ಕ್ರೇಜಿಸ್ಟಾರ್ ರವಿಚಂದ್ರನ್ ಫ್ಯಾಮಿಲಿಯಿಂದ ಮತ್ತೊಬ್ಬರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿರೋದು ನಿಮ್ಗೆ ಗೊತ್ತೇ ಇದೆ. ತ್ರಿವಿಕ್ರಮ ಚಿತ್ರದ ಮೂಲಕ ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ಭರ್ಜರಿಯಾಗಿಯೇ ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ತಿವ್ರಿಕ್ರಮ ಚಿತ್ರತಂಡದಿಂದ ಈಗ ಹೊಸ ವಿಷ್ಯವೊಂದು ಹೊರಬಿದ್ದಿದೆ. ಏನೂ ಅಪ್ಡೇಟ್ಸ್ ಸಿಕ್ತಿಲ್ಲವಲ್ಲಾ ಅಂತಾ ಚಿಂತೆಯಲ್ಲಿದ್ದ ಅಭಿಮಾನಿಗಳಿಗೆ ಇದು ಖುಷಿ ವಿಚಾರವೂ ಹೌದು. ಅದೇನಂದ್ರೆ, ತ್ರಿವಿಕ್ರಮ ಚಿತ್ರತಂಡ ಡಬ್ಬಿಂಗ್ ಕಾರ್ಯ ಆರಂಭಿಸಿದೆ. ಶೂಟಿಂಗ್ ಮುಗಿಯುವ ಹಂತಕ್ಕೆ ಬಂದಿದೆ.
ರವಿಚಂದ್ರನ್ ಅವರ ಪುತ್ರನ ಮೊದಲ ಚಿತ್ರ ಅಂದಕೂಡಲೇ ನಿರೀಕ್ಷೆಗಳು ಹೆಚ್ಚಿರುತ್ತವೆ. ಸಾಂಗ್ ಟೀಸರ್ ಮತ್ತು ಪೋಸ್ಟರ್ಸ್ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚು ಮಾಡಿದ್ದು ಸುಳ್ಳಲ್ಲ. ಹೀಗಾಗಿ ಡೈರೆಕ್ಟರ್ ಸಹನಾಮೂರ್ತಿ ಹೆಚ್ಚು ಟೈಂ ತೆಗೆದುಕೊಂಡು ಶೂಟಿಂಗ್ ಮಾಡಿದ್ದಾರೆ. ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಕ್ಕಿದ್ದು, 2 ಹಾಡಿನ ಚಿತ್ರೀಕರಣಕ್ಕಾಗಿ ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ಈ ನಡುವೆ ಡಬ್ಬಿಂಗ್ ಶುರುವಾಗಿದೆ.
ವಿಕ್ರಮ್ ಮತ್ತು ಆಕಾಂಕ್ಷಾ ಶರ್ಮಾ ಲೀಡ್‌ರೋಲ್‌ನಲ್ಲಿರೋ ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಹೈ ಬಜೆಟ್‌ನಲ್ಲಿ ನಿರ್ಮಾಣವಾಗ್ತಿರೋ ಈ ಚಿತ್ರಕ್ಕೆ ಬಂಡವಾಳ ಹಾಕಿರೋದು ಸೋಮಣ್ಣ. ಸಾಂಗ್ ಶೂಟಿಂಗ್ ಮತ್ತು ಡಬ್ಬಿಂಗ್ ಮುಗಿದ್ಮೇಲೆ ರಿಲೀಸ್ ಡೇಟ್ ಅನೌ ನ್ಸ್ ಮಾಡಲಿದ್ದಾರೆ.