2014ರಲ್ಲೇ ಟುಮಾರೋಲ್ಯಾಂಡ್ಗೆ ಪಾದಾರ್ಪಣೆ ಮಾಡಿದ್ದ ‘ಪಾರ್ಟಿ ಅನಿಮಲ್’ ಐಂದ್ರಿತಾ
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿರುವ ಪ್ರಕರಣಕ್ಕೆ ಸಂಬಂಧಿಸಿ ಕ್ಯೂಟ್ ಜೋಡಿ ಐಂದ್ರಿತಾ ಹಾಗೂ ದಿಗಂತ್ಗೆ ಇಂದು 11 ಗಂಟೆಗೆ ಕಚೇರಿಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ. ಹಾಗಿದ್ರೆ ಈ ಕ್ಯೂಟ್ ಜೋಡಿಗೂ ನಶೆಯ ನಂಟಿದೆಯಾ ಎಂಬ ಪ್ರಶ್ನೆ ಎದ್ದಿದೆ. ಬೆಲ್ಜಿಯಂನಲ್ಲಿ ಪ್ರತಿ ವರ್ಷ ನಡೆಯುತ್ತೆ Tomorrowland Festival .. ನಟಿ ಐಂದ್ರಿತಾಗೆ ಪಾರ್ಟಿ ಪ್ರೇಮ ಹೆಚ್ಚಾಗಿತ್ತಂತೆ. ಪಾರ್ಟಿ ಪ್ರೇಮವೇ ಕಂಟಕವಾಗುತ್ತಾ? ಎಂಬಂತಾಗಿದೆ. 2014ರಲ್ಲೇ ಟುಮಾರೋಲ್ಯಾಂಡ್ಗೆ ಹೋಗಿದ್ದ ಆ್ಯಂಡಿ ಅಲ್ಲಿನ ಪಾರ್ಟಿಯಲ್ಲಿ ಭಾಗಿಯಾಗಿದ್ರು. ಇದು ಬೆಲ್ಜಿಯಂನಲ್ಲಿ ಪ್ರತಿ […]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿರುವ ಪ್ರಕರಣಕ್ಕೆ ಸಂಬಂಧಿಸಿ ಕ್ಯೂಟ್ ಜೋಡಿ ಐಂದ್ರಿತಾ ಹಾಗೂ ದಿಗಂತ್ಗೆ ಇಂದು 11 ಗಂಟೆಗೆ ಕಚೇರಿಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ. ಹಾಗಿದ್ರೆ ಈ ಕ್ಯೂಟ್ ಜೋಡಿಗೂ ನಶೆಯ ನಂಟಿದೆಯಾ ಎಂಬ ಪ್ರಶ್ನೆ ಎದ್ದಿದೆ.
ಬೆಲ್ಜಿಯಂನಲ್ಲಿ ಪ್ರತಿ ವರ್ಷ ನಡೆಯುತ್ತೆ Tomorrowland Festival .. ನಟಿ ಐಂದ್ರಿತಾಗೆ ಪಾರ್ಟಿ ಪ್ರೇಮ ಹೆಚ್ಚಾಗಿತ್ತಂತೆ. ಪಾರ್ಟಿ ಪ್ರೇಮವೇ ಕಂಟಕವಾಗುತ್ತಾ? ಎಂಬಂತಾಗಿದೆ. 2014ರಲ್ಲೇ ಟುಮಾರೋಲ್ಯಾಂಡ್ಗೆ ಹೋಗಿದ್ದ ಆ್ಯಂಡಿ ಅಲ್ಲಿನ ಪಾರ್ಟಿಯಲ್ಲಿ ಭಾಗಿಯಾಗಿದ್ರು. ಇದು ಬೆಲ್ಜಿಯಂನಲ್ಲಿ ಪ್ರತಿ ವರ್ಷ ನಡೆಯುವ ಮ್ಯೂಸಿಕ್ ಫೆಸ್ಟಿವಲ್, ಅಲ್ಲಿ ಗಾಂಜಾ ಸೇವನೆಗೆ ಕಾನೂನಿನ ಅಡ್ಡಿಯಿಲ್ಲ.
ಆದರೆ ಬೇರೆ ರೀತಿಯ ಮಾದಕವಸ್ತುಗಳು ಅಲ್ಲಿ ಬ್ಯಾನ್. ಡ್ರಗ್ ಓವರ್ಡೋಸ್ನಿಂದ ಸಾವಿಗೀಡಾದ ಘಟನೆಗಳೂ ನಡೆದಿವೆ ಅನ್ನೋ ಮಾಹಿತಿ ಇದೆ. ಹೀಗಾಗಿ ಈಗ ಸಿಸಿಬಿ ಕಣ್ಣು ಮನಸಾರೆ ಜೋಡಿ ಮೇಲೆ ಬಿದ್ದಿದೆ. ಮುಂದೆ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತೆ ಏನೆಲ್ಲ ಬೆಳವಣಿಗೆಗಳಾಗುತ್ತೆ ಕಾದು ನೋಡಬೇಕಿದೆ.
Published On - 9:23 am, Wed, 16 September 20