ಸೈನಿಕನಾಗಿ ‘ಗೆರಿಲ್ಲಾ ಯುದ್ಧ’ಕ್ಕೆ ಹೊರಟ ಉಪೇಂದ್ರ

Upendra movie: ಉಪೇಂದ್ರ ಸೆಪ್ಟೆಂಬರ್ 18ರಂದು ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲಿದ್ದಾರೆ. ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾದ ಘೋಷಣೆ ಮಾಡಲಾಗಿದೆ. ಓಂ ಪ್ರಕಾಶ್ ರಾವ್ ನಿರ್ದೇಶಿಸಿ, ಸಹ ನಿರ್ಮಾಣ ಮಾಡಲಿರುವ ಆಕ್ಷನ್ ಸಿನಿಮಾ ‘ಗೆರಿಲ್ಲಾ ವಾರ್’ ಸಿನಿಮಾನಲ್ಲಿ ಉಪ್ಪಿ ಸೈನಿಕನ ಪಾತ್ರದಲ್ಲಿ ನಟಿಸಲಿದ್ದಾರೆ.

ಸೈನಿಕನಾಗಿ ‘ಗೆರಿಲ್ಲಾ ಯುದ್ಧ’ಕ್ಕೆ ಹೊರಟ ಉಪೇಂದ್ರ
Guerilla War

Updated on: Sep 17, 2025 | 12:36 PM

ನಟ ಉಪೇಂದ್ರ (Upendra) ಹುಟ್ಟುಹಬ್ಬ ನಾಳೆ (ಸೆಪ್ಟೆಂಬರ್ 18) ಒಂದು ದಿನ ಮುಂಚಿತವಾಗಿ ಉಪೇಂದ್ರ ಅವರ ಹೊಸ ಸಿನಿಮಾ ಒಂದರ ಘೋಷಣೆ ಮಾಡಲಾಗಿದೆ. “AK 47”, “ಲಾಕಪ್ ಡೆತ್”, ” ಕಲಾಸಿಪಾಳ್ಯ”, “ಹುಚ್ಚ” ಸೇರಿದಂತೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ಇದೀಗ ನಟ ಉಪೇಂದ್ರ ಜೊತೆ ಕೈ ಜೋಡಿಸಿದ್ದು, ಹೊಸ ಸಿನಿಮಾ ಘೋಷಣೆ ಮಾಡಿದ್ದು, ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಉಪೇಂದ್ರ ಅವರಿಗೆ ಶುಭಾಶಯ ಕೋರಿದ್ದಾರೆ.

ಉಪೇಂದ್ರ ಅವರು ‘ಗೆರಿಲ್ಲಾ ವಾರ್’ ಹೆಸರಿನ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಸಿನಿಮಾನಲ್ಲಿ ಸೈನಿಕನ ಪಾತ್ರದಲ್ಲಿ ಉಪೇಂದ್ರ ಮಿಂಚಲಿದ್ದಾರೆ. ಇದು ಓಂ ಪ್ರಕಾಶ್ ನಿರ್ದೇಶನ ಮಾಡಲಿರುವ 50ನೇ ಆಗಿರುವುದು ಮತ್ತೊಂದು ವಿಶೇಷ. ‘ಗೆರಿಲ್ಲಾ ವಾರ್’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಪೋಸ್ಟರ್​​ನಲ್ಲಿ ಉಪೇಂದ್ರ ಸೈನಿಕರ ಸಮವಸ್ತ್ರ ಧರಿಸಿ ಅತ್ಯಾಧುನಿಕ ಬಂದೂಕು ಹಿಡಿದು ಯಾವುದೋ ಮಿಲಿಟರಿ ಆಪರೇಷನ್​​​ನಲ್ಲಿ ತೊಡಗಿದ್ದಾರೆ.

ಓಂಪ್ರಕಾಶ್ ರಾವ್ ಹಾಗೂ ಉಪೇಂದ್ರ ಒಟ್ಟಿಗೆ ಕೆಲಸ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಓಂ ಪ್ರಕಾಶ್ ರಾವ್ ನಿರ್ದೇಶಿಸಿರುವ ಇನ್ನೂ ಬಿಡುಗಡೆ ಆಗದ “ತ್ರಿಶೂಲಂ” ಸಿನಿಮಾನಲ್ಲಿ ಉಪೇಂದ್ರ ಅವರೇ ನಾಯಕ. ‘ತ್ರಿಶೂಲಂ’ ಸಿನಿಮಾ ಬಿಡುಗಡೆಗೆ ಮುಂಚೆಯೇ “ಗೆರಿಲ್ಲಾ ವಾರ್” ಸಿನಿಮಾ ಘೋಷಿಸಲಾಗಿದೆ.

ಇದನ್ನೂ ಓದಿ:ಪ್ರಿಯಾಂಕಾ ಉಪೇಂದ್ರ ಮಾಡಿದ ಒಂದೇ ತಪ್ಪಿನಿಂದ ಆಯ್ತು ಮೊಬೈಲ್ ಹ್ಯಾಕ್

“ಗೆರಿಲ್ಲಾ ವಾರ್” ಸಿನಿಮಾ ಅನ್ನು ಬೇಬಿ ಇಂಚರ ಅರ್ಪಿಸುತ್ತಿದ್ದು, ಎನ್ ಎಸ್ ರಾವ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಓಂಪ್ರಕಾಶ್ ರಾವ್ ಹಾಗೂ ಆರ್ ವಾಸುದೇವ ರೆಡ್ಡಿ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಡೆನ್ನಿಸಾ ಪ್ರಕಾಶ್ ಅವರು ಬರೆದಿರುವ ಕಥೆಗೆ ಓಂಪ್ರಕಾಶ್ ರಾವ್ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ಸಾಹಿತಿ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರು ಹಾಡುಗಳನ್ನು ಬರೆದು ಸಂಗೀತ ಸಂಯೋಜನೆ ಮಾಡಲಿದ್ದಾರೆ. ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ “ಗೆರಿಲ್ಲಾ ವಾರ್” ಚಿತ್ರಕ್ಕೆ ದೀಪು ಪಿ.ಆರ್ ಸಂಭಾಷಣೆ ಬರೆಯುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ.

ಉಪೇಂದ್ರ ಅವರಿಗೆ ನಾಯಕಿಯಾಗಿ ನಿಮಿಕಾ ರತ್ನಾಕರ್ ನಟಿಸುತ್ತಿದ್ದಾರೆ. ಈ ಹಿಂದೆ ಇವರು ‘ಕ್ರಾಂತಿ’, ‘ಮಿಸ್ಟರ್ ಬ್ಯಾಚುಲರ್’, ‘ರಾಮಧಾನ್ಯ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತರೆ ಪ್ರಮುಖ ಪಾತ್ರಗಳಲ್ಲಿ ರಂಗಾಯಣ ರಘು, ಸ್ವಸ್ತಿಕ್ ಶಂಕರ್, ಅಚ್ಯುತ್ ರಾವ್, ಭಾಸ್ಕರ್ ಶೆಟ್ಟಿ, ಆರಾಧ್ಯ, ಶ್ವೇತ ವೀರೇಶ್ ಮುಂತಾದವರು ನಟಿಸಲಿದ್ದಾರೆ.

“ಗೆರಿಲ್ಲಾ WAR” ಹೆಸರೇ ಹೇಳುವಂತೆ ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಆಗಿರಲಿದೆ. ವಿವಿಧ ದೇಶಗಳ ಸೈನ್ಯಗಳು ದೊಡ್ಡ ಪ್ರಮಾಣದ ವೈರಿಗಳನ್ನು ಎದುರಿಸಲು ಬಳಸುವ ‘ಗೆರಿಲ್ಲ ವಾರ್’ ಸಮರ ಪ್ರಾಕಾರವನ್ನು ಈ ಸಿನಿಮಾ ಆಧರಿಸಿದೆ. ಉಪೇಂದ್ರ ಅವರು ಈ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಸೈನಿಕ ಗಡಿ ಮಾತ್ರ ಕಾಯುವ ಸೈನಿಕನಲ್ಲ‌‌. ಪ್ರಸ್ತುತ ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಧೀಮಂತ ನಾಯಕ. ಈಗಿನ ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ಈ ಚಿತ್ರ ಮೂಡಿಬರಲಿದೆ ಎಂದು ನಿರ್ದೇಶಕ ಓಂಪ್ರಕಾಶ್ ರಾವ್ ತಿಳಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ