ಕೊನೆ ಕ್ಷಣದಲ್ಲಿ ‘ವಾಲ್ಮೀಕಿ’ ಚಿತ್ರ ‘ಗದ್ದಲಕೊಂಡ ಗಣೇಶ್’ ಎಂದು ಬದಲಾವಣೆ
ಟಾಲಿವುಡ್ನ ವರುಣ್ ತೇಜ್ ಅಭಿನಯದ ‘ವಾಲ್ಮೀಕಿ’ ಚಿತ್ರದ ಟೈಟಲ್ ಅನ್ನು ‘ಗದ್ದಲಕೊಂಡ ಗಣೇಶ್’ ಎಂದು ಕೊನೆ ಕ್ಷಣದಲ್ಲಿ ಬದಲಾಯಿಸಿ ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ. ತೆಲುಗಿನ ‘ವಾಲ್ಮೀಕಿ’ ಚಿತ್ರಕ್ಕೆ ಬೋಯಾ ಹಕ್ಕುಗಳ ಸಮಾಜ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ರಾಮಾಯಣದ ಕತೃ ವಾಲ್ಮೀಕಿ ಹೆಸರನ್ನು ರೌಡಿಗಳ ಚಿತ್ರಕ್ಕೆ ಶೀರ್ಷಿಕೆಯಾಗಿ ಇಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿತ್ತು. ಚಿತ್ರದ ಹೆಸರು ಬದಲಿಸುವಂತೆ ಆಗ್ರಹಿಸಿ ತೆಲಂಗಾಣದ ಹೈಕೋರ್ಟ್ ಮೊರೆ ಹೋಗಿತ್ತು. ಹೀಗಾಗಿ ಇಂದು ಬಿಡುಗಡೆಯಾಗಬೇಕಿದ್ದ ತೆಲುಗಿನ ‘ವಾಲ್ಮೀಕಿ’ ಸಿನಿಮಾವನ್ನು ಕೊನೆ ಕ್ಷಣದಲ್ಲಿ ‘ಗದ್ದಲಕೊಂಡ ಗಣೇಶ್’ ಎಂದು […]
ಟಾಲಿವುಡ್ನ ವರುಣ್ ತೇಜ್ ಅಭಿನಯದ ‘ವಾಲ್ಮೀಕಿ’ ಚಿತ್ರದ ಟೈಟಲ್ ಅನ್ನು ‘ಗದ್ದಲಕೊಂಡ ಗಣೇಶ್’ ಎಂದು ಕೊನೆ ಕ್ಷಣದಲ್ಲಿ ಬದಲಾಯಿಸಿ ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ.
ತೆಲುಗಿನ ‘ವಾಲ್ಮೀಕಿ’ ಚಿತ್ರಕ್ಕೆ ಬೋಯಾ ಹಕ್ಕುಗಳ ಸಮಾಜ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ರಾಮಾಯಣದ ಕತೃ ವಾಲ್ಮೀಕಿ ಹೆಸರನ್ನು ರೌಡಿಗಳ ಚಿತ್ರಕ್ಕೆ ಶೀರ್ಷಿಕೆಯಾಗಿ ಇಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿತ್ತು. ಚಿತ್ರದ ಹೆಸರು ಬದಲಿಸುವಂತೆ ಆಗ್ರಹಿಸಿ ತೆಲಂಗಾಣದ ಹೈಕೋರ್ಟ್ ಮೊರೆ ಹೋಗಿತ್ತು. ಹೀಗಾಗಿ ಇಂದು ಬಿಡುಗಡೆಯಾಗಬೇಕಿದ್ದ ತೆಲುಗಿನ ‘ವಾಲ್ಮೀಕಿ’ ಸಿನಿಮಾವನ್ನು ಕೊನೆ ಕ್ಷಣದಲ್ಲಿ ‘ಗದ್ದಲಕೊಂಡ ಗಣೇಶ್’ ಎಂದು ಹೆಸರು ಬದಲಿಸಿ ಚಿತ್ರವನ್ನು ಬಿಡುಗಡೆ ಮಾಡಿದೆ.
‘ಗದ್ದಲಕೊಂಡ ಗಣೇಶ್’ ಚಿತ್ರದಲ್ಲಿ ವರುಣ್ ತೇಜ್, ನಟಿ ಪೂಜಾ ಹೆಗ್ಡೆ ಹಾಗೂ ಅಥರ್ವ ಮುರಳಿ ಅಭಿನಯಿಸಿದ್ದಾರೆ.
Published On - 3:53 pm, Fri, 20 September 19