Together as One: ಲಾಕ್​ಡೌನ್​ ಸಂತ್ರಸ್ತ ಸಂಗೀತಗಾರರ ನೆರವಿಗೆ ಧಾವಿಸಿದ ದಿಗ್ಗಜರು

| Updated By: ಸಾಧು ಶ್ರೀನಾಥ್​

Updated on: Aug 15, 2020 | 11:45 AM

ಬೆಂಗಳೂರು: ಕೊವಿಡ್​ ಮಹಾಮಾರಿಯಿಂದ ಸಂಕಷ್ಟ ಎದುರಿಸುತ್ತಿರುವ ಗಾಯಕರು ಹಾಗೂ ಸಂಗೀತಕಾರರ ನೆರವಿಗೆ ಯುನೈಟೆಡ್​ ಸಿಂಗರ್ಸ್​ ಚಾರಿಟೇಬಲ್​ ಟ್ರಸ್ಟ್​ ಎಂಬ ಸಂಸ್ಥೆಯು ಮುಂದಾಗಿದೆ. ಖ್ಯಾತ ಹಿನ್ನೆಲೆ ಗಾಯಕ ಶ್ರೀನಿವಾಸ್​ ನೇತೃತ್ವದಲ್ಲಿ ಸ್ಥಾಪನೆಯಾದ ಈ ಸಂಸ್ಥೆಗೆ ರಾಹುಲ್​ ನಂಬಿಯಾರ್​, ರಂಜೀತ್ ಗೋವಿಂದ್​ ಹಾಗೂ ಸುಜಾತಾ ಮೋಹನ್​ ಸಹ ಕೈಜೋಡಿಸಿದ್ದಾರೆ. ಇದೀಗ, ಸಂಸ್ಥೆಯು ಒಂದಾಗಿ ಬಾಳೋಣ (Together as one) ಎಂಬ ಶೀರ್ಷಿಕೆಯಡಿ ತನ್ನ ಮೊದಲ ಹಾಡನ್ನು ಇಂದು ಬಿಡುಗಡೆ ಮಾಡಿದೆ. ಖ್ಯಾತ ಸಂಗೀತ ನಿರ್ದೇಶಕ AR ರಹಮಾನ್​, ಕನ್ನಡ ನಟ […]

Together as One: ಲಾಕ್​ಡೌನ್​ ಸಂತ್ರಸ್ತ ಸಂಗೀತಗಾರರ ನೆರವಿಗೆ ಧಾವಿಸಿದ ದಿಗ್ಗಜರು
Follow us on

ಬೆಂಗಳೂರು: ಕೊವಿಡ್​ ಮಹಾಮಾರಿಯಿಂದ ಸಂಕಷ್ಟ ಎದುರಿಸುತ್ತಿರುವ ಗಾಯಕರು ಹಾಗೂ ಸಂಗೀತಕಾರರ ನೆರವಿಗೆ ಯುನೈಟೆಡ್​ ಸಿಂಗರ್ಸ್​ ಚಾರಿಟೇಬಲ್​ ಟ್ರಸ್ಟ್​ ಎಂಬ ಸಂಸ್ಥೆಯು ಮುಂದಾಗಿದೆ. ಖ್ಯಾತ ಹಿನ್ನೆಲೆ ಗಾಯಕ ಶ್ರೀನಿವಾಸ್​ ನೇತೃತ್ವದಲ್ಲಿ ಸ್ಥಾಪನೆಯಾದ ಈ ಸಂಸ್ಥೆಗೆ ರಾಹುಲ್​ ನಂಬಿಯಾರ್​, ರಂಜೀತ್ ಗೋವಿಂದ್​ ಹಾಗೂ ಸುಜಾತಾ ಮೋಹನ್​ ಸಹ ಕೈಜೋಡಿಸಿದ್ದಾರೆ.

ಇದೀಗ, ಸಂಸ್ಥೆಯು ಒಂದಾಗಿ ಬಾಳೋಣ (Together as one) ಎಂಬ ಶೀರ್ಷಿಕೆಯಡಿ ತನ್ನ ಮೊದಲ ಹಾಡನ್ನು ಇಂದು ಬಿಡುಗಡೆ ಮಾಡಿದೆ. ಖ್ಯಾತ ಸಂಗೀತ ನಿರ್ದೇಶಕ AR ರಹಮಾನ್​, ಕನ್ನಡ ನಟ ಯಶ್​, ಮಲಯಾಳಂ ನಟ ಮೋಹನ್​ಲಾಲ್​ ಮತ್ತು ತೆಲುಗು ನಟ ರಾಮ್​ಚರಣ್​ ಸಹ ಸೇರಿ ಈ ಹಾಡಿನ ಸಿ.ಡಿ.ಯನ್ನ ಬಿಡುಗಡೆ ಮಾಡಿದರು.

AR ರಹಮಾನ್​ರ ಪ್ರಸಿದ್ಧ ಹಾಡೊಂದರ ಅವತರಣಿಕೆಯಾದ ಈ ಸಾಂಗ್​ಗೆ ಐದು ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ 65 ಜನ ಗಾಯಕರು ದನಿಗೂಡಿಸಿದ್ದಾರೆ. ಲಹರಿ ಮ್ಯೂಸಿಕ್​ ಕಂಪನಿಯಿಂದ ಬಿಡುಗಡೆಯಾದ ಈ ಹಾಡಿಗೆ ಎಲ್ಲಾ ಗಾಯಕರು ಲಾಕ್​ಡೌನ್​ ವೇಳೆ ತಮ್ಮ ತಮ್ಮ ಮನೆಗಳಲ್ಲಿಯೇ ಉಳಿದು ಹಾಡಿದ್ದಾರೆ.

ಹಾಡಿನಿಂದ ಬರುವ ಆದಾಯವನ್ನ ಸಂಕಷ್ಟ ಎದುರಿಸುತ್ತಿರುವ ಗಾಯಕರು ಹಾಗೂ ಸಂಗೀತಕಾರರ ನೆರವಿಗೆ ಬಳಸಲು ತೀರ್ಮಾನಿಸಲಾಗಿದೆ. ಜೊತೆಗೆ, ಬರುವ ಸೆಪ್ಟೆಂಬರ್​ನಲ್ಲಿ ಜಾಗತಿಕ ಸಂಗೀತ ಸಮ್ಮೇಳನ ನಡೆಸಿ ಮತ್ತಷ್ಟು ಅನುದಾನ ಪಡೆಯಲು ಮುಂದಾಗಿದ್ದಾರೆ.