ಬೆಂಗಳೂರು: ತೆಲುಗು ನಟ ವಿಜಯ್ ರಂಗರಾಜು ವಿರುದ್ಧ ಕನ್ನಡಿಗರ ಕೋಪ ತಣ್ಣಗಾಗುವಂತಿಲ್ಲ. ರಂಗರಾಜು ಕ್ಷಮೆಯಾಚಿಸಬೇಕೆಂದು ಕನ್ನಡ ಚಿತ್ರೋದ್ಯಮದ ಹಲವು ಸ್ಟಾರ್ ಕಲಾವಿದರು ಆಗ್ರಹಿಸಿದ್ದರು. ವಿಜಯ್ ರಂಗರಾಜು ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದಾರೆ. ಆದರೆ ಇದರಿಂದ ಸುಮಲತಾ ಅಂಬರೀಷ್ ಅವರ ಕೋಪ ತಣಿದಿಲ್ಲ.
ಇತ್ತೀಚಿನ ದಿನಗಳಲ್ಲಿ ಜನಪ್ರಿಯ ವ್ಯಕ್ತಿಗಳ ಬಗ್ಗೆ ಇಲ್ಲ ಸಲ್ಲದ ವಿವಾದ್ಮಕ ಹೇಳಿಕೆ ನೀಡಿ ಬಿಟ್ಟಿ ಪ್ರಚಾರ ಪಡೆಯುವುದೇ ಕೆಲವರಿಗೆ ಹವ್ಯಾಸವಾಗಿ ಹೋಗಿದೆ.ಇಡೀ ದೇಶವೇ, ಅದರಲ್ಲೂ ದಕ್ಷಿಣ ಭಾರತೀಯ ಚಿತ್ರ ರಸಿಕರಿಗೆ ನಮ್ಮ ಕರ್ನಾಟಕದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಘನೆತೆ ಏನೆಂಬುವುದು ಚೆನ್ನಾಗಿಯೇ ಗೊತ್ತು. 1/5 pic.twitter.com/htAje5foHY
— Sumalatha Ambareesh ?? ಸುಮಲತಾ ಅಂಬರೀಶ್ (@sumalathaA) December 13, 2020
ಟ್ವಿಟರ್ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ‘ಇತ್ತೀಚಿನ ದಿನಗಳಲ್ಲಿ ಜನಪ್ರಿಯ ವ್ಯಕ್ತಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಪ್ರಚಾರ ಪಡೆಯುವುದು ಕೆಲವರಿಗೆ ಹವ್ಯಾಸವಾಗಿ ಹೋಗಿದೆ. ಇಡೀ ದೇಶಕ್ಕೇ, ಅದರಲ್ಲೂ ದಕ್ಷಿಣ ಭಾರತೀಯ ಚಿತ್ರ ರಸಿಕರಿಗೆ ನಮ್ಮ ಕರ್ನಾಟಕದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಘನತೆ ಏನೆಂಬುವುದು ಚೆನ್ನಾಗಿಯೇ ಗೊತ್ತು’ ಎಂದು ಗುಡುಗಿದ್ದಾರೆ.
ಅದು ಕೇವಲ ಅಂತಹ ಬಾಯಿಬಡುಕ ವ್ಯಕ್ತಿಯ ಕೆಟ್ಟ ಗುಣ ಹಾಗು ನೀಚ ಬುದ್ದಿಯ ಅನಾವರಣವಲ್ಲದೆ ಬೇರೇನಲ್ಲ. ಅದರಲ್ಲೂ ನಮ್ಮನ್ನು ಅಗಲಿದ ವ್ಯಕ್ತಿಯ ಬಗ್ಗೆ ಈ ರೀತಿಯ ತುಚ್ಛವಾಗಿ ಮಾತನಾಡುವುದು ಕ್ಷಮಿಸಲಾಗದ ದೊಡ್ಡ ಅಪರಾಧ. 3/5
— Sumalatha Ambareesh ?? ಸುಮಲತಾ ಅಂಬರೀಶ್ (@sumalathaA) December 13, 2020
ಒಟ್ಟು ಐದು ಟ್ವೀಟ್ ಮಾಡಿರುವ ಅವರು, ವಿಷ್ಣುವರ್ಧನ್ ಭೌತಿಕವಾಗಿ ನಮ್ಮನ್ನಗಲಿದರೂ ಕನ್ನಡಿಗರು ಸಾಹಸಸಿಂಹನನ್ನು ಮರೆತಿಲ್ಲ. ವಿಜಯ್ ರಂಗರಾಜು ಕ್ಷಮೆಗೆ ಅರ್ಹರಲ್ಲ. ವಿಷ್ಣು ಅವಹೇಳನ ಕ್ಷಮಿಸಲಾಗದ ಅಪರಾಧ ಎಂದು ಅವರು ಹರಿಹಾಯ್ದಿದ್ದಾರೆ. ಯಾವ ವ್ಯಕ್ತಿಯ ಕುರಿತಾದರೂ ಬದುಕಿದ್ದಾಗಲೇ ಮಾತನಾಡಬೇಕು. ನಿಧನದ ನಂತರ ಚಾರಿತ್ರ್ಯಹರಣ ಮಾಡಬಾರದು ಎಂದಿದ್ದಾರೆ. ಒಟ್ಟಿನಲ್ಲಿ, ಸಾಹಸ ಸಿಂಹನನ್ನು ಅವಹೇಳನ ಮಾಡಿ ವಿಜಯ್ ರಂಗರಾಜು ಪಡಬಾರದ ಪಡಿಪಾಟಲು ಪಡುತ್ತಿರುವುದಂತೂ ಸತ್ಯ.
ನಾನು ಮಾಡಿರುವುದು ತುಂಬಾ ದೊಡ್ಡ ತಪ್ಪು: ವಿಷ್ಣು ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ ವಿಜಯ್ ರಂಗರಾಜು
ಸಾಹಸಸಿಂಹನ ಅವಹೇಳನ: ತೆಲುಗು ನಟನ ವಿರುದ್ಧ ಗುಡುಗಿದ ಕನ್ನಡ ಚಿತ್ರತಾರೆಯರು
Published On - 3:06 pm, Sun, 13 December 20