
ಸ್ಯಾಂಡಲ್ವುಡ್ಗೆ ಮಚ್ಚು, ಲಾಂಗ್ ಪರಿಚಯಿಸಿದ್ದೇ ಸೂಪರ್ಸ್ಟಾರ್ ಉಪೇಂದ್ರ ಎಂಬ ಮಾತಿದೆ. 1995ರಲ್ಲಿ ತೆರೆಕಂಡ ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರ ಬ್ಲಾಕ್ ಬ್ಲಸ್ಟರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಲಾಂಗ್ ಹಿಡಿದು ರೌಡಿ ಪಾತ್ರದಲ್ಲಿ ನಟಿಸಿದ್ರು.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ಒಟ್ಟು 5 ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಬಳಿಕ ದರ್ಶನ್ ನಟಿಸಿರುವ ‘ಕುರುಕ್ಷೇತ್ರ’ ಸಹ ಪಂಚ ಭಾಷೆಗಳಲ್ಲಿ ರಿಲೀಸ್ ಮಾಡಲಾಗಿತ್ತು. ಇತ್ತೀಚೆಗಷ್ಟೇ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾವೂ 5 ಭಾಷೆಗಳಲ್ಲಿ ತೆರೆಕಂಡಿತ್ತು. ಇದೀಗ ಉಪೇಂದ್ರ ಸಹ ಒಂದು ಹೆಜ್ಜೆ ಮುಂದೆ ಹೋಗಿ 7 ಭಾಷೆಗಳಲ್ಲಿ ‘ಕಬ್ಜ’ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
Published On - 1:17 pm, Mon, 16 September 19