ಸೌಥ್ ಸಿನಿಲೋಕದ ಚೆಲುವೆ, ಟಾಲಿವುಡ್ ಸ್ವೀಟಿ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಅನೇಕ ವರ್ಷಗಳಿಂದ ಸದ್ದು ಮಾಡುತ್ತಲೇ ಇದೆ. ಈಗ ಅನುಷ್ಕಾ ಶೆಟ್ಟಿ ಮದುವೆ ವಿಚಾರವಾಗಿ ಹೊಸ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಈ ಬಾರಿ ಅನುಷ್ಕಾ ಮದುವೆ ಪಕ್ಕಾ ಅನ್ನೋ ಸುದ್ದಿ ಟಾಲಿವುಡ್ನಲ್ಲಿ ಹರಿದಾಡ್ತಾ ಇದೆ.
ಅನುಷ್ಕಾ ಶೆಟ್ಟಿ… ಕರಾವಳಿ ಬೆಡಗಿ… ಟಾಲಿವುಡ್ನಲ್ಲಿ ಮೋಡಿ ಮಾಡಿರೋ ಕನ್ನಡತಿ… ತೆಲುಗಿನಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನ ನೀಡಿರೋ ಅನುಷ್ಕಾ ಸಿನಿಮಾಗಳಿಗಿಂತ ಹೆಚ್ಚಾಗಿ ಮ್ಯಾರೇಜ್ ವಿಚಾರಕ್ಕೇ ಹೆಚ್ಚು ಸುದ್ದಿಯಾಗ್ತಾರೆ. ಅನುಷ್ಕಾ ಅವ್ರನ್ನ ವರಿಸ್ತಾರೆ… ಇವ್ರನ್ನ ಮದುವೆ ಆಗ್ತಾರೆ ಅನ್ನೋ ಗಾಸಿಪ್ ಕಳೆದ ಐದಾರು ವರ್ಷಗಳಿಂದ ಹರಿದಾಡ್ತಾನೆ ಇದೆ. ಇದೀಗ ಮತ್ತೆ ಸ್ವೀಟಿ ಕೈ ಹಿಡಿಯೋ ವರ ಯಾರು ಅನ್ನೋ ವಿಚಾರ ಚರ್ಚೆಯಾಗ್ತಿದೆ.
ಟಾಲಿವುಡ್ ಸ್ವೀಟಿ ಹೆಸ್ರು ಖ್ಯಾತ ನಿರ್ದೇಶಕರೊಬ್ಬರ ಮಗನೊಂದಿಗೆ ಮದ್ವೆ ಆಗ್ತಾರೆ ಅನ್ನೋ ವಿಚಾರ ಸಂಚಲನ ಮೂಡಿಸಿದೆ.. ಅದು ಮತ್ಯಾರೂ ಅಲ್ಲಾ, ಟಾಲಿವುಡ್ ಲೆಜೆಂಡರಿ ನಿರ್ದೇಶಕ ರಾಘವೇಂದ್ರರಾವ್ ಪುತ್ರ ಪ್ರಕಾಶ್ ಕೊವೆಲಮುಡಿ. ಇವ್ರೊಂದಿಗೆ ಅನುಷ್ಕಾ ಸಪ್ತಪದಿ ತುಳಿಯಲಿದ್ದಾರೆ. ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ರು. ಈಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅನ್ನೋ ಗಾಸಿಪ್ ಹರಿದಾಡುತ್ತಿವೆ.
ಅನುಷ್ಕಾ ಪ್ರಕಾಶ್ ಕೈ ಹಿಡಿಯೋ ವಿಚಾರ ಈಗ ಎಲ್ಲೆಡೆ ಚರ್ಚೆಯಾಗ್ತಿದೆ. ಆದ್ರೆ, ಈ ಬಗ್ಗೆ ಅನುಷ್ಕಾ ಆಗಲಿ ಅಥವಾ ಪ್ರಕಾಶ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ, ಇದು ಕೂಡಾ ಗಾಳಿ ಸುದ್ದಿಯೋ ಅಥವಾ ಸ್ವೀಟಿ ನಿಜವಾಗ್ಲೂ ಹಸೆಮಣೆ ಏರ್ತಾರಾ ನೋಡಬೇಕಿದೆ.
Published On - 12:33 pm, Sun, 1 March 20