‘ಧುರಂಧರ್ 2’ ಚಿತ್ರವನ್ನು‘ಟಾಕ್ಸಿಕ್’ ಕಬಳಿಸಿಯಾಗಿದೆ; ಹಿಂದಿ ಮಂದಿಯ ಅಭಿಪ್ರಾಯ

'ಧುರಂಧರ್ 2' ಟೀಸರ್ ಹಳೆಯ ವಿಷಯವನ್ನೇ ತೋರಿಸಿದ್ದರಿಂದ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಇದೇ ವೇಳೆ ಯಶ್ ನಟನೆಯ 'ಟಾಕ್ಸಿಕ್' ಟೀಸರ್‌ಗೆ ಭಾರಿ ಹೈಪ್ ಸೃಷ್ಟಿಯಾಗಿದೆ. ಹಿಂದಿ ಪ್ರೇಕ್ಷಕರೂ 'ಟಾಕ್ಸಿಕ್' ಕಡೆಗೆ ಒಲವು ತೋರುತ್ತಿದ್ದಾರೆ. ಮಾರ್ಚ್ 19ರಂದು ಬಿಡುಗಡೆಯಾಗಲಿರುವ ಈ ಎರಡು ಪ್ಯಾನ್ ಇಂಡಿಯಾ ಚಿತ್ರಗಳ ಬಾಕ್ಸ್ ಆಫೀಸ್ ಪೈಪೋಟಿಯಲ್ಲಿ 'ಟಾಕ್ಸಿಕ್' ಮುಂದಿದೆ ಎಂಬ ಮಾತು ಕೇಳಿಬರುತ್ತಿದೆ.

‘ಧುರಂಧರ್ 2’ ಚಿತ್ರವನ್ನು‘ಟಾಕ್ಸಿಕ್’ ಕಬಳಿಸಿಯಾಗಿದೆ; ಹಿಂದಿ ಮಂದಿಯ ಅಭಿಪ್ರಾಯ
ರಣವೀರ್-ಯಶ್

Updated on: Feb 04, 2026 | 7:38 AM

‘ಧುರಂಧರ್ 2’ ಸಿನಿಮಾದ ಟೀಸರ್ (Dhurandhar 2) ನೋಡಿದ ಅನೇಕರು ಬೇಸರ ಹೊರಹಾಕಿದ್ದಾರೆ. ಇದಕ್ಕೆ ಕಾರಣ ಹಳೆಯ ವಿಷಯವನ್ನೇ ತೋರಿಸಿದ್ದು. ‘ಧುರಂಧರ್’ ಸಿನಿಮಾ ಕೊನೆಯಲ್ಲಿ ತೋರಿಸಿದ ದೃಶ್ಯವನ್ನೇ ಮತ್ತೊಮ್ಮೆ ಟೀಸರ್ ಎಂದು ಬಿಡಲಾಗಿದೆ. ಈ ಎಲ್ಲಾ ಕಾರಣದಿಂದ ಸಿನಿಮಾಗೆ ಹಿನ್ನಡೆ ಆಗಿದೆ. ಈ ಮಧ್ಯೆ ರಣವೀರ್ ಚಿತ್ರಕ್ಕಿಂತ ಯಶ್ ನಟನೆಯ ‘ಟಾಕ್ಸಿಕ್’ ಮೇಲು ಎಂದು ಹಿಂದಿಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಯಶ್ ಚಿತ್ರದ ಹೆಚ್ಚುಗಾರಿಕೆ ಎಂದು ಯಶ್ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.

ಬಾಕ್ಸ್ ಆಫೀಸ್​ನಲ್ಲಿ ಮಾರ್ಚ್ 19ರಂದು ‘ಧುರಂಧರ್ 2’ ಹಾಗೂ ‘ಟಾಕ್ಸಿಕ್’ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಗಾಗಲೇ ‘ಧುರಂಧರ್’ ಚಿತ್ರ ತನ್ನನ್ನು ತಾನು ಸಾಬೀತು ಮಾಡಿಕೊಂಡಿದೆ. ಈ ಚಿತ್ರ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಕೂಡ ಮಾಡಿದೆ. ಇದು ಸೀಕ್ವೆಲ್ ಬಗ್ಗೆ ನಿರೀಕ್ಷೆ ಹುಟ್ಟುಹಾಕಲು ಸಹಕಾರಿ ಆಗಿದೆ. ಆದರೆ, ಬಿಡುಗಡೆ ಆದ ಟೀಸರ್ ನಿರಾಸೆ ಮೂಡಿಸಿದೆ. ಆದರೆ, ‘ಟಾಕ್ಸಿಕ್’ ಟೀಸರ್ ಸೃಷ್ಟಿಸಿದ್ದ ಹವಾ ಬೇರೆಯದೇ ರೀತಿಯಲ್ಲಿ ಇದೆ. ಹೀಗಾಗಿ ರೇಸ್​​ನಲ್ಲಿ ‘ಟಾಕ್ಸಿಕ್’ ಮುಂದಿದೆ.

ಇದನ್ನೂ ಓದಿ: ‘ಧುರಂಧರ್ 2’ ಪೋಸ್ಟರ್​ಗೆ ಯಶ್ ಸಿನಿಮಾ ಸ್ಫೂರ್ತಿ? ಟ್ರೆಂಡ್ ಸೆಟ್ಟರ್ ಆದ ರಾಕಿಭಾಯ್

ಹಿಂದಿ ಯೂಟ್ಯೂಬರ್​​ಗಳು ಅಲ್ಲಿನ ಪ್ರೇಕ್ಷಕರ ಬಳಿ ‘ಧುರಂಧರ್ 2’ ಬೆಸ್ಟ್ ಅಥವಾ ‘ಟಾಕ್ಸಿಕ್’ ಬೆಸ್ಟ್ ಎಂದು ಕೇಳಿದ್ದಾರೆ. ಇದಕ್ಕೆ ‘ಟಾಕ್ಸಿಕ್’ ಎಂಬ ಉತ್ತರವನ್ನು ಪ್ರೇಕ್ಷಕರು ನೀಡಿದ್ದಾರೆ. ‘ಧುರಂಧರ್ ಸೀಕ್ವೆಲ್​ನ ಟೀಸರ್ ನೋಡಿದೆ. ಮತ್ತೆ ಮತ್ತೆ ಅದನ್ನೇ ತೋರಿಸಿದರೆ ಯಾರಿಗೆ ಇಷ್ಟ ಆಗುತ್ತದೆ ಹೇಳಿ? ಧುರಂಧರ್ ಎಂಡ್ ಕಾರ್ಡ್ ದೃಶ್ಯಗಳನ್ನು ಟೀಸರ್ ಎಂದು ಬಿಡುಗಡೆ ಮಾಡಲಾಗಿದೆ. ಹೀಗಾಗಿ, ಟಾಕ್ಸಿಕ್ ಸಿನಿಮಾ ಗೆಲ್ಲಬಹುದು ಎಂದು ಅನಿಸುತ್ತಿದೆ’ ಎಂದು ಕೆಲವರು ಹೇಳಿದ್ದಾರೆ. ‘ಮೊದಲ ದಿನ ಟಾಕ್ಸಿಕ್ ಸಿನಿಮಾ ನೋಡೋದು’ ಎನ್ನುತ್ತಾರೆ ಅವರು.


‘ಟಾಕ್ಸಿಕ್ ಸಿನಿಮಾ ಈಗಾಗಲೇ ಧುರಂಧರ್ ಚಿತ್ರವನ್ನು ನುಂಗಿ ಹಾಕಿಯಾಗಿದೆ. ಮತ್ತೆ ಈ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಟಾಕ್ಸಿಕ್ ಸಿನಿಮಾ ಮುಂದೆ ಹೋಗುತ್ತದೆ’ ಎಂದು ಹಿಂದಿ ಫ್ಯಾನ್ಸ್ ಹೇಳಿಕೊಂಡಿದ್ದಾರೆ. ‘ಟಾಕ್ಸಿಕ್’ ಹಾಗೂ ‘ಧುರಂಧರ್ 2’ ಚಿತ್ರಗಳು ಮಾರ್ಚ್ 19ರಂದು ತೆರೆಗೆ ಬರಲಿವೆ. ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಕಾಣಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us