AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಅಲೆಗೆ ಹೆದರಿದ ನಾನಿ; ‘ಪ್ಯಾರಡೈಸ್’ ರಿಲೀಸ್ ಮುಂದಕ್ಕೆ

ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾದ ಕ್ರೇಜ್‌ಗೆ ಹೆದರಿ ನಟ ನಾನಿ ಅಭಿನಯದ 'ದಿ ಪ್ಯಾರಡೈಸ್' ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ಆಗಸ್ಟ್ 21ರಂದು ತೆರೆಗೆ ಬರಬೇಕಿದ್ದ ಈ ಚಿತ್ರವು, 'ಟಾಕ್ಸಿಕ್' ಹವಾ ಎದುರಿಸಲಾಗದೆ ಸೆಪ್ಟೆಂಬರ್ 24ಕ್ಕೆ ಮುಂದಕ್ಕೆ ಹೋಗಿದ್ದು, ಯಶ್ ಸಿನಿಮಾದ ಭಾರಿ ಕ್ರೇಜ್‌ಗೆ ಸಾಕ್ಷಿಯಾಗಿದೆ.

'ಟಾಕ್ಸಿಕ್' ಅಲೆಗೆ ಹೆದರಿದ ನಾನಿ; 'ಪ್ಯಾರಡೈಸ್' ರಿಲೀಸ್ ಮುಂದಕ್ಕೆ
ನಾನಿ-ಯಶ್
ರಾಜೇಶ್ ಹೆಗಡೆ ದುಗ್ಗುಮನೆ
|

Updated on:Aug 07, 2026 | 7:36 AM

Share

ಮುಖ್ಯಾಂಶಗಳು

  • ರಾಕಿಂಗ್ ಸ್ಟಾರ್ ಯಶ್ ಕ್ರೇಜ್‌ಗೆ ಹಿಂದೆ ಸರಿಯಿತಾ 'ದಿ ಪ್ಯಾರಡೈಸ್'?
  • ಆಗಸ್ಟ್ 21ರಿಂದ ಸೆಪ್ಟೆಂಬರ್ 24ಕ್ಕೆ ಓಡಿದ ನಾನಿ ಸಿನಿಮಾ
  • ಶೋಷಿತರ ದಂಗೆಯ ಕಥೆಯಲ್ಲಿ ರಗಡ್ ಲುಕ್‌ನಲ್ಲಿ ಅಬ್ಬರಿಸಿದ ನಾನಿ

ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸಿನಿಮಾ ಬಿಡುಗಡೆ ವಿಚಾರದಲ್ಲಿ ಈಗ ದೊಡ್ಡ ಬದಲಾವಣೆಯಾಗಿದೆ. ಆರಂಭದಿಂದಲೂ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ಈ ಚಿತ್ರದ ರಿಲೀಸ್ ದಿನಾಂಕ ದಿಢೀರ್ ಮುಂದಕ್ಕೆ ಹೋಗಿದ್ದು, ಇದಕ್ಕೆ ಗಾಂಧಿನಗರ ಹಾಗೂ ಟಾಲಿವುಡ್ ಅಂಗಳದಲ್ಲಿ ‘ಟಾಕ್ಸಿಕ್’ ಸಿನಿಮಾದ (Toxic Movie) ಹವಾನೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಆಗಸ್ಟ್‌ನಿಂದ ಸೆಪ್ಟೆಂಬರ್‌ಗೆ ಓಡಿದ ‘ದಿ ಪ್ಯಾರಡೈಸ್’!

ನಾನಿ ಮತ್ತು ‘ದಸರಾ’ ನಿರ್ದೇಶಕ ಶ್ರೀಕಾಂತ್ ಒಡೇಲಾ ಕಾಂಬಿನೇಷನ್‌ನ ‘ದಿ ಪ್ಯಾರಡೈಸ್’ ಚಿತ್ರವನ್ನು ಮೊದಲು ಆಗಸ್ಟ್ 21ರಂದು ಅದ್ದೂರಿಯಾಗಿ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ, ಆಗಸ್ಟ್ 26ಕ್ಕೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗುತ್ತಿದೆ. ಕೇವಲ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ‘ಟಾಕ್ಸಿಕ್’ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಹೀಗಾಗಿ, ‘ಟಾಕ್ಸಿಕ್’ ಸಿನಿಮಾಗೆ ಎದುರು ನಿಲ್ಲಲು ‘ದಿ ಪ್ಯಾರಡೈಸ್’ ಚಿತ್ರ ಭಯ ಬಿದ್ದಂತಿದೆ. ಹೀಗಾಗಿಯೇ ಯಾವುದೇ ರಿಸ್ಕ್ ಬೇಡ ಎಂದು ಭಾವಿಸಿ, ಚಿತ್ರವನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಲಾಗಿದೆ. ಟೀಸರ್​ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.

‘ಟಾಕ್ಸಿಕ್’ ಸಿನಿಮಾದ ಹವಾ

ಈ ಒಂದೇ ಒಂದು ನಿರ್ಧಾರದಿಂದ ‘ಟಾಕ್ಸಿಕ್’ ಸಿನಿಮಾದ ಕ್ರೇಜ್ ಮತ್ತು ಹವಾ ಎಷ್ಟರ ಮಟ್ಟಿಗಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಲು ರೆಡಿಯಾಗಿರುವ ‘ಟಾಕ್ಸಿಕ್’ ಸಿನಿಮಾದ ಬಾಕ್ಸ್ ಆಫೀಸ್ ಸುನಾಮಿಗೆ ಎದುರಾದರೆ ತಮ್ಮ ಚಿತ್ರದ ಕಲೆಕ್ಷನ್‌ಗೆ ಪೆಟ್ಟು ಬೀಳಬಹುದು ಎಂಬ ಭೀತಿಯಿಂದ ನಾನಿ ತಂಡ ಈ ಹಿಂದೆ ಹೆಜ್ಜೆ ಇಟ್ಟಿದೆ ಎನ್ನಲಾಗುತ್ತಿದೆ.

ಧೂಳೆಬ್ಬಿಸುತ್ತಿದೆ ‘ದಿ ಪ್ಯಾರಡೈಸ್’ ಟೀಸರ್

ಇನ್ನು ಬಿಡುಗಡೆಯಾಗಿರುವ ಟೀಸರ್ ವಿಷಯಕ್ಕೆ ಬಂದರೆ, ‘ದಿ ಪ್ಯಾರಡೈಸ್’ ಟೀಸರ್ ಗಮನ ಸೆಳೆದಿದೆ. ನಾನಿ ಉದ್ದನೆಯ ಜಡೆ, ರಕ್ತ-ಮಣ್ಣಿನಿಂದ ಕೂಡಿದ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಹಿನ್ನೆಲೆ ಸಂಗೀತ ದೃಶ್ಯಗಳ ಕಾವು ಹೆಚ್ಚಿಸಿದೆ.

ಇದನ್ನೂ ಓದಿ: ಗೂಗ್ಲಿಯಲ್ಲಿ ಯಶ್​​ಗೆ ಬರೆದ ಡೈಲಾಗ್ ನಿಜವಾಯ್ತು; ಜಾಗತಿಕ ಮಟ್ಟದಲ್ಲಿ ಟಾಕ್ಸಿಕ್ ಹವಾ

ಟಾಕ್ಸಿಕ್ ಬಗ್ಗೆ

ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಟಾಕ್ಸಿಕ್’ ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದಾರೆ. ಈ ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾದಲ್ಲಿ ಯಶ್ ಜೊತೆಗೆ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಖ್ಯಾತ ತಾರೆಯರಾದ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಾಂತ್ರಿಕವಾಗಿ ಅತ್ಯಂತ ಶ್ರೀಮಂತವಾಗಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ಸ್ ಜಂಟಿಯಾಗಿ ಬಂಡವಾಳ ಹೂಡುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:36 am, Fri, 7 August 26

Follow Us
ರಾಜೇಶ್ ಹೆಗಡೆ ದುಗ್ಗುಮನೆ
ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್