Sadhu Kokila: ಸಾಧು ಹೆಸರಿನ ಜೊತೆ ಕೋಕಿಲ ಅಂತ ಸೇರಿಸಿದ್ದು ಕನ್ನಡದ ಈ ಸ್ಟಾರ್​ ಹೀರೋ

ಸಾಧು ಕೋಕಿಲ ಚಿತ್ರರಂಗಕ್ಕೆ ಬಂದಿದ್ದು ಮ್ಯೂಸಿಕ್ ಕಂಪೋಸರ್ ಆಗಿ. ನಂತರ ಅವರು ಬಣ್ಣ ಹಚ್ಚಿದರು. ಚಿತ್ರರಂಗಕ್ಕೆ ಬರುವಾಗ ಅವರು ಸಾಧು ಆಗಿದ್ದರು. ನಂತರ ಕೋಕಿಲ ಅನ್ನೋದು ಅವರ ಹೆಸರಿಗೆ ಸೇರ್ಪಡೆ ಆಯಿತು.

Sadhu Kokila: ಸಾಧು ಹೆಸರಿನ ಜೊತೆ ಕೋಕಿಲ ಅಂತ ಸೇರಿಸಿದ್ದು ಕನ್ನಡದ ಈ ಸ್ಟಾರ್​ ಹೀರೋ
ಸಾಧು ಕೋಕಿಲ

Updated on: Feb 16, 2023 | 11:55 AM

ಸಾಧು ಕೋಕಿಲ (Sadhu Kokila) ಅವರು ಮಾಡೋ ಕಾಮಿಡಿಗೆ ನಗದವರೇ ಇಲ್ಲ. ಅವರು ತೆರೆಮೇಲೆ ಬಂದರೆ ಸ್ಟಾರ್​ ಹೀರೋಗೆ ಬಿದ್ದಷ್ಟೇ ಶಿಳ್ಳೆ ಅವರಿಗೂ ಬೀಳುತ್ತದೆ. ಇದು ಸಾಧು ಕನ್ನಡದಲ್ಲಿ ಸೃಷ್ಟಿ ಮಾಡಿರುವ ಹವಾ. ಸಾಧು ಕೋಕಿಲ ಅವರು ತೀರಾ ಬಡ ಕುಟುಂಬದಿಂದ ಬಂದವರು. ಈಗ ಕನ್ನಡದ ಬೇಡಿಕೆಯ ಹಾಸ್ಯ ನಟ ಆಗಿದ್ದಾರೆ. ಅವರು ಚಿತ್ರರಂಗಕ್ಕೆ ಬಂದಿದ್ದು ಮ್ಯೂಸಿಕ್ ಕಂಪೋಸರ್ ಆಗಿ. ನಂತರ ಅವರು ಬಣ್ಣ ಹಚ್ಚಿದರು. ಚಿತ್ರರಂಗಕ್ಕೆ ಬರುವಾಗ ಅವರು ಸಾಧು ಆಗಿದ್ದರು. ನಂತರ ಕೋಕಿಲ ಅನ್ನೋದು ಅವರ ಹೆಸರಿಗೆ ಸೇರ್ಪಡೆ ಆಯಿತು. ಇದರಿಂದ ಅವರು ‘ಸಾಧು ಕೋಕಿಲ’ ಆದರು.

ಹೆಸರು ಕೊಟ್ಟಿದ್ದು ಉಪೇಂದ್ರ

‘ಶ್’ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿ ಬಂದ ಹಾರರ್, ಸಸ್ಪೆನ್ಸ್​ ಸಿನಿಮಾ. ಈ ಚಿತ್ರ ಹಿಟ್ ಆಯಿತು. ಈ ಚಿತ್ರಕ್ಕೆ ಸಾಧು ಕೋಕಿಲ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಕೂಡ ಮಾಡಿದ್ದರು. ಈ ಸಿನಿಮಾದ ಜತೆಗೆ ಹಾಡುಗಳು ಹಿಟ್ ಆದವು. ಈ ಚಿತ್ರದ ಶೂಟಿಂಗ್ ವೇಳೆ ಸಾಧು ಜತೆ ಕೋಕಿಲ ಎನ್ನುವುದನ್ನು ಉಪೇಂದ್ರ ಸೇರ್ಪಡೆ ಮಾಡಿದರು.

ಮೊದಲ ಸಿನಿಮಾ ಬಗ್ಗೆ ಹೇಳಿಕೊಂಡಿದ್ದ ಸಾಧು

‘ವಿ.ಮನೋಹರ್ ಅವರಿಂದ ನಾನು ಉಪೇಂದ್ರಗೆ ಪರಿಚಯಗೊಂಡೆ. ಕಂಪೋಸ್​ಗೆ ತಿಂಗಳಾನುಗಟ್ಟಲೆ ತೆಗೆದುಕೊಂಡೆ. ಯಾವುದೇ ಟ್ಯೂನ್ ಕಂಪೋಸ್ ಮಾಡಿದರೂ ಅವರಿಗೆ ಇಷ್ಟ ಆಗುತ್ತಿರಲಿಲ್ಲ. ನನ್ನ ನೋಡಿ ಅವರು ನಗುತ್ತಿದ್ದರು. ಒಂದಿನ ಸೆಟ್​ಗೆ ಬನ್ನಿ ಎಂದರು. ನಾನು ಹೋದೆ. ಆಗ ಆ್ಯಕ್ಟ್ ಮಾಡಿ ಎಂದರು. ನಾನು ನಟಿಸಿದೆ. ಅಲ್ಲಿಂದ ನನ್ನ ನಟನಾ ಪಯಣ ಶುರು. ಅವರೇ ನನಗೆ ಗಾಡ್ ಫಾದರ್​’ ಎಂದು ಸಾಧು ಕೋಕಿಲ ‘ವೀಕೆಂಡ್ ವಿತ್ ರಮೇಶ್ ಸೀಸನ್ 2’ನಲ್ಲಿ ಹೇಳಿಕೊಂಡಿದ್ದರು.

YouTube video player

‘ನಾನು ಚೆನ್ನಾಗಿ ಮ್ಯೂಸಿಕ್ ಮಾಡ್ತೀನಿ ಎನ್ನುವ ಕಾರಣಕ್ಕೆ ಕೋಕಿಲ ಅಂತ ನನ್ನ ಹೆಸರಿಗೆ ಸೇರಿಸಿದ್ದು ಉಪೇಂದ್ರ. ನಾನು ಸಾಧು ಅಷ್ಟೇ ಆಗಿದ್ದೆ. ಕೋಗಿಲೆ ಚೆನ್ನಾಗಿ ಕೂಗುತ್ತದೆ. ನೀವು ಸಖತ್​ ಆಗಿ ಮ್ಯೂಸಿಕ್ ಮಾಡ್ತೀರಾ. ಹೀಗಾಗಿ, ನನ್ನ ಹೆಸರಿಗೆ ಕೋಕಿಲ ಅನ್ನೋದನ್ನು ಸೇರಿಸಿದರು’ ಎಂದು ಸುವರ್ಣ ವಾಹಿನಿಯ ಕಾರ್ಯಕ್ರಮದಲ್ಲಿ ಸಾಧು ಈ ಮೊದಲು ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us