ಮಾದಕ ನಟಿ ಸನ್ನಿ ಲಿಯೋನ್ಗೆ ಭಾರತ ಸೇಫ್ ಅಲ್ವಂತೆ!
ಕಣ್ಣಿಗೆ ಕಾಣದ ಯಕಃಶ್ಚಿತ್ ಕೊರೊನಾ ಕ್ರಿಮಿ ಇಡೀ ಜಗತ್ತನ್ನೇ ಪತರಗುಟ್ಟಿಸಿದೆ. ದೊಡ್ಡಣ್ಣ ಅಮೆರಿಕವಂತೂ ಥರಗುಟ್ಟುತ್ತಿದೆ. ಇರೋದರಲ್ಲಿ ಭಾರತವೇ ಸೇಫೆಸ್ಟ್ ಎಂದು ಜಗತ್ತೇ ಹೇಳುತ್ತಿದೆ. ಆದ್ರೆ ಬಾಲಿವುಡ್ನ ಮಾದಕ ನಟಿ ಸನ್ನಿ ಲಿಯೋನ್ ಭಾರತ ಬಿಟ್ಟು ಅಮೆರಿಕ ತಲುಪಿಕೊಂಡಿದ್ದಾರೆ. ಅಮೆರಿಕದ ಲಾಸ್ ಎಂಜಲೀಸ್ ಅವರಿಗೆ ಸೇಫೆಸ್ಟ್ ಅಂತೆ! ಮೊನ್ನೆ ಅಮ್ಮಂದಿರ ದಿನ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡು, ಲಾಸ್ ಎಂಜಲೀಸ್ ತಲುಪಿಕೊಂಡಿದ್ದಾರೆ ಬೆಡಗಿ ಸನ್ನಿ ಲಿಯೋನ್. ನನಗೀಗ ಮೂವರು ಮಕ್ಕಳು. ಜೊತೆಗೆ ನಾವಿಬ್ಬರು. ಇಡೀ ಕುಟುಂಬದ ಯೋಗಕ್ಷೇಮ […]
ಕಣ್ಣಿಗೆ ಕಾಣದ ಯಕಃಶ್ಚಿತ್ ಕೊರೊನಾ ಕ್ರಿಮಿ ಇಡೀ ಜಗತ್ತನ್ನೇ ಪತರಗುಟ್ಟಿಸಿದೆ. ದೊಡ್ಡಣ್ಣ ಅಮೆರಿಕವಂತೂ ಥರಗುಟ್ಟುತ್ತಿದೆ. ಇರೋದರಲ್ಲಿ ಭಾರತವೇ ಸೇಫೆಸ್ಟ್ ಎಂದು ಜಗತ್ತೇ ಹೇಳುತ್ತಿದೆ. ಆದ್ರೆ ಬಾಲಿವುಡ್ನ ಮಾದಕ ನಟಿ ಸನ್ನಿ ಲಿಯೋನ್ ಭಾರತ ಬಿಟ್ಟು ಅಮೆರಿಕ ತಲುಪಿಕೊಂಡಿದ್ದಾರೆ. ಅಮೆರಿಕದ ಲಾಸ್ ಎಂಜಲೀಸ್ ಅವರಿಗೆ ಸೇಫೆಸ್ಟ್ ಅಂತೆ! ಮೊನ್ನೆ ಅಮ್ಮಂದಿರ ದಿನ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡು, ಲಾಸ್ ಎಂಜಲೀಸ್ ತಲುಪಿಕೊಂಡಿದ್ದಾರೆ ಬೆಡಗಿ ಸನ್ನಿ ಲಿಯೋನ್.
ನನಗೀಗ ಮೂವರು ಮಕ್ಕಳು. ಜೊತೆಗೆ ನಾವಿಬ್ಬರು. ಇಡೀ ಕುಟುಂಬದ ಯೋಗಕ್ಷೇಮ ನನ್ನ ಹೆಗಲ ಮೇಲಿದೆ. ಹಾಗಾಗಿ ನಾವೆಲ್ಲ ಲಾಸ್ ಎಂಜಲೀಸ್ ಸೇರಿಕೊಂಡಿದ್ದೇವೆ. ಇಲ್ಲಿ ರಹಸ್ಯ ಸ್ಥಳದಲ್ಲಿ ನಮ್ಮ ಎಸ್ಟೇಟ್ ಮನೆ ಇದೆ. ಅಲ್ಲಿ ನಾವು ಕ್ಷೇಮವಾಗಿದ್ದೇವೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ, ತಿಳಿಸಿದ್ದಾರೆ.
ಸದ್ಯ ಸನ್ನಿ ಲಿಯೋನ್ ಮತ್ತು ಪತಿ ಡೇನಿಯಲ್ ವೆಬರ್ ಹಾಗೂ ಮೂವರು ಮಕ್ಕಳು ಲಾಸ್ ಎಂಜಲೀಸ್ನಲ್ಲಿದ್ದಾರೆ. ಕೊರೊನಾ ವೈರಸ್ ಸಂದರ್ಭದಲ್ಲಿ ಮಕ್ಕಳಿಗೆ ಅಮೆರಿಕ ಸೇಫೆಸ್ಟ್ ಪ್ಲೇಸ್ ಎಂದು ಸನ್ನಿ ನಂಬಿದ್ದಾರೆ.
https://www.instagram.com/p/CACPBLSjXIT/?utm_source=ig_web_copy_link
ಮುಂಬೈನಲ್ಲಿ ವಾಸವಿದ್ದ ಸನ್ನಿ ಲಿಯೋನ್, ಅಲ್ಲಿರುವ ಎಲ್ಲ ತಾಯಂದಿರಿಗೆ ಅಮ್ಮಂದಿರ ದಿನಾಚರಣೆಯ ಶುಭಾಶಯಗಳನ್ನ ತಿಳಿಸಿದ್ದಾರೆ. ಜೀವನದಲ್ಲಿ ನೀವು ಮಕ್ಕಳನ್ನು ಹೊಂದಿರುವಾಗ ನಿಮ್ಮದೇ ಆದ ಆದ್ಯತೆಗಳು ಇರುತ್ತವೆ. ಹೀಗಾಗಿ ಡೇನಿಯಲ್ ಮತ್ತು ನಾನು ನಮ್ಮ ಮಕ್ಕಳನ್ನು ಕೊರೊನಾ ವೈರಸ್ ವಿರುದ್ಧ ಹೋರಾಡಲು ಸುರಕ್ಷಿತವೆಂದು ಭಾವಿಸಿದ ಸ್ಥಳಕ್ಕೆ ಕರೆದೊಯ್ದಿದ್ದೇವೆ.
ಲಾಸ್ ಏಂಜಲೀಸ್‌ನಲ್ಲಿ ನಮ್ಮ ಎಸ್ಟೇಟ್ ಮನೆ ಇದೆ. ನನ್ನ ತಾಯಿ ನಾನು ಏನು ಮಾಡಬೇಕೆಂದು ಬಯಸುತ್ತಿದ್ದಳೋ ಅದನ್ನು ಮಾಡಿದ್ದೇನೆ. ಮಿಸ್ ಯು ಅಮ್ಮ. ತಾಯಂದಿರ ದಿನದ ಶುಭಾಶಯಗಳು! ಎಂದು ಇನ್ಸ್ಟಾಗ್ರಾಮ್ನಲ್ಲಿ ಸನ್ನಿ ಲಿಯೋನ್ ತನ್ನ ಮಕ್ಕಳಾದ ನಿಶಾ, ನೋವಾ ಮತ್ತು ಆಶರ್ ಜೊತೆಗಿನ ಚಿತ್ರದೊಂದಿಗೆ ಬರೆದುಕೊಂಡಿದ್ದಾಳೆ.
ಸನ್ನಿ ಮತ್ತು ಕುಟುಂಬ ಎರಡು ದಿನಗಳ ಹಿಂದೆಯೇ ಅಮೆರಿಕ ತಲುಪಿದ್ದಾರೆ ಎಂದು ವರದಿಯಾಗಿದೆ. ಸನ್ನಿ ಪತಿ ಡೇನಿಯಲ್ ಲಾಸ್ ಎಂಜಲೀಸ್ನಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಕ್ವಾರಂಟೈನ್ ಪಾರ್ಟ್ 2. ನಾಟ್ ಸೋ ಬ್ಯಾಡ್ ನೌ ಎಂದು ಬರೆದುಕೊಂಡಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಹೇಗೆ ನೀವು ಅಮೆರಿಕಕ್ಕೆ ಪ್ರವಾಸ ಮಾಡಿದ್ರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದಕ್ಕೆ KLMನ ಸರ್ಕಾರಿ ವಿಮಾನದಲ್ಲಿ ಎಂದು ಡೇನಿಯಲ್ ಉತ್ತರಿಸಿದ್ದಾರೆ. ಸನ್ನಿ ಲಿಯೋನ್ ಮತ್ತು ಡೇನಿಯಲ್ ಅಮೆರಿಕ ಪೌರತ್ವವನ್ನು ಹೊಂದಿದ್ದು, 2012ರಲ್ಲಿ ಭಾರತಕ್ಕೆ ಬರುವ ಮುನ್ನ ಅವರು ಲಾಸ್ ಎಂಜಲೀಸ್ನಲ್ಲಿ ವಾಸವಿದ್ದರು.