ಡಾ.ವಿಷ್ಣು ಅಭಿಮಾನಿಗಳಿಗೆ ಸಿಹಿ ಸುದ್ದಿ: ಧ್ವಂಸವಾದ ಜಾಗದಲ್ಲೇ ಮತ್ತೆ ತಲೆ ಎತ್ತಲಿದೆ ಸಾಹಸಸಿಂಹನ ಪ್ರತಿಮೆ

|

Updated on: Dec 27, 2020 | 6:13 PM

ಸೋಮವಾರ ವಿಷ್ಣು​​ ಪ್ರತಿಮೆ ಮರುಸ್ಥಾಪನೆಗೆ ಭೂಮಿಪೂಜೆ ನಡೆಯಲಿದೆ. ಡಿಸೆಂಬರ್ 30ಕ್ಕೆ ವಿಷ್ಣುವರ್ಧನ್​​ ಪ್ರತಿಮೆಯನ್ನು ಮರುಸ್ಥಾಪನೆ ಮಾಡಲಾಗುವುದು. ಡಿಸೆಂಬರ್ 30ರಂದು ನಟ ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆ. ಹಾಗಾಗಿ, ಈ ವಿಶೇಷ ದಿನದಂದೇ ಪ್ರತಿಮೆ ಮತ್ತೆ ತಲೆ ಎತ್ತಲಿದೆ ಅನ್ನೋದು ವಿಶೇಷ.

ಡಾ.ವಿಷ್ಣು ಅಭಿಮಾನಿಗಳಿಗೆ ಸಿಹಿ ಸುದ್ದಿ: ಧ್ವಂಸವಾದ ಜಾಗದಲ್ಲೇ ಮತ್ತೆ ತಲೆ ಎತ್ತಲಿದೆ ಸಾಹಸಸಿಂಹನ ಪ್ರತಿಮೆ
ಸ್ವಾಮೀಜಿ ಭೇಟಿ ಮಾಡಿದ ಅಭಿಮಾನಿಗಳು
Follow us on

ಬೆಂಗಳೂರು: ನಗರದ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ನಟ ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಮಾಡಿದ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿದೆ. ಅಲ್ಲದೆ, ಈ ವಿಚಾರಕ್ಕೆ ಸಂಬಂಧಿಸಿ ಬಹಳಷ್ಟು ಜನರು ಆಕ್ರೋಶ ಕೂಡ ಹೊರ ಹಾಕಿದ್ದಾರೆ. ಈಗ ವಿಷ್ಣು ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದು ಸಿಕ್ಕಿದೆ. ಧ್ವಂಸವಾದ ಜಾಗದಲ್ಲೇ ವಿಷ್ಣು ಪ್ರತಿಮೆಯಯೊಂದು ಮತ್ತೆ ತಲೆ ಎತ್ತಲಿದೆ.

ಹೌದು, ಇಂದು ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಮಠದಲ್ಲಿ ವಿಷ್ಣು ಅಭಿಮಾನಿಗಳು ಮಠಾಧಿಕಪತಿ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿಯಾದರು. ಈ ಸಭೆಯಲ್ಲಿ ವಸತಿ ಸಚಿವ ಸೋಮಣ್ಣ ಕೂಡ ಪಾಲ್ಗೊಂಡಿದ್ದರು. ಈ ವೇಳೆ, ಮೊದಲಿದ್ದ ಜಾಗದಲ್ಲೇ ವಿಷ್ಣು ಪ್ರತಿಮೆ ಮರುಸ್ಥಾಪನೆಗೆ ಶ್ರೀಗಳು ಒಪ್ಪಿಗೆ ಸೂಚಿಸಿದ್ದಾರೆ. ವಿಷ್ಣು ಪ್ರತಿಮೆ ಇದ್ದ ವೃತ್ತಕ್ಕೆ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಹೆಸರಿಡಲಾಗಿದೆ. ಹಾಗಾಗಿ, ಇಲ್ಲಿ ಶ್ರೀಗಳ ಪುತ್ಥಳಿ ಪ್ರತಿಷ್ಠಾಪಿಸಬೇಕು ಎಂಬ ಮಾತು ಕೇಳಿಬಂದಿತ್ತು. ಹೀಗಾಗಿ, ಈ ಸ್ಥಳದಲ್ಲಿ ಡಾ.ವಿಷ್ಣು ಅವರ ಪುತ್ಥಳಿಯನ್ನು ಮರು ಪ್ರತಿಷ್ಠಾಪಿಸಲು ನಿರ್ಮಲಾನಂದನಾಥ ಸ್ವಾಮೀಜಿಗಳ ಬಳಿ ನಟನ ಅಭಿಮಾನಿಗಳು ಅನುಮತಿ ಪಡೆದರು ಎಂದು ಹೇಳಲಾಗಿದೆ.

ಸೋಮವಾರ ವಿಷ್ಣು​​ ಪ್ರತಿಮೆ ಮರುಸ್ಥಾಪನೆಗೆ ಭೂಮಿಪೂಜೆ ನಡೆಯಲಿದೆ. ಡಿಸೆಂಬರ್ 30ಕ್ಕೆ ವಿಷ್ಣುವರ್ಧನ್​​ ಪ್ರತಿಮೆಯನ್ನು ಮರುಸ್ಥಾಪನೆ ಮಾಡಲಾಗುವುದು. ಡಿಸೆಂಬರ್ 30ರಂದು ನಟ ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆ. ಹಾಗಾಗಿ, ಈ ವಿಶೇಷ ದಿನದಂದೇ ಪ್ರತಿಮೆ ಮತ್ತೆ ತಲೆ ಎತ್ತಲಿದೆ ಅನ್ನೋದು ವಿಶೇಷ.

ಘಟನಾ ಸ್ಥಳಕ್ಕೆ ಡಾ.ವಿಷ್ಣು ಅಳಿಯ ಅನಿರುದ್ಧ್​​ ಭೇಟಿ
ವಿಜಯನಗರ ಮಾಗಡಿರಸ್ತೆ ಟೋಲ್​ಗೇಟ್ ಬಳಿ ಇದ್ದ ಪ್ರತಿಮೆ ನಾಶ ಮಾಡಲಾಗಿತ್ತು. ಈ ಸ್ಥಳಕ್ಕೆ ವಿಷ್ಣುವರ್ಧನ್​ ಅಳಿಯ ನಟ ಅನಿರುದ್ಧ್​ ಭೇಟಿ ಮಾಡಿದರು. ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ವೃತ್ತ ಬಾಲಗಂಗಾಧರನಾಥ ಶ್ರೀಗಳ ಹೆಸರಲ್ಲಿದೆ ಎಂದು ಹೇಳುತ್ತಾರೆ. ಶ್ರೀಗಳ ಹೆಸರಿನಲ್ಲಿ ಇದ್ದ ಮೇಲೆ ಪ್ರತಿಮೆ ನಿರ್ಮಾಣ ಮಾಡಲು ಏಕೆ ಅನುಮತಿ ನೀಡಿದರು. ಅನುಮತಿ ಕೊಟ್ಟ ನಂತರ ಈ ರೀತಿ ಆಗಲು ಅವಕಾಶ ಕೊಟ್ಟಿದ್ದೇಕೆ ಎಂದು ಪ್ರಶ್ನೆ ಮಾಡಿದ್ದು, ಇಲ್ಲಿಯವರೆಗೆ ನಮ್ಮ ಸೌಮ್ಯ ರೂಪವನ್ನು ನೋಡಿದ್ದೀರಿ. ಇನ್ನು ಮುಂದೆ ನಮ್ಮ ಉಗ್ರರೂಪ ನೋಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ನೀಡಿದರು.

ಯಾರೂ ಇಲ್ಲದ ವೇಳೆ ಡಾ.ವಿಷ್ಣು ಪ್ರತಿಮೆ ಧ್ವಂಸಗೊಳಿಸಿದ್ದು ನಾಚಿಕೆಯ ಸಂಗತಿ -ದರ್ಶನ್​ ಆಕ್ರೋಶ

ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸ: ಕಿಡಿಗೇಡಿಗಳ ಕೃತ್ಯಕ್ಕೆ ಅಭಿಮಾನಿಗಳ ಕಣ್ಣೀರು, ಆಕ್ರೋಶ