ಸುಶಾಂತ್ ನಟಿಸಿದ ಕೊನೆ ಸಿನಿಮಾದ ಟ್ರೈಲರ್ ಹೇಗಿದೆ ಗೊತ್ತಾ?
ಸುಶಾಂತ್ ಸಿಂಗ್ ರಜಪೂತ್ ಈಗ ಕೇವಲ ನೆನಪು ಮಾತ್ರ. ಆದ್ರೆ ಈ ನಟ ಬಿಟ್ಟು ಹೋಗಿರುವ ಅದ್ಭುತ ಸಿನಿ ನೆನಪುಗಳು ಈಗಲೂ ಅಭಿಮಾನಿಗಳನ್ನ ಕಾಡುತ್ತಲೇ ಇವೆ. ಇದೀಗ, ಸುಶಾಂತ್ ಸಿಂಗ್ ರಜಪೂತ್ ನಟನೆಯ ಕೊನೆಯ ಚಿತ್ರ ‘ದಿಲ್ ಬೇಚಾರ’ದ ಟ್ರೈಲರ್ ರಿಲೀಸ್ ಆಗಿದೆ. ‘ದಿಲ್ ಬೇಚಾರ’ ಟ್ರೈಲರ್ ನೋಡಿ ಅದೆಷ್ಟು ಮಂದಿ ಕಣ್ಣೀರು ಹಾಕ್ತಿದ್ದಾರೋ ಗೊತ್ತಿಲ್ಲ. ಯಾಕಂದ್ರೆ, ನೋವಿನಲ್ಲೂ ನಗುವ ಸುಶಾಂತ್ನ ರಿಯಲ್ ಲೈಫ್ ಕ್ಯಾರೆಕ್ಟರ್ನ ಸಿನಿಮಾದ ಟ್ರೈಲರ್ನಲ್ಲಿ ಕಾಣಬಹುದು. ಅಂದ ಹಾಗೆ, ಸುಶಾಂತ್ ಗೆಳೆಯ ಮುಕೇಶ್ […]
ಸುಶಾಂತ್ ಸಿಂಗ್ ರಜಪೂತ್ ಈಗ ಕೇವಲ ನೆನಪು ಮಾತ್ರ. ಆದ್ರೆ ಈ ನಟ ಬಿಟ್ಟು ಹೋಗಿರುವ ಅದ್ಭುತ ಸಿನಿ ನೆನಪುಗಳು ಈಗಲೂ ಅಭಿಮಾನಿಗಳನ್ನ ಕಾಡುತ್ತಲೇ ಇವೆ. ಇದೀಗ, ಸುಶಾಂತ್ ಸಿಂಗ್ ರಜಪೂತ್ ನಟನೆಯ ಕೊನೆಯ ಚಿತ್ರ ‘ದಿಲ್ ಬೇಚಾರ’ದ ಟ್ರೈಲರ್ ರಿಲೀಸ್ ಆಗಿದೆ.
‘ದಿಲ್ ಬೇಚಾರ’ ಟ್ರೈಲರ್ ನೋಡಿ ಅದೆಷ್ಟು ಮಂದಿ ಕಣ್ಣೀರು ಹಾಕ್ತಿದ್ದಾರೋ ಗೊತ್ತಿಲ್ಲ. ಯಾಕಂದ್ರೆ, ನೋವಿನಲ್ಲೂ ನಗುವ ಸುಶಾಂತ್ನ ರಿಯಲ್ ಲೈಫ್ ಕ್ಯಾರೆಕ್ಟರ್ನ ಸಿನಿಮಾದ ಟ್ರೈಲರ್ನಲ್ಲಿ ಕಾಣಬಹುದು. ಅಂದ ಹಾಗೆ, ಸುಶಾಂತ್ ಗೆಳೆಯ ಮುಕೇಶ್ ಛಾಬ್ರಾ ನಿರ್ದೇಶಿಸಿರೋ ಈ ಸಿನಿಮಾ ಜುಲೈ 24ರಂದು OTT ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗುತ್ತಿದೆ.
ದಿಲ್ ಬೇಚಾರ ಕ್ಯೂಟ್ ಜೋಡಿಯೊಂದರ ನೋವಿನ ಪ್ರೇಮ್ ಕಹಾನಿ. ನಟಿ ಸಂಜನಾ ಸಾಂಘಿಗೆ ಇದು ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲಿ ಕ್ಯಾನ್ಸರ್ ರೋಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಶಾಂತ್ರದ್ದು ಎಂದಿನಂತೆ ನೋವಿನಲ್ಲೂ ನಗುವ ಪಾತ್ರ. ಇದೀಗ ಸುಶಾಂತ್ ಕೊನೆಯ ಸಿನಿಮಾ ಬಗ್ಗೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.
ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ರಾಗ ಸಂಯೋಜನೆ ಮಾಡಿದ್ದಾರೆ. ಹಾಗಾಗಿ, ಸಂಗೀತ ಪ್ರಿಯರಿಗೂ ಈ ಸಿನಿಮಾ ಪಕ್ಕಾ ಲೈಕ್ ಆಗತ್ತೆ . ಒಟ್ಟಾರೆ, ‘ದಿಲ್ ಬೇಚಾರ’ ಟ್ರೈಲರ್ ನೋಡಿ ಸುಶಾಂತ್ ಫ್ಯಾನ್ಸ್ ನೋವಿನಲ್ಲೂ ಸಂತಸದ ನಗೆ ಬೀರಿದ್ದಾರೆ.
Published On - 8:03 pm, Mon, 6 July 20