ಬೆಂಗಳೂರು: ಕೊರೊನಾ ಅಬ್ಬರದ ನಡುವೆ ಗಾಂಧಿನಗರ ಕೊಂಚ ಸೈಲೆಂಟ್ ಆಗಿಬಿಟ್ಟಿತ್ತು. ಆದರೆ, ಲಾಕ್ಡೌನ್ ನಂತರ ಮೈಕೊಡವಿ ಮತ್ತೊಮ್ಮೆ ಅಬ್ಬರಿಸಲು ರೆಡಿಯಾಗ್ತಿದೆ. ಸ್ಯಾಂಡಲ್ವುಡ್ನಲ್ಲಿ ಒಂದೆಡೆ ಸ್ಟಾರ್ಗಳು ತೆರೆ ಮೇಲೆ ಘರ್ಜಿಸಲು ಸಜ್ಜಾಗುತ್ತಿದ್ದರೆ ಮತ್ತೊಂದೆಡೆ ಮರಿಹುಲಿಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ತಯಾರಾಗಿದ್ದಾರೆ.
ಇದೀಗ, ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಸೂಪರ್ಸ್ಟಾರ್ ಆಗಲು ಬರುತ್ತಿದ್ದಾರೆ. ಓಹ್, ಇದೇನಪ್ಪಾ ಸ್ಯಾಂಡಲ್ವುಡ್ಗೆ ಈಗ ಎಂಟ್ರಿ ಕೊಡ್ತಿರೋ ಯುವ ಪ್ರತಿಭೆ ಆಗಲೇ ಸೂಪರ್ಸ್ಟಾರ್ ಆಗಿಬಿಟ್ನಾ ಅಂದುಕೊಂಡ್ರಾ? ಇಲ್ಲ ಇಲ್ಲ ನಿರಂಜನ್ರ ಚಿತ್ರದ ಹೆಸರೇ ಸೂಪರ್ಸ್ಟಾರ್!
ಸಿನಿಮಾದ ಕ್ಯಾರೆಕ್ಟರ್ ಟೀಸರ್ ಇಂದು ರಿಲೀಸ್ ಆಗಿದ್ದು ನಿರಂಜನ್ ಅದರಲ್ಲಿ ಸಖತ್ ಖಡಕ್ ಆಗಿ ಕಾಣಿಸಿದ್ದಾರೆ. ಟೀಸರ್ಗೆ ರಾಕಿಂಗ್ ಸ್ಟಾರ್ ಯಶ್ ಕಂಠದಾನ ಮಾಡಿದ್ದು ಅವರ ಪವರ್ಫುಲ್ ಡೈಲಾಗ್ಗಳಿಂದ ಟೀಸರ್ ಮತ್ತಷ್ಟು ಸಖತ್ತಾಗಿ ಮೂಡಿಬಂದಿದೆ.
ಸಿನಿಮಾದ ಟೀಸರ್ ರಿಲೀಸ್ ಮಾಡಿದ ನಟ ಶ್ರೀಮುರಳಿ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ.
[lazy-load-videos-and-sticky-control id=”nmZqASs_cO8″]
Published On - 2:04 pm, Thu, 20 August 20