ತೆಲುಗು​ನಲ್ಲೂ ಬಯಲಾಗುತ್ತಾ ಡ್ರಗ್ಸ್ ದಂಧೆ: ಸ್ಫೋಟಕ ಮಾಹಿತಿ ಕೊಡ್ತೀನಿ ಎಂದ ಶ್ರೀ ರೆಡ್ಡಿ

| Updated By: ಸಾಧು ಶ್ರೀನಾಥ್​

Updated on: Sep 16, 2020 | 10:15 AM

ಹೈದರಾಬಾದ್: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ ಬಾಂಬ್ ಬ್ಲಾಸ್ಟ್ ಆಗಿದ್ದೇ ತಡ, ಇತರೇ ಸಿನಿ ರಂಗದಲ್ಲೂ ಇಂತಹದ್ದೇ ಕ್ರಾಂತಿ ಆರಂಭ ಆಗಿದೆ. ಅದ್ರಲ್ಲೂ ಟಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ನೆಗೆಟೀವ್ ಫೇಮ್ ತೆಗೆದುಕೊಂಡಿರುವ ನಟಿಯೊಬ್ಬರು, ತೆಲುಗು ಚಿತ್ರ ರಂಗದ ಬಣ್ಣ ಬಯಲು ಮಾಡ್ತೀನಿ ಅಂತಾ ತೊಡೆ ತಟ್ಟಿರೋದು ದೇಶಾದ್ಯಂತ ಸಂಚಲನ ಸೃಷ್ಟಿಮಾಡಿದೆ. ಟಾಲಿವುಡ್‌ನಲ್ಲಿ ‘ಕಾಸ್ಟಿಂಗ್ ಕೌಚ್’ ಬಗ್ಗೆ ಅರೆನಗ್ನವಾಗಿ ಪ್ರತಿಭಟನೆ ನಡೆಸಿ ಇಡೀ ಚಿತ್ರರಂಗದ ಗಮನ ಸೆಳೆದಿದ್ದ ಕಾಂಟ್ರವರ್ಷಿಯಲ್‌ ನಟಿ ಶ್ರೀರೆಡ್ಡಿ ಈಗ ಮತ್ತೊಂದು ಬಾಂಬ್‌ ಸಿಡಿಸ್ತೀನಿ ಅಂತಾ ತಯಾರಾಗಿದ್ದಾಳೆ. ಈಗಾಗ್ಲೇ ಟಾಲಿವುಡ್‌ನಲ್ಲಿ […]

ತೆಲುಗು​ನಲ್ಲೂ ಬಯಲಾಗುತ್ತಾ ಡ್ರಗ್ಸ್ ದಂಧೆ: ಸ್ಫೋಟಕ ಮಾಹಿತಿ ಕೊಡ್ತೀನಿ ಎಂದ ಶ್ರೀ ರೆಡ್ಡಿ
Follow us on

Sri Reddy ready to name top Tollywood celebrities into drugs if given security

ಹೈದರಾಬಾದ್: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ ಬಾಂಬ್ ಬ್ಲಾಸ್ಟ್ ಆಗಿದ್ದೇ ತಡ, ಇತರೇ ಸಿನಿ ರಂಗದಲ್ಲೂ ಇಂತಹದ್ದೇ ಕ್ರಾಂತಿ ಆರಂಭ ಆಗಿದೆ. ಅದ್ರಲ್ಲೂ ಟಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ನೆಗೆಟೀವ್ ಫೇಮ್ ತೆಗೆದುಕೊಂಡಿರುವ ನಟಿಯೊಬ್ಬರು, ತೆಲುಗು ಚಿತ್ರ ರಂಗದ ಬಣ್ಣ ಬಯಲು ಮಾಡ್ತೀನಿ ಅಂತಾ ತೊಡೆ ತಟ್ಟಿರೋದು ದೇಶಾದ್ಯಂತ ಸಂಚಲನ ಸೃಷ್ಟಿಮಾಡಿದೆ.

ಟಾಲಿವುಡ್‌ನಲ್ಲಿ ‘ಕಾಸ್ಟಿಂಗ್ ಕೌಚ್’ ಬಗ್ಗೆ ಅರೆನಗ್ನವಾಗಿ ಪ್ರತಿಭಟನೆ ನಡೆಸಿ ಇಡೀ ಚಿತ್ರರಂಗದ ಗಮನ ಸೆಳೆದಿದ್ದ ಕಾಂಟ್ರವರ್ಷಿಯಲ್‌ ನಟಿ ಶ್ರೀರೆಡ್ಡಿ ಈಗ ಮತ್ತೊಂದು ಬಾಂಬ್‌ ಸಿಡಿಸ್ತೀನಿ ಅಂತಾ ತಯಾರಾಗಿದ್ದಾಳೆ. ಈಗಾಗ್ಲೇ ಟಾಲಿವುಡ್‌ನಲ್ಲಿ ಬೇರೂರಿರುವ ಡ್ರಗ್ಸ್‌ ದಂಧೆಯ ಸ್ಫೋಟಕ ಬಿಚ್ಚಿಡುವುದಾಗಿ ಬಾಂಬ್ ಸಿಡಿಸಿದ್ದಾಳೆ.

ಸಂದಿಗ್ಧ ಸ್ಥಿತಿಯಲ್ಲೇ ಟಾಲಿವುಡ್ ನಟಿಯಿಂದ ‘ಡ್ರಗ್ಸ್’ ಬಾಂಬ್!
ಯೆಸ್.. ಸ್ಯಾಂಡಲ್​ವುಡ್​ನಲ್ಲಿ ಮತ್ತು ಬಾಲಿವುಡ್​ನಲ್ಲಿ ಡ್ರಗ್ಸ್ ದಂಧೆ ದೊಡ್ಡ ಸುದ್ದಿಯಾಗುತ್ತಿದೆ. ಆದ್ರೆ, ಈ ಹಿಂದೆಯೇ ಡ್ರಗ್ಸ್‌ ಜಾಲದಲ್ಲಿ ಸಿಲುಕಿ ಸಾಕಷ್ಟು ವಿವಾದಗಳಿಗೆ ಸಿಲುಕಿರುವ ಟಾಲಿವುಡ್‌ನಲ್ಲಿ ಈಗ ಮತ್ತೊಂದು ಸುತ್ತು ವಿವಾದಗಳು ಏಳುವ ಸಾಧ್ಯತೆಯಿದೆ. ನಟಿ ಶ್ರೀರೆಡ್ಡಿ ಟಾಲಿವುಡ್​ನಲ್ಲಿರುವ ಡ್ರಗ್ಸ್ ಜಾಲವನ್ನ ಬಯಲಿಗೆಳೆಯುವುದಾಗಿ ಘೋಷಿಸಿ ವಿಡಿಯೋ ರಿಲೀಸ್‌ ಮಾಡಿದ್ದಾಳೆ. ತೆಲಂಗಾಣ ಸರ್ಕಾರ ರಕ್ಷಣೆ ಕೊಟ್ರೆ, ಡ್ರಗ್ಸ್‌ ದಂಧೆಯನ್ನ ಬಯಲಿಗೆ ಎಳೆಯುತ್ತೀನಿ ಎಂದಿದ್ದಾಳೆ.

ಈಗಾಗ್ಲೇ ಮುಂಬೈನಲ್ಲಿ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಟಾಲಿವುಡ್​ನಲ್ಲಿ ಸಕ್ರಿಯವಾಗಿರುವ ನಟಿ ರಕುಲ್‌ಪ್ರೀತ್ ಸಿಂಗ್ ಹೆಸರು ಹೇಳಿದ್ದು, ತೆಲುಗು ಸಿನಿರಂಗದಲ್ಲಿ ಗುಸು ಗುಸು, ಪಿಸು ಪಿಸು ಶುರುವಾಗಿದೆ. ಇದ್ರ ಜೊತೆಗೇ ನಟಿ ಶ್ರೀರೆಡ್ಡಿ ಟಾಲಿವುಡ್​ನ ಡ್ರಗ್ ವ್ಯವಹಾರ, ಅನೈತಿಕ ಚಟುವಟಿಕೆ, ನಟರ ಮನೆಗಳಲ್ಲಿ ನಡೆಯೋ ಪಾರ್ಟಿಗಳಲ್ಲಿ ಸರಬರಾಜು ಆಗೋ ಡ್ರಗ್ಸ್‌, ಸೆಲೆಬ್ರಿಟಿಗಳ ಮಕ್ಕಳು ಆಯೋಜಿಸೋ ರೇವ್ ಪಾರ್ಟಿಗಳ ಕುರಿತು ಕಂಪ್ಲೀಟ್ ಡೀಟೇಲ್ಸ್ ಕೊಡುವುದಾಗಿ ಹೇಳಿಕೆ ನೀಡಿದ್ದಾರೆ. ಇದು ಟಾಲಿವುಡ್ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಈ ಹಿಂದೆ ರವಿತೇಜ ಸಹೋದರ, ಪುರಿ ಜಗನ್ನಾಥ್, ಚಾರ್ಮಿ ಸೇರಿದಂತೆ ಸಾಕಷ್ಟು ನಟರು, ಡ್ರಗ್ಸ್‌ ಸೇವನೆ ಆರೋಪದಲ್ಲಿ ಸಿಲುಕಿದ್ರು. ಇದೀಗ, ಮತ್ತಷ್ಟು ಮಂದಿಯ ಡ್ರಗ್ಸ್ ಜಗತ್ತು ಬಟಾಬಯಲು ಮಾಡ್ತೀವಿ ಎಂದು ಹೇಳ್ತಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Published On - 8:35 am, Wed, 16 September 20