ಟಾಕ್ಸಿಕ್ ಅಡ್ವಾನ್ಸ್ ಬುಕಿಂಗ್; 100 ಕೋಟಿ ರೂಪಾಯಿ ಓಪನಿಂಗ್ ನಿರೀಕ್ಷೆಯಲ್ಲಿ ಯಶ್ ಸಿನಿಮಾ

ರಾಕಿ ಭಾಯ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೂ ಮುನ್ನವೇ 40 ಕೋಟಿ ರೂಪಾಯಿಗೂ ಹೆಚ್ಚು ಅಡ್ವಾನ್ಸ್ ಬುಕಿಂಗ್ ಗಳಿಕೆ ಮಾಡಿದೆ. ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್ ಧೂಳೆಬ್ಬಿಸಲು ಸಜ್ಜಾಗಿರುವ ಈ ಚಿತ್ರವು ಮೊದಲ ದಿನವೇ 100 ಕೋಟಿ ರೂಪಾಯಿಗಳ ಭಾರಿ ಓಪನಿಂಗ್ ಪಡೆಯುವ ನಿರೀಕ್ಷೆಯಲ್ಲಿದ್ದು, ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ.  

ಟಾಕ್ಸಿಕ್ ಅಡ್ವಾನ್ಸ್ ಬುಕಿಂಗ್; 100 ಕೋಟಿ ರೂಪಾಯಿ ಓಪನಿಂಗ್ ನಿರೀಕ್ಷೆಯಲ್ಲಿ ಯಶ್ ಸಿನಿಮಾ
ಯಶ್
Edited By:

Updated on: Aug 26, 2026 | 7:35 AM

ಮುಖ್ಯಾಂಶಗಳು

  • ಬಾಕ್ಸ್ ಆಫೀಸ್‌ನಲ್ಲಿ ರಾಕಿ ಭಾಯ್ ಹವಾ
  • 40 ಕೋಟಿ ದಾಟಿದ ಬುಕಿಂಗ್
  • ಚಿತ್ರಮಂದಿರಗಳಿಗೆ ಹೊಸ ಜೀವ ನೀಡಿದ ಯಶ್ 'ಟಾಕ್ಸಿಕ್' ಸಂಚಲನ

ರಾಕಿಂಗ್ ಸ್ಟಾರ್  ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic Movie) ಸಿನಿಮಾ ಅದ್ಧೂರಿಯಾಗಿ ತೆರೆಗೆ ಬಂದಿದೆ. ಪ್ರಪಂಚದಾದ್ಯಂತ ಬೆಳಿಗ್ಗೆ 6 ಗಂಟೆಯಿಂದಲೇ ಪ್ರದರ್ಶನಗಳು ಆರಂಭವಾಗಿವೆ. ರಿಲೀಸ್‌ಗೂ ಮುನ್ನವೇ ಈ ಸಿನಿಮಾ ಅಡ್ವಾನ್ಸ್ ಬುಕಿಂಗ್ ಮೂಲಕ 40 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿ ಹೊಸ ದಾಖಲೆ ಬರೆದಿದೆ. ಹೀಗಾಗಿ ಮೊದಲ ದಿನವೇ ಸಿನಿಮಾದ ಗಳಿಕೆ 100 ಕೋಟಿ ರೂಪಾಯಿ ತಲುಪುವ ನಿರೀಕ್ಷೆ ಇದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಭವಿಷ್ಯ ನುಡಿದಿದ್ದಾರೆ.

ಕರ್ನಾಟಕ ಸೇರಿದಂತೆ ದೇಶಾದ್ಯಂತ ‘ಟಾಕ್ಸಿಕ್’ ಹವಾ ಜೋರಾಗಿದೆ. ನಾಲ್ಕು ವರ್ಷಗಳ ನಂತರ ಯಶ್ ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ. ಕನ್ನಡಿಗನೊಬ್ಬ ಜಾಗತಿಕ ಮಟ್ಟದಲ್ಲಿ ಬೆಳೆದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಒಬ್ಬ ಬಸ್ ಚಾಲಕನ ಮಗ ಇಂದು ಹಾಲಿವುಡ್ ಮಟ್ಟಕ್ಕೆ ಬೆಳೆದು ನಿಂತಿರುವುದು ನಿಜಕ್ಕೂ ಪ್ರೇರಣಾದಾಯಕ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.

ಕರ್ನಾಟಕದಲ್ಲಿ ಶೇಕಡಾ 90 ಕ್ಕೂ ಹೆಚ್ಚು ಚಿತ್ರಮಂದಿರಗಳು ಈ ಸಿನಿಮಾಗೆ ಆದ್ಯತೆ ನೀಡಿವೆ. ಹಲವು ಚಿತ್ರಮಂದಿರಗಳು ಮುಚ್ಚುವ ಹಂತದಲ್ಲಿದ್ದವು. ಈಗ ‘ಟಾಕ್ಸಿಕ್’ ಆಗಮನವು ಪ್ರದರ್ಶಕರಿಗೆ ಹೊಸ ಜೀವ ನೀಡಿದೆ. ಮೊದಲ ದಿನದ ಟಿಕೆಟ್‌ಗಳು ಈಗಾಗಲೇ ಭರ್ಜರಿಯಾಗಿ ಮಾರಾಟವಾಗಿವೆ.

ಉತ್ತರ ಭಾರತದಲ್ಲೂ ಚಿತ್ರಕ್ಕೆ ಉತ್ತಮ ಬೆಂಬಲ ಸಿಗುತ್ತಿದೆ. ಹಿಂದಿ ಮಾರುಕಟ್ಟೆಯಲ್ಲಿ ಮೊದಲ ದಿನವೇ 30 ರಿಂದ 40 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯಿದೆ. ಬಿಹಾರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದಲ್ಲೂ ಮುಂಗಡ ಬುಕಿಂಗ್ ಭರಪೂರವಾಗಿದೆ. ಆಂಧ್ರಪ್ರದೇಶದಲ್ಲಿ ‘ಕೆಜಿಎಫ್’ ದಾಖಲೆಯನ್ನೇ ಈ ಸಿನಿಮಾ ಮುರಿದಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಅದ್ದೂರಿ ರಿಲೀಸ್, ಲೈವ್ ಅಪ್​​ಡೇಟ್ ಇಲ್ಲಿದೆ

ಅಂತಾರಾಷ್ಟ್ರೀಯ ಮಟ್ಟದಲ್ಲೂ ‘ಟಾಕ್ಸಿಕ್’ ಕ್ರೇಜ್ ಹೆಚ್ಚಾಗಿದೆ. ಯುಕೆ ಒಂದರಲ್ಲೇ 400 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಇದು ಕನ್ನಡ ಸಿನಿಮಾರಂಗದ ಮಟ್ಟಿಗೆ ಐತಿಹಾಸಿಕ ಸಾಧನೆಯಾಗಿದೆ. ಅಮೆರಿಕದಲ್ಲೂ ಕನ್ನಡ ಮತ್ತು ತೆಲುಗು ಆವೃತ್ತಿಗಳಿಗೆ ಭಾರಿ ಬೇಡಿಕೆ ಬಂದಿದೆ. ಬುಕ್‌ಮೈಶೋನಲ್ಲಿ ಈಗಾಗಲೇ 7 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ‘ಕಲ್ಕಿ’ ಮತ್ತು ‘ಜವಾನ್’ ಸಿನಿಮಾಗಳ ದಾಖಲೆಯನ್ನು ಮುರಿದು ‘ಟಾಕ್ಸಿಕ್’ ಮುನ್ನುಗ್ಗುತ್ತಿದೆ. ಯಶ್ ಅವರ ಮಾಸ್ ಇಮೇಜ್ ಹಾಗೂ ಅದ್ಭುತ ತಾರಾಗಣವೇ ಈ ಸಂಚಲನಕ್ಕೆ ಮುಖ್ಯ ಕಾರಣವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Published On - 6:48 am, Wed, 26 August 26

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us