‘ಸಪೋರ್ಟ್ ಮಾಡಿದವರು ಮೂರ್ಖರ ತರ ಕಾಣ್ತಾರೆ’; ಸುದೀಪ್ ಹಳೆಯ ಹೇಳಿಕೆ ವೈರಲ್

ಯಾರದ್ದೇ ವೈಯಕ್ತಿಕ ಜಗಳಗಳು ಅಥವಾ ಮನಸ್ತಾಪಗಳು ನಡೆದಾಗ ಮೂರನೇ ವ್ಯಕ್ತಿಗಳು ಮಧ್ಯಪ್ರವೇಶಿಸಿ ಬೆಂಬಲಿಸುತ್ತಾರೆ. ಆದರೆ ಅಂತಿಮವಾಗಿ ಜಗಳವಾಡಿದವರು ಒಂದಾಗುತ್ತಾರೆ, ಅವರಿಗೆ ಬೆಂಬಲ ನೀಡಿದವರು ಮಾತ್ರ ಸಮಾಜದಲ್ಲಿ ಮೂರ್ಖರಂತೆ ಕಾಣಿಸಿಕೊಳ್ಳುತ್ತಾರೆ ಎಂದು ಕಿಚ್ಚ ಸುದೀಪ್ ಎಚ್ಚರಿಸಿದ್ದರು. ಆ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಇಲ್ಲಿದೆ.

‘ಸಪೋರ್ಟ್ ಮಾಡಿದವರು ಮೂರ್ಖರ ತರ ಕಾಣ್ತಾರೆ’; ಸುದೀಪ್ ಹಳೆಯ ಹೇಳಿಕೆ ವೈರಲ್
ಸುದೀಪ್

Updated on: Oct 24, 2026 | 7:07 AM

ಮುಖ್ಯಾಂಶಗಳು

  • ಬೆಂಕಿ ಹಚ್ಚುವವರ ಬಗ್ಗೆ ಸುದೀಪ್ ಮಾತು
  • ಅನುಭವದಿಂದ ಕಲಿತ ಪಾಠ
  • ಅನಗತ್ಯ ವಿಷಯಗಳಲ್ಲಿ ಎಂದಿಗೂ ತಲೆಹಾಕಬೇಡಿ

ಯಾರ ಜೊತೆಯಾದರೂ ಜಗಳ ನಡೆದರೆ ಅದನ್ನು ನಾವು ನಾವೇ ಬಗೆಹರಿಸಿಕೊಳ್ಳಬೇಕು. ಈ ರೀತಿ ಮನಸ್ತಾಪಗಳು ಉಂಟಾದಾಗ ಮೂರನೇ ವ್ಯಕ್ತಿಗಳ ಪ್ರವೇಶದ ಕುರಿತು ನಟ ಕಿಚ್ಚ ಸುದೀಪ್ ಅವರು ನೀಡಿದ್ದ ಕಿವಿಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈಗಿನ ಸಮಯಕ್ಕೆ ವಿಡಿಯೋ ಸರಿಯಾಗಿ ಹೊಂದಿಕೆ ಆಗುತ್ತದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಈ ಮೊದಲು ಮಾತನಾಡಿದ್ದ ಸುದೀಪ್, ‘ಯಾರೋ ಒಬ್ಬರು ಬರ್ತಾರೆ. ನಮ್ಮ ಮನೆಯಲ್ಲಿ ನನಗೆ ಸಿಕ್ಕಾಪಟ್ಟೆ ಹೊಡೆಯುತ್ತಾ ಇದ್ದಾರೆ ಅಂತ ಇನ್ನೊಬ್ಬರ ಮನೆಗೆ ಹೋಗ್ತಾರೆ. ಅವರ ಬಳಿ ಸಪೋರ್ಟ್ ಕೇಳ್ತಾರೆ. ಅವರೂ ಅವರಿಗೆ ಸಪೋರ್ಟ್ ಮಾಡ್ತಾರೆ. ಫೈನಲ್ ಆಗಿ ಹೊಡೆದವರು-ಹೊಡೆಸಿಕೊಂಡವರು ಒಂದಾಗ್ತಾರೆ, ಸಪೋರ್ಟ್ ಮಾಡಿದವರು ಮೂರ್ಖರ ತರ ಕಾಣ್ತಾರೆ’ ಎಂದು ಹೇಳಿದ್ದರು.

ಇದನ್ನೂ ಓದಿ: ವಿಜಯಲಕ್ಷ್ಮಿ ಜೊತೆ ಜಗಳ, ‘ಮುಖವಾಡ ಬಯಲು ಮಾಡ್ತೀನಿ’ ಎಂದ ಧನ್ವೀರ್

‘ಪಾಠ ಇಲ್ಲಿಗೆ ಮುಗಿಯಿತು. ಮನೆಗೆ ಹೋಗಿ ಟಿವಿ ಹಚ್ಚಿ ನೋಡುತ್ತಾ, ನಾವೇನು ಮಾಡಬಾರದು ಎಂಬುದನ್ನು ಕಲಿತುಕೊಳ್ಳಬೇಕು’ ಎಂದು ಸುದೀಪ್ ಹೇಳಿದ್ದರು. ಅದನ್ನು ಅಭಿಮಾನಿಗಳು ಈಗ ವೈರಲ್ ಮಾಡುತ್ತಾ ಇದ್ದಾರೆ.

ಕೆಲಸದ ವಿಷಯಕ್ಕೆ ಬರೋದಾದರೆ, ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನ ನಡೆಸಿಕೊಡುತ್ತಿದ್ದಾರೆ. ಇಂದಿನ ಎಪಿಸೋಡ್​​ಗಾಗಿ ವೀಕ್ಷಕರು ಕಾದಿದ್ದಾರೆ. ಈ ವಾರ ಎಲ್ಲರೂ ಟಾಸ್ಕ್ ಉತ್ತಮವಾಗಿ ಆಡಿರುವುದರಿಂದ ಒಂದಷ್ಟು ಸ್ಪರ್ಧಿಗಳಿಗೆ ಮೆಚ್ಚುಗೆ ಸಿಗುವ ಸಾಧ್ಯತೆ ಇದೆ. ಅಲ್ಲದೆ, ಸೌಂದರ್ಯಾ ಶೆಟ್ಟಿ ಅವರು ಈ ವಾರದ ಅತ್ಯುತ್ತಮ ಪ್ರದರ್ಶನ ನೀಡಿ ಕ್ಯಾಪ್ಟನ್ ಹಾಗೂ ಉತ್ತಮ ಪಡೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us