ ಮೈಕಟ್ಟನ್ನು ಹೊಂದಿದ್ದಾರೆ.
ಸಿಂಪಲ್ ಬೆಡಗಿ ನಿವೇದಾ ಅವರ ನಟನೆಯನ್ನು ಮೆಚ್ಚಿಕೊಂಡ ಪ್ರೇಕ್ಷಕ ಅವರ ಸೌಂದರ್ಯ ಮತ್ತು ಫಿಟ್ನೆಸ್ಗೂ ಮಾರುಹೋಗಿದ್ದಾರೆ. ಮಲೆಯಾಳಿ ಕುಟ್ಟಿ ನಿವೇದಾ ಆರೋಗ್ಯಕರ ಮೈಕಟ್ಟಿನ ಗುಟ್ಟು ನಿತ್ಯದ ವರ್ಕೌಟ್ ಅಂತೆ.
ನಿವೇದಾ ತಪ್ಪದೇ ಜಿಮ್ ವರ್ಕೌಟ್ ಮಾಡ್ತಾರಂತೆ. ಅದರಲ್ಲಿ ಫಂಕ್ಷನಲ್ ಮತ್ತು ವೇಟ್ ಟ್ರೇನಿಂಗ್ ಎಕ್ಸ್ಸೈಜ್ಗಳ ಕಡೆ ಹೆಚ್ಚಿನ ಗಮನ ಹರಿಸ್ತಾರಂತೆ. ಇದು ಇವರನ್ನು ಫಿಟ್ ಆ್ಯಂಡ್ ಫೈನ್ ಆಗಿರುವಂತೆ ಮಾಡಲು ಸಹಕಾರಿಯಾಗಿದೆಯಂತೆ.
ಜಿಮ್ನಲ್ಲಿ ಇವರು ಕಾರ್ಡಿಯೋ, ಫ್ರೀ ಹ್ಯಾಂಡ್ ಎಕ್ಸಸೈಸ್ ಮತ್ತು ವೇಟ್ ಲಿಫ್ಟಿಂಗ್ ಮಾಡ್ತಾರಂತೆ. ಜಿಮ್ಗೆ ಹೋಗೋದು ಮಿಸ್ ಆದ್ರೆ ರನ್ನಿಂಗ್ ಮಾಡ್ತಾರಂತೆ ಬ್ಯೂಟಿ ಕ್ವೀನ್ ನಿವೇದಾ.
Published On - 8:46 pm, Tue, 5 November 19