ಹೆಣ್ಣುಮಕ್ಕಳು ಸಿರ್ರ್ ಅಂತಾ ಸಿಟ್ಟಿಗೇಳುವ ವಿಷಯ ಅಂದ್ರೆ ಇದೇ ಅನ್ಸುತ್ತೆ.. ಯಾರಾದ್ರು ನಿಮ್ಮ ವಯಸ್ಸು ಎಷ್ಟು? ಎಂದು ಕೇಳಿಬಿಟ್ಟರೆ ಹುಡುಗಿಯರು ರೊಚ್ಚಿಗೇಳ್ತಾರೆ. ಏನ್ ಬೇಕಾದ್ರೂ ಕೇಳಿ ವಯಸ್ಸೊಂದನ್ನು ಬಿಟ್ಟು ಅನ್ನೊ ಈ ಕಾಲದಲ್ಲಿ.. ನಟಿ ಸ್ವರಾ ಭಾಸ್ಕರ್ ದೊಡ್ಡ ಸತ್ಯವೊಂದನ್ನು ಕಿರುನಗೆಯೊಂದಿಗೆ ಬಿಚ್ಚಿಟ್ಟಿದ್ದಾರೆ.
ತನ್ನ ವಯಸ್ಸಿನ ಬಗ್ಗೆಯೇ ಅಪಸ್ವರ ಪಲುಕಿದ್ದ ಸ್ವರಾ ಭಾಸ್ಕರ್!
ಸಂದರ್ಶನದಲ್ಲಿ ಸ್ವರಾ ಭಾಸ್ಕರ್ ಅವರು ‘ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳುತ್ತಾ ಬಂದಿದ್ದೇನೆ. ಪ್ರತಿ ಬಾರಿ ಸುಳ್ಳು ಹೇಳುವಾಗ ನನಗೆ ನಗು ಬರುತ್ತಿತ್ತು! ನನ್ನ ಸುಳ್ಳಿನ ಬಗ್ಗೆ ಯಾರೊಬ್ಬರೂ ಅನುಮಾನ ವ್ಯಕ್ತಪಡಿಸಿರಲಿಲ್ಲ. ಆದರೂ ಕೆಲವರಿಗೇ ಈ ವಿಚಾರ ತಿಳಿಸಿದ್ದೆ. ಈ ಸುಳ್ಳಿನ ಹಿಂದೆ ನಿಮ್ಮ ಉದ್ದೇಶವೇನಿದೆ? ಹೇಳುವ ಸುಳ್ಳನ್ನಾದರೂ ಸರಿಯಾಗಿ ಹೇಳಿ ಎಂದಿದ್ದರು. ಆದರೆ ಎಲ್ಲರ ಮುಂದೆ ಇದೀಗ ನನ್ನ ವಯಸ್ಸಿನ ಸುಳ್ಳಿನ ವಿಚಾರದ ಬಗ್ಗೆ ನಾನೇ ಒಪ್ಪಿಕೊಳ್ಳುತ್ತಿದ್ದೇನೆ’ ಎಂದು ತುಂಟ ನಗೆ ಬೀರಿದ್ದಾರೆ ಸ್ವರಾ ಭಾಸ್ಕರ್.