ಅಂಬಿ ಹುಟ್ಟುಹಬ್ಬಕ್ಕೆ ಅಭಿಷೇಕ್-ಸೂರಿ ‘ಬ್ಯಾಡ್ ಮ್ಯಾನರ್ಸ್’
ರೆಬೆಲ್ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ ಲಾಂಚ್ ಆಗಿದೆ. ದುನಿಯಾ ಸೂರಿ ನಿರ್ದೇಶನದ ಈ ಸಿನಿಮಾದಲ್ಲಿ ಅಭಿಷೇಕ್ ರಗಡ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗ್ಲೇ ಚಿತ್ರ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಚಿತ್ರಕ್ಕೆ ಬ್ಯಾಡ್ ಮ್ಯಾನರ್ಸ್ ಅಂತ ಟೈಟಲ್ ಇಡಲಾಗಿದೆ. ಬ್ಯಾಡ್ ಮ್ಯಾನರ್ಸ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಹೊರಬಂದಿದ್ದು, ಅಂಬಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇದ್ರೊಂದಿಗೆ ರೆಬೆಲ್ ಸ್ಟಾರ್ ಅಂಬರೀಶ್ ಅವ್ರ ಹುಟ್ಟುಹಬ್ಬದ ದಿನ, ಅಂದ್ರೆ ಮೇ 29ರಂದು ಈ ಚಿತ್ರದ […]
ರೆಬೆಲ್ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ ಲಾಂಚ್ ಆಗಿದೆ. ದುನಿಯಾ ಸೂರಿ ನಿರ್ದೇಶನದ ಈ ಸಿನಿಮಾದಲ್ಲಿ ಅಭಿಷೇಕ್ ರಗಡ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗ್ಲೇ ಚಿತ್ರ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಚಿತ್ರಕ್ಕೆ ಬ್ಯಾಡ್ ಮ್ಯಾನರ್ಸ್ ಅಂತ ಟೈಟಲ್ ಇಡಲಾಗಿದೆ.
ಬ್ಯಾಡ್ ಮ್ಯಾನರ್ಸ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಹೊರಬಂದಿದ್ದು, ಅಂಬಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇದ್ರೊಂದಿಗೆ ರೆಬೆಲ್ ಸ್ಟಾರ್ ಅಂಬರೀಶ್ ಅವ್ರ ಹುಟ್ಟುಹಬ್ಬದ ದಿನ, ಅಂದ್ರೆ ಮೇ 29ರಂದು ಈ ಚಿತ್ರದ ಮೋಷನ್ ಪೋಸ್ಟರ್ ನ ರಿಲೀಸ್ ಮಾಡಿ ಸಿನಿಮಾಗೆ ಚಾಲನೆ ನೀಡಲಿದ್ದಾರೆ.
ಈ ಚಿತ್ರವನ್ನ ಪಾಪ್ ಕಾರ್ನ್ ಮಂಕಿಟೈಗರ್ ಸಿನಿಮಾದ ನಿರ್ಮಾಪಕ ಸುಧೀರ್ ಕೆ.ಎಂ ನಿರ್ಮಾಣ ಮಾಡ್ತಿದ್ದಾರೆ. ಶೇಖರ್ ಛಾಯಾಗ್ರಹಣ, ಚರಣ್ ರಾಜ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನವಿದೆ. ಮತ್ತೊಂದು ಸುಕ್ಕಾ ಸೂರಿಯ ಸಿನಿಮಾಗೆ ಸುರೇಂದ್ರನಾಥ್ ಅವರ ಕಥೆಯಿದೆ. ಒಟ್ಟಾರೆ, ಅಮರ್ ಬಳಿಕ ಎರಡನೇ ಅಭಿಷೇಕ್ ಸಿನಿಮಾಗೆ ರೆಡಿಯಾಗಿದ್ದಾರೆ. ಗನ್ ಹಿಡಿದು ಅಪ್ಪನನ ಹಾಗೆ ರೆಬೆಲ್ ಲುಕ್ ಕೊಟ್ಟಿದ್ದಾರೆ. ಹೀಗಾಗಿ ಸಹಜವಾಗೇ ರೆಬೆಲ್ ಫ್ಯಾನ್ಸ್ಗೆ ಸಿನಿಮಾ ಬಗ್ಗೆ ಕೂತೂಹಲ ದುಪ್ಪಟ್ಟಾಗಿದೆ.
Published On - 6:51 pm, Wed, 27 May 20