3 ಪೆಡ್ಲರ್​ಗಳಿಗೆ Drugs ಆರ್ಡರ್​ ಮಾಡಿದ್ದ ನಶೆ ರಾಣಿಯರ ‘ಕಾಲ್​’ ಶೀಟ್ ಬಯಲು

| Updated By: ಸಾಧು ಶ್ರೀನಾಥ್​

Updated on: Oct 08, 2020 | 10:59 AM

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ ಡೀಲ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಬಂಧನದಲ್ಲಿರುವ ನಟಿಯರು ಹಾಗೂ ಡ್ರಗ್​​ ಪೆಡ್ಲರ್​ಗಳ ನಡುವಿನ ಕಾಲ್​ ಡೀಟೇಲ್ಸ್​ ಗಳ ರಹಸ್ಯವನ್ನು ಟಿವಿ 9 ಬಿಚ್ಚಿಟ್ಟಿದೆ. ಟಿವಿ 9ಗೆ ಆರೋಪಿಗಳ ಡೀಲ್​ನ ಫೋನ್​ ಕಾಲ್ ಡಿಟೇಲ್ಸ್ ಲಭ್ಯವಾಗಿದೆ. ಬಂಧಿತ 3 ಇಂಟರ್​ನ್ಯಾಷನಲ್ ಪೆಡ್ಲರ್​ಗಳ ಜೊತೆ ಆರೋಪಿಗಳ ಕಾಂಟ್ಯಾಕ್ಟ್ ಟಿವಿ 9 ರಿವೀಲ್ ಮಾಡಿದೆ. ಲೂಮ್ ಪೆಪ್ಪರ್, ಉಡೇನ್, ಓಸ್ಸಿ ಫಿಲಿಪ್ ಜೊತೆ ಇತರ ಆರೋಪಿಗಳ ನಿರಂತರ ಸಂಪರ್ಕ ಹೊಂದಿದ್ದು ಪೆಡ್ಲರ್​ಗಳ ಕಾಲ್ ಡಿಟೇಲ್ಸ್​ನಲ್ಲಿ […]

3 ಪೆಡ್ಲರ್​ಗಳಿಗೆ Drugs ಆರ್ಡರ್​ ಮಾಡಿದ್ದ ನಶೆ ರಾಣಿಯರ ‘ಕಾಲ್​’ ಶೀಟ್ ಬಯಲು
Follow us on

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ ಡೀಲ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಬಂಧನದಲ್ಲಿರುವ ನಟಿಯರು ಹಾಗೂ ಡ್ರಗ್​​ ಪೆಡ್ಲರ್​ಗಳ ನಡುವಿನ ಕಾಲ್​ ಡೀಟೇಲ್ಸ್​ ಗಳ ರಹಸ್ಯವನ್ನು ಟಿವಿ 9 ಬಿಚ್ಚಿಟ್ಟಿದೆ. ಟಿವಿ 9ಗೆ ಆರೋಪಿಗಳ ಡೀಲ್​ನ ಫೋನ್​ ಕಾಲ್ ಡಿಟೇಲ್ಸ್ ಲಭ್ಯವಾಗಿದೆ. ಬಂಧಿತ 3 ಇಂಟರ್​ನ್ಯಾಷನಲ್ ಪೆಡ್ಲರ್​ಗಳ ಜೊತೆ ಆರೋಪಿಗಳ ಕಾಂಟ್ಯಾಕ್ಟ್ ಟಿವಿ 9 ರಿವೀಲ್ ಮಾಡಿದೆ.

ಲೂಮ್ ಪೆಪ್ಪರ್, ಉಡೇನ್, ಓಸ್ಸಿ ಫಿಲಿಪ್ ಜೊತೆ ಇತರ ಆರೋಪಿಗಳ ನಿರಂತರ ಸಂಪರ್ಕ ಹೊಂದಿದ್ದು ಪೆಡ್ಲರ್​ಗಳ ಕಾಲ್ ಡಿಟೇಲ್ಸ್​ನಲ್ಲಿ ಬಂಧಿತ ನಾಲ್ವರು ಆರೋಪಿಗಳೇ ಹೆಚ್ಚಿನ ಸಂಪರ್ಕ ಹೊಂದಿದ್ದಾರೆ. ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ವಿರೇನ್ ಖನ್ನಾ ಹಾಗೂ ವೈಭವ್ ಜೈನ್ ಮೂವರು ಅಂತಾರಾಷ್ಟ್ರೀಯ ಪೆಡ್ಲರ್​ಗಳ ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ.

ಲಾಕ್​ಡೌನ್ ಕಾಲದ 4 ತಿಂಗಳಲ್ಲಿ ಕೆಲವರದ್ದು 100 ಕಾಲ್ ಗಳಾದರೇ ಮತ್ತೆ ಕೆಲವರದ್ದು 50ರ ಆಸುಪಾಸಿನಲ್ಲಿದೆ. ಜೊತೆಗೆ, ಮೂವರಿಂದ ಡ್ರಗ್ ಪಡೆದು ಸಬ್ ಪೆಡ್ಲಿಂಗ್ ಮಾಡಿರುವ ಮಾಹಿತಿ ಸಹ ಸಿಕ್ಕಿದೆ.

ರಾಗಿಣಿ ಕಾಲ್ ಡಿಟೇಲ್ಸ್​ನಲ್ಲಿ ಲೂಮ್ ಪೆಪ್ಪರ್​ಗೆ 109 ಕಾಲ್ಸ್, ಉಡೇನ್​ಗೆ 70 ಕಾಲ್ಸ್ ಹಾಗೂ ಓಸ್ಸಿಗೆ 98 ಕಾಲ್ಸ್ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಇತ್ತ ಸಂಜನಾ ಉಡೇನ್​ಗೆ 120 ಕಾಲ್ಸ್, ಪೆಪ್ಪರ್​ಗೆ 79 ಕಾಲ್ಸ್ ಹಾಗೂ ಓಸ್ಸಿಗೆ 86 ಕಾಲ್ಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇತ್ತ ಮತ್ತೊಬ್ಬ ಆರೋಪಿ ವಿರೇನ್ ಖನ್ನಾ ಕಾಲ್ ಡಿಟೇಲ್ಸ್ ಸಹ ಲಭ್ಯವಾಗಿದ್ದು ಆತ ಪೆಪ್ಪರ್​ಗೆ 87 ಕಾಲ್ಸ್, ಓಸ್ಸಿಗೆ 73 ಕಾಲ್ಸ್ ಮತ್ತು ಉಡೇನ್​ಗೆ 53 ಕಾಲ್ಸ್ ಮಾಡಿದ್ದಾನೆ ಎಂದು ಹೇಳಲಾಗಿದೆ. ಇತ್ತು ಆರೋಪಿ ವೈಭವ್ ಜೈನ್ ಕಾಲ್ ಡಿಟೇಲ್ಸ್ ಸಹ ಸಿಕ್ಕಿದೆ. ಆತ ಪೆಪ್ಪರ್​ಗೆ 138 ಕಾಲ್ಸ್, ಓಸ್ಸಿಗೆ 99 ಕಾಲ್ಸ್ ಮತ್ತು ಉಡೇನ್​ಗೆ 69 ಕಾಲ್ಸ್ ಮಾಡಿದ್ದಾನೆ.

ಇನ್ನುಳಿದ ಆರೋಪಿಗಳು ಹಾಫ್​ ಸೆಂಟ್ಯೂರಿ ಬಾರಿಸಿದ್ದು ಸುಮಾರು 50 ಕ್ಕೂ ಹೆಚ್ಚು ಕರೆಗಳು ಮಾಡಿರೋದು ಪತ್ತೆಯಾಗಿದೆ. ಎಲ್ಲಾ ಆರೋಪಿಗಳು ಪಾರ್ಟಿಗಳಿಗೆ ಡ್ರಗ್ ಸಪ್ಲೈ ಮಾಡಲು ಈ ಮೂವರಿಂದ ಖರೀದಿ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಇನ್ನು ಈ CDRನ ಟೆಕ್ನಿಕಲ್ ಅನಾಲಿಸಿಸ್ ಮಾಡಿ ಸಾಂದರ್ಭಿಕ ಸಾಕ್ಷಿಯಾಗಿ ಸಿಸಿಬಿ ಅಧಿಕಾರಿಗಳು ಮಾಡಿದ್ದಾರೆ. ಇನ್ನು ಇದರಲ್ಲಿ ರಾಗಿಣಿ ಪರವಾಗಿ ಕೆಲವೊಮ್ಮೆ ರವಿಶಂಕರ್ ಸಹ ಪಡ್ಲರ್​ಗಳನ್ನು ಸಂಪರ್ಕಿಸಿದರೆ ಸಂಜನಾ ಗಲ್ರಾನಿ ಪರವಾಗಿ ಕೆಲವೊಮ್ಮೆ ರಾಹುಲ್​ ಸಂಪರ್ಕ ಮಾಡಿದ್ದಾನೆ. ಹಾಗೇ, ವಿರೇನ್ ಖನ್ನ ಪರವಾಗಿ ಪ್ರಶಾಂತ್ ರಂಕಾ ಸಹ ಸಂಪರ್ಕ ಮಾಡಿದ್ದಾನೆ. ಜೊತೆಗೆ, ವೈಭವ್ ಜೈನ್ ಪರವಾಗಿ ಪ್ರತೀಕ್ ಶೆಟ್ಟಿ ಸಹ ಸಂಪರ್ಕ ಪತ್ತೆಯಾಗಿದೆ.