ಸಂಗೀತ ಚಿಕಿತ್ಸೆ! ಗಾನ ಗಾರುಡಿಗ SPB ಚೇತರಿಕೆಗೆ ಅವರದ್ದೇ ಹಾಡುಗಳು ಮದ್ದಾಗಿವೆ

| Updated By: ಆಯೇಷಾ ಬಾನು

Updated on: Aug 17, 2020 | 1:22 PM

ಚೆನ್ನೈ: ನಗರದ ಎಂಜಿಎಂ ಆಸ್ಪತ್ರೆಯಲ್ಲಿ ಗಾನ ಗಾರುಡಿಗೆ SP ಬಾಲಸುಬ್ರಹ್ಮಣ್ಯಂರಿಗೆ ಚಿಕಿತ್ಸೆ ಮುಂದುವರಿದಿದೆ. ಕಳೆದ ಹದಿಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ SPB ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಆಗಸ್ಟ್​ 5 ರಂದು ಚೆನ್ನೈನ ಅರುಂಬಾಕಂನಲ್ಲಿರುವ ಎಂಜಿಎಂ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು. 74 ವರ್ಷದ SPB ಬಿ.ಪಿ ಮತ್ತು ಸಕ್ಕರೆ ಕಾಯಿಲೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಾಲ್ಕು ದಿನಗಳ ಹಿಂದೆ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಐಸಿಯುನಲ್ಲಿ ಎಕ್ಮೋ ಮೆಷಿನ್ ಮೂಲಕ ಚಿಕಿತ್ಸೆ ನೀಡಲಾಗ್ತಿದೆ. SPB ಶ್ವಾಸಕೋಶ […]

ಸಂಗೀತ ಚಿಕಿತ್ಸೆ! ಗಾನ ಗಾರುಡಿಗ SPB ಚೇತರಿಕೆಗೆ ಅವರದ್ದೇ ಹಾಡುಗಳು ಮದ್ದಾಗಿವೆ
Follow us on

ಚೆನ್ನೈ: ನಗರದ ಎಂಜಿಎಂ ಆಸ್ಪತ್ರೆಯಲ್ಲಿ ಗಾನ ಗಾರುಡಿಗೆ SP ಬಾಲಸುಬ್ರಹ್ಮಣ್ಯಂರಿಗೆ ಚಿಕಿತ್ಸೆ ಮುಂದುವರಿದಿದೆ. ಕಳೆದ ಹದಿಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ SPB ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಆಗಸ್ಟ್​ 5 ರಂದು ಚೆನ್ನೈನ ಅರುಂಬಾಕಂನಲ್ಲಿರುವ ಎಂಜಿಎಂ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು.

74 ವರ್ಷದ SPB ಬಿ.ಪಿ ಮತ್ತು ಸಕ್ಕರೆ ಕಾಯಿಲೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಾಲ್ಕು ದಿನಗಳ ಹಿಂದೆ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಐಸಿಯುನಲ್ಲಿ ಎಕ್ಮೋ ಮೆಷಿನ್ ಮೂಲಕ ಚಿಕಿತ್ಸೆ ನೀಡಲಾಗ್ತಿದೆ. SPB ಶ್ವಾಸಕೋಶ ತೀವ್ರವಾಗಿ ಹಾನಿಗೊಳಗಾಗಿರುವದಿಂದ ಎಕ್ಮೋ ಮೆಷಿನ್ ಅಳವಡಿಸಿದ್ದಾರೆ.

ಜೊತೆಗೆ, ಹೆಚ್ಚಿನ ಚಿಕಿತ್ಸೆ ಅವಶ್ಯಕತೆವಿರುವ ಹಿನ್ನೆಲೆಯಲ್ಲಿ ನಿನ್ನೆ ಆಸ್ಪತ್ರೆಯ ಮೂರನೇ ಮಹಡಿಯಿಂದ ಆರನೇ ಮಹಡಿಯಲ್ಲಿರುವ ಎಕ್ಸ್​ಕ್ಲೂಸಿವ್​ ಐಸಿಯು ವಾರ್ಡ್​ಗೆ ಶಿಫ್ಟ್ ‌ಮಾಡಲಾಗಿದೆ. ಸದ್ಯ SPB ಗೆ ಲೈಫ್ ಸಪೋರ್ಟ್ ಚಿಕಿತ್ಸೆ ಮುಂದುವರೆಸಲಾಗಿದೆ.

ಗಾನ ಗಾರುಡಿಗನಿಗೆ ಅವರ ಹಾಡೇ ಮದ್ದು!
ಇದೀಗ, ತಿಳಿದುಬಂದಿರುವ ಸ್ವಾರಸ್ಯಕರ ಮಾಹಿತಿ ಪ್ರಕಾರ SPB ತಾವು ಹಾಡಿದ ಹಾಡುಗಳನ್ನೇ ಆಲಿಸುತ್ತಾ ಚೇತರಿಕೆ ಕಾಣುತ್ತಿದ್ದಾರಂತೆ. SP ಬಾಲಸುಬ್ರಹ್ಮಣ್ಯಂರ ಎಷ್ಟೋ ಹಾಡುಗಳು ಹಲವರಿಗೆ ಸ್ಫೂರ್ತಿ ನೀಡಿದೆ. ಇಂದು ತಮ್ಮ ಹಾಡುಗಳೇ ಅವರ ಚೇತರಿಕೆಗೆ ಸಾಕ್ಷಿಯಾಗಿವೆ.

ಎಂಜಿಎಂ ಆಸ್ಪತ್ರೆಯಲ್ಲಿ ನಿನ್ನೆಯಿಂದ ವೈದ್ಯರು SPB ಅವರ ಹಾಡುಗಳನ್ನೇ ಅವರಿಗೆ ಕೇಳಿಸ್ತಿದ್ದಾರಂತೆ. ಹೀಗಾಗಿ, ಅವರ ಆರೋಗ್ಯದಲ್ಲಿ ಚೇತರಿಕೆ ಪ್ರದಾನಿಸಿದೆ. ನಿನ್ನೆಯಷ್ಟೆ SPB ತಮ್ಮ ಕಣ್ಣುಗಳನ್ನು ಬಿಡಲು ಆರಂಭಿಸಿದ್ದಾರೆ ಅನ್ನೋ ಮಾಹಿತಿ ತಿಳಿದುಬಂದಿದೆ.

ಜೊತೆಗೆ, ಐಸಿಯುಗೆ ಶಿಫ್ಟ್ ಆಗುವ ಮುನ್ನ ಪತ್ನಿ ಸಾವಿತ್ರಿ ಜೊತೆ ವಿಡಿಯೋ ಕಾಲ್​​ನಲ್ಲಿ ಮಾತನಾಡಿದ್ದಾರಂತೆ. SPB ಹಾಡಿರುವ ಭಕ್ತಿಗೀತೆಗಳು ಹಾಗೂ ಹಲವು ಸ್ಫೂರ್ತಿ ತುಂಬಿರೋ ಗೀತೆಗಳನ್ನ ಕೇಳಿಸಲಾಗ್ತಿದೆಯಂತ. ಇದೆ ಸಂಗೀತ ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿರುವ ಬೇರೆ ರೋಗಿಗಳಿಗೂ ಕೇಳಿಸಲು ವೈದ್ಯರು ಮುಂದಾಗಿದ್ದಾರಂತೆ.

Published On - 11:16 am, Mon, 17 August 20