ವಿಜಯಲಕ್ಷ್ಮಿ ಜೊತೆ ಜಗಳ, ‘ಮುಖವಾಡ ಬಯಲು ಮಾಡ್ತೀನಿ’ ಎಂದ ಧನ್ವೀರ್
ಧನ್ವೀರ್ ಗೌಡ ವಿರುದ್ಧ ದರ್ಶನ್ ಪಿಎ ಹಾಗೂ ವಿಜಯಲಕ್ಷ್ಮಿ ಅವರಿಗೆ ಆಪ್ತನಾಗಿರುವ ನಾಗರಾಜು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದಾದ ಬಳಿಕ ಅದೇ ದಿನ ಧನ್ವೀರ್ ಅವರ ತಂದೆ ತಿಮ್ಮಗೌಡ, ವಿಜಯಲಕ್ಷ್ಮಿ ಹಾಗೂ ಇನ್ನೂ ಕೆಲವರ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮ್ಮ ವಿರುದ್ಧ ದಾಖಲಾದ ದೂರಿಗೆ ಪ್ರತಿಕ್ರಿಯಿಸಿರುವ ಧನ್ವೀರ್, ತಾವು ಎಲ್ಲರ ಮುಖವಾಡ ಬಯಲು ಮಾಡುವುದಾಗಿ ಹೇಳಿದ್ದಾರೆ.

ಮುಖ್ಯಾಂಶಗಳು
- ವಿಜಯಲಕ್ಷ್ಮಿ ದರ್ಶನ್ vs ಧನ್ವೀರ್ ಗೌಡ
- ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಧನ್ವೀರ್ ಕಿಡಿ
- ಮುಖವಾಡ ಕಳಚುತ್ತೇನೆ ಎಂದ ಧನ್ವೀರ್
ದರ್ಶನ್ ಆಪ್ತ ಧನ್ವೀರ್ ಗೌಡ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಜಗಳ ತಾರಕಕ್ಕೇರಿದೆ. ಇಬ್ಬರೂ ಕಳೆದ ಕೆಲ ತಿಂಗಳುಗಳಿಂದ ಸಾಮಾಜಿಕ ಜಾಲತಾಣ ಬಳಸಿಕೊಂಡು ಒಬ್ಬರಿಗೊಬ್ಬರು ಪರೋಕ್ಷವಾಗಿ ಟಾಂಗ್ ನೀಡುತ್ತಾ, ಕಾಲೆಳೆಯುತ್ತಾ, ತಿವಿಯುತ್ತಾ ಮುನಿಸು ಪ್ರಕಟಿಸುತ್ತಿದ್ದರು. ಆದರೆ ಈಗ ಇಬ್ಬ ಜಗಳ ಬೀದಿಗೆ ಬಿದ್ದಿದೆ. ಧನ್ವೀರ್ ಗೌಡ ವಿರುದ್ಧ ದರ್ಶನ್ ಪಿಎ ಹಾಗೂ ವಿಜಯಲಕ್ಷ್ಮಿ ಅವರಿಗೆ ಆಪ್ತನಾಗಿರುವ ನಾಗರಾಜು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದಾದ ಬಳಿಕ ಅದೇ ದಿನ ಧನ್ವೀರ್ ಅವರ ತಂದೆ ತಿಮ್ಮಗೌಡ, ವಿಜಯಲಕ್ಷ್ಮಿ ಹಾಗೂ ಇನ್ನೂ ಕೆಲವರ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮ್ಮ ವಿರುದ್ಧ ದಾಖಲಾದ ದೂರಿಗೆ ಪ್ರತಿಕ್ರಿಯಿಸಿರುವ ಧನ್ವೀರ್, ತಾವು ಎಲ್ಲರ ಮುಖವಾಡ ಬಯಲು ಮಾಡುವುದಾಗಿ ಹೇಳಿದ್ದಾರೆ.
ತಮ್ಮ ವಿರುದ್ಧ ನಾಗರಾಜ್ ದಾಖಲಿಸಿರುವ ದೂರಿನ ಬಗ್ಗೆ ಮಾತನಾಡಿರುವ ಧನ್ವೀರ್ ಗೌಡ, ‘ನಿಂದಿಸಿದ್ದೀನಿ ಅಂತ ಹೇಳಿದ್ದಾರೆ ಆದರೆ ಅದಕ್ಕೆ ಕಾರಣ ಹೇಳಿಲ್ಲ. ಎಲ್ಲರ ಮುಖವಾಡವನ್ನು ಶೀಘ್ರದಲ್ಲೇ ಬಯಲು ಮಾಡ್ತೀನಿ, ಆ ದಿನ ಹತ್ತಿರದಲ್ಲೇ ಇದೆ’ ಎಂದು ಧನ್ವೀರ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ತಾವು ಹಾಗೂ ದರ್ಶನ್ ದೂರವಾಗಿಲ್ಲ ಎಂದು ಹೇಳಿರುವ ಧನ್ವೀರ್ ಶೀಘ್ರವೇ ಸುದ್ದಿಗೋಷ್ಠಿ ನಡೆಸಿ ಎಲ್ಲದಕ್ಕೂ ಉತ್ತರ ಕೊಡುತ್ತೇನೆ’ ಎಂದಿದ್ದಾರೆ.
ಇತ್ತೀಚೆಗಷ್ಟೆ ಚಾಮರಾಜನಗರದ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಧನ್ವೀರ್, ‘ನಾಯಿ ನರಿಗಳು ಕುತಂತ್ರ ಮಾಡಿದರೂ ಅವರನ್ನು ಏನೂ ಮಾಡೋಕೆ ಆಗಲ್ಲ’ ಎಂದು ಹೇಳಿದ್ದರು. ಅದರ ಬೆನ್ನಲ್ಲೆ ವಿಜಯಲಕ್ಷ್ಮಿ ಅವರು, ‘ನಿಮ್ಮ ಡಿ ಬಾಸ್ ಹೆಸರು ಮೆಚ್ಚುಗೆಗಿರಲಿ, ಟೀಕೆಗಿರಲಿ, ಸ್ವಹಿತ ಸಾಧನೆಯ ಸಾಧನವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅಭಿಪ್ರಾಯದಲ್ಲಿ ಪ್ರಾಮಾಣಿಕತೆ ಇರಲಿ, ಮಾತಿನಲ್ಲಿ ಗೌರವವಿರಲಿ’ ಎಂದು ಬರೆದಿದ್ದರು. ಅದರ ಬೆನ್ನಲ್ಲೆ ಧನ್ವೀರ್ ಸಹ ‘ಶಕುನಿ’ ಎಂದು ಬರೆದಿದ್ದರು. ಈಗ ನೋಡಿದರೆ ಎರಡೂ ಕಡೆಯಿಂದ ಪರಸ್ಪರರ ಮೇಲೆ ದೂರುಗಳು ಸಹ ದಾಖಲಾಗಿವೆ.
ಇದನ್ನೂ ಓದಿ:ಡಿ ಬಾಸ್ ದರ್ಶನ್ ಹೆಸರು ದುರ್ಬಳಕೆ ಮಾಡಿಕೊಳ್ಳುವವರಿಗೆ ವಿಜಯಲಕ್ಷ್ಮಿ ಖಡಕ್ ಎಚ್ಚರಿಕೆ
ಅಂದಹಾಗೆ ಇವರಿಬ್ಬರ ನಡುವೆ ಜಗಳ ಪ್ರಾರಂಭವಾಗಿ ಕೆಲ ತಿಂಗಳುಗಳೇ ಆಗಿದ್ದವು. ಹಿಂದೊಮ್ಮೆ ದರ್ಶನ್ ಅವರ ತಾಯಿ ಮೀನಾ ಅವರು ವಿಜಯಲಕ್ಷ್ಮಿ ಹಾಗೂ ಧನ್ವೀರ್ ಇಬ್ಬರನ್ನೂ ದರ್ಶನ್ ಇದ್ದ ಜೈಲಿಗೆ ಕರೆದುಕೊಂಡು ಹೋಗಿ ರಾಜಿ ಸಹ ಮಾಡಿಸಲಾಗಿತ್ತು. ಆದರೂ ಸಹ ಮುನಿಸು ಮುಗಿದಿಲ್ಲ ಈಗ ಪೊಲೀಸ್ ಠಾಣೆಯ ಮೆಟ್ಟಿಲನ್ನು ಹತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




