‘ಆ ದಿನಗಳು’ ಅಂದ್ರೆ ಕೊರೊನಾ ಅಟಕಾಯಿಸಿಕೊಳ್ಳುವುದಕ್ಕೆ ಮುನ್ನಾ ಕಾಲ ಸುಭಿಕ್ಷವಾಗಿತ್ತು. ಚೆಂದದ ಜೀವನ ಸಾಗಿಸೋಣ ಅಂತಾ ಸಾಲ ಮಾಡಿ ಕಾರು ಖರೀದಿಸಿದ್ದೆ. ಆದ್ರೆ ಈಗ ಸಾಲದ ಕಂತುಗಳನ್ನು ಕಟ್ಟೋಕ್ಕೆ ಆಗುತ್ತಿಲ್ಲ. ಹಾಗಾಗಿ ನನ್ನ ಕಾರನ್ನು ಮಾರಿಬಿಟ್ಟೆ ಅಂತಾ ಕಿರುತೆರೆಯ ನಟರೊಬ್ಬರು ತಮ್ಮ ಆರ್ಥಿಕ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ! Thanks to CoronaVirus ಇದು ದೇಶ, ಜಗತ್ತಿನಲ್ಲಿ ಬಹುತೇಕ ಎಲ್ಲರ ದೀನಸ್ಥಿತಿಯೂ ಆಗಿದೆ ಅನ್ನಬಹುದು.
ಬಾಂಬೆಯಲ್ಲಿ ದುಡ್ಡಿಲ್ಲದೆ ಬದುಕೋದು ಕಷ್ಟ ಕಷ್ಟ
ಹೌದು, ಮುಂಬೈನಲ್ಲಿ ಟಿವಿ ನಟ ಮಾನಸ್ ಶಾ ನಟಿಸುತ್ತಿರುವ ‘ಹಮಾರಿ ಬಹು ಸಿಲ್ಕ್’ ಷೋ ನಿರ್ಮಾಪಕರು ಕೊರೊನಾದಿಂದಾಗಿ ತಮಗೆ ಪೇಮೆಂಟ್ ನೀಡಿಲ್ಲ. ಹಾಗಾಗಿ ಆರ್ಥಿಕವಾಗಿ ನನ್ನ ಜೀವನ ಕಷ್ಟಕ್ಕೆ ಸಿಲುಕಿದೆ. ನಾನು ನನ್ನ ನೆಚ್ಚಿನ ಕಾರನ್ನು ಮಾರಿ, ಜೀವನ ನಡೆಸಬೇಕಿದೆ. ನಾನು ಬಾಡಿಗೆ ಮನೆಯಲ್ಲಿದ್ದೆ. ಅದನ್ನೂ ತೊರೆದು ಈಗ ಲೋಖಂಡವಾಲಾದಲ್ಲಿರುವ ನನ್ನ ಸಂಬಂಧಿಯ ಮನೆಯಲ್ಲಿ ತಂಗಲು ಹೋಗಬೇಕಿದೆ ಎಂದು ಅಲವತ್ತುಕೊಂಡಿದ್ದಾರೆ.
ಭವಿಷ್ಯದಲ್ಲಿ ಇನ್ನೂ ಏನೆಲ್ಲ ಅನುಭವಿಸಬೇಕೋ
ಕಳೆದ ವರ್ಷ ಮೇ 2 ರಿಂದ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದೆ. ಆದ್ರೆ 2019ರ ಅಕ್ಟೋಬರ್ ತಿಂಗಳಿಂದ ನಮಗೆ ಪೇಮೆಂಟ್ ಆಗಿಲ್ಲ. ನನ್ನೂರು ಅಹಮದಾಬಾದಿನಲ್ಲಿರುವ ಅಪ್ಪ-ಅಮ್ಮ ಇದ್ದಾರೆ. ಅವರನ್ನೂ ನಾನು ನೋಡಿಕೊಳ್ಳಬೇಕಿದೆ. ಭವಿಷ್ಯದಲ್ಲಿ ಇನ್ನೂ ಏನೆಲ್ಲ ಅನುಭವಿಸಬೇಕೋ ಎಂದು ಚಿಂತಿಸುತ್ತಾ ನಟ ಮಾನಸ್ ಶಾ ಶೂನ್ಯದಲ್ಲಿ ಕಣ್ಣು ನೆಟ್ಟರು.