ಇಂದು ವಿಷ್ಣುವರ್ಧನ್​, ಉಪೇಂದ್ರ, ಶ್ರುತಿ ಜನ್ಮದಿನ; ಅಭಿಮಾನಿಗಳಿಗೆ ಏನೆಲ್ಲ ಸಿಗಲಿದೆ?

ಸಾಹಸ ಸಿಂಹ ವಿಷ್ಣುವರ್ಧನ್​, ರಿಯಲ್​ ಸ್ಟಾರ್​ ಉಪೇಂದ್ರ ಹಾಗೂ ಹಿರಿಯ ನಟಿ ಶ್ರುತಿಗೆ ಇಂದು ಜನ್ಮದಿನ. ಸೋಶಿಯಲ್​ ಮೀಡಿಯಾದಲ್ಲಿ ಇವರಿಗೆ ಶುಭಾಶಯ ಹರಿದುಬರುತ್ತಿದೆ.

ಇಂದು ವಿಷ್ಣುವರ್ಧನ್​, ಉಪೇಂದ್ರ, ಶ್ರುತಿ ಜನ್ಮದಿನ; ಅಭಿಮಾನಿಗಳಿಗೆ ಏನೆಲ್ಲ ಸಿಗಲಿದೆ?
ವಿಷ್ಣುವರ್ಧನ್​, ಉಪೇಂದ್ರ, ಶ್ರುತಿ
Edited By:

Updated on: Sep 18, 2021 | 7:33 AM

ಸೆಪ್ಟೆಂಬರ್​ 18 ಸಿನಿಮಾ ಮಂದಿಯ ಪಾಲಿಗೆ ವಿಶೇಷ ದಿನ. ಏಕೆಂದರೆ ಸ್ಯಾಂಡಲ್​ವುಡ್​ನ​ ಮೂವರ ಜನ್ಮದಿನ ಒಂದೇ ದಿನ ಬಂದಿದೆ. ಸಾಹಸ ಸಿಂಹ ವಿಷ್ಣುವರ್ಧನ್​, ರಿಯಲ್​ ಸ್ಟಾರ್​ ಉಪೇಂದ್ರ ಹಾಗೂ ಹಿರಿಯ ನಟಿ ಶ್ರುತಿ ಹುಟ್ಟಿದ್ದು ಸೆಪ್ಟೆಂಬರ್​ 18ರಂದೇ. ಈ ವಿಶೇಷ ದಿನವನ್ನು ಅಭಿಮಾನಿಗಳು ನಾನಾ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯ ಹರಿದುಬರುತ್ತಿದೆ.

 

ವಿಷ್ಣವರ್ಧನ್​ಗೆ 71ನೇ ಜನ್ಮದಿನ

ಹಿರಿಯ ನಟ ವಿಷ್ಣುವರ್ಧನ್​ ಅವರು ನಮ್ಮ ಜತೆಗೆ ಇಂದು ಇದ್ದಿದ್ದರೆ 71ನೇ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿದ್ದರು. ಅವರು ಇಲ್ಲದೆ ಇದ್ದರೂ ಅಭಿಮಾನಿಗಳು ಸಾಹಸ ಸಿಂಹನ ಜನ್ಮದಿನಾಚರಣೆಯನ್ನು ಆಚರಿಸೋಕೆ ಮರೆಯೋದಿಲ್ಲ. ವಿಷ್ಣುವರ್ಧನ್​ ಅಭಿಮಾನಿಗಳು ಈ ಬಾರಿಯೂ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಕೆಲ ಅಭಿಮಾನಿ ಸಂಘಗಳು ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ವಿಷ್ಣುವರ್ಧನ್​ಗೆ ಗೌರವ ಸಲ್ಲಿಸುವ ಕೆಲಸ ಮಾಡುತ್ತಿವೆ. ಕೆಲವೆಡೆ ಅನ್ನದಾನ, ರಕ್ತದಾನ ಕಾರ್ಯಕ್ರಮಗಳು ನಡೆಯುತ್ತಿವೆ.

ಕೆಲ ದಿನಗಳ ಹಿಂದೆ ಒರಿಸ್ಸಾದ ಪುರಿಯ ಮೆರೀನ್ ಡ್ರೈವ್ ಬೀಚ್​ನಲ್ಲಿ  ಡಾ. ವಿಷ್ಣುವರ್ಧನ್ ಅವರ ಮರಳು ಶಿಲ್ಪ ರಚಿಸಲಾಗಿತ್ತು. ಅವರ ಜನ್ಮದಿನದ ಪ್ರಯುಕ್ತ ಇದನ್ನು ರಚಿಸಲಾಗಿತ್ತು. 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ಅರಳಿದ್ದು ವಿಶೇಷವಾಗಿತ್ತು. ಹೆಸರಾಂತ ಶಿಲ್ಪಿ ಮನೀಶ್ ಕುಮಾರ್ ಅವರು ಈ ಶಿಲ್ಪವನ್ನು ರಚಿಸಿದ್ದರು.

ಉಪ್ಪಿ ದಿನದ ಸ್ಪೆಷಲ್​ ಏನು?

ಇಂದು ಉಪೇಂದ್ರ ಅವರ ಜನ್ಮದಿನ. ಇದನ್ನು ಆಚರಿಸೋಕೆ ಅಭಿಮಾನಿಗಳು ಕಾದು ಕೂತಿದ್ದರು. ಆದರೆ, ಉಪ್ಪಿ ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ. ‘ಅಭಿಮಾನಿಗಳ ದಿನ, 18-09-2021. ಪ್ರತಿವರ್ಷ ಅಭಿಮಾನಿಗಳೊಂದಿಗೆ ಆಚರಿಸುತ್ತಿದ್ದ ಅಭಿಮಾನಿಗಳ ದಿನದ ಸಂಭ್ರಮ ಈ ವರ್ಷವೂ ಆಚರಿಸಲು ಆಗದಿರುವುದಕ್ಕೆ ವಿಷಾದಿಸುತ್ತೇನೆ. ನಾನು ಬೆಂಗಳೂರಿನಲ್ಲಿ ಇಲ್ಲದಿರುವ ಕಾರಣ ಎಲ್ಲಾ ಅಭಿಮಾನಿಗಳು ಅವರವರು ಇರುವ ಕಡೆಯೇ ಸರಳವಾಗಿ ಈ ದಿನವನ್ನು ಆಚರಿಸಿ ಹಾರೈಸಬೇಕಾಗಿ ಬಯಸುತ್ತೇನೆ’ ಎಂದು ಸೋಶಿಯಲ್​ ಮೀಡಿಯಾದಲ್ಲಿ ಉಪ್ಪಿ ಪೋಸ್ಟ್​ ಮಾಡಿದ್ದಾರೆ. ಆದರೆ, ಸೋಶಿಯಲ್​ ಮೀಡಿಯಾದಲ್ಲಿ ಉಪ್ಪಿ ಜನ್ಮದಿನದ ಸಂಭ್ರಮ ಜೋರಾಗಿದೆ. ಅಭಿಮಾನಿಗಳು ಉಪೇಂದ್ರಗೆ ಬರ್ತ್​ಡೇ ವಿಶ್​ ಮಾಡುತ್ತಿದ್ದಾರೆ.

ಇನ್ನು, ಉಪೇಂದ್ರ ಅವರು ನಿರ್ದೇಶನಕ್ಕೆ ಕಂಬ್ಯಾಕ್​ ಮಾಡುವ ಸುದ್ದಿ ಸಾಕಷ್ಟು ಮೊದಲಿನಿಂದಲೂ ಹರಿದಾಡುತ್ತಲೇ ಇದೆ. ಇತ್ತೀಚೆಗೆ ಪೋಸ್ಟರ್​ ಕೂಡ ಹರಿದಾಡಿತ್ತು. ಈ ಬಗ್ಗೆ ಇಂದು ಅಧಿಕೃತವಾಗುವ ಸಾಧ್ಯತೆ ಇದೆ. ಇನ್ನು, ‘ಕಬ್ಜ’ ಸಿನಿಮಾ ತಂಡದಿಂದ ಹೊಸ ಪೋಸ್ಟರ್​ ರಿಲೀಸ್​ ಆಗುವ ಸಾಧ್ಯತೆ ಇದೆ.

ಹಿರಿಯ ನಟಿಗೆ ಜನ್ಮದಿನ

ಹಿರಿಯ ನಟಿ ಶ್ರುತಿಗೆ ಇಂದು ಜನ್ಮದಿನ. ಅವರಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಕಡೆಯಿಂದ ಶುಭಾಶಯಗಳು ಬರುತ್ತಿವೆ. ಚಿತ್ರರಂಗದಲ್ಲಿ ಶ್ರುತಿ ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ಹೀಗಾಗಿ, ಅವರಿಗೂ ದೊಡ್ಡ ಅಭಿಮಾನಿ ಬಳಗ ಇದೆ. ಅವರೆಲ್ಲರೂ ಶ್ರುತಿಗೆ ಶುಭಾಶಯ ಕೋರುತ್ತಿದ್ದಾರೆ.

ಇದನ್ನೂ ಓದಿ:

ಪುತ್ಥಳಿ ತೆರವು ವಿಚಾರ: ಸರ್ಕಾರದ ನಿರ್ಲಕ್ಷ್ಯತನ ಕೂಡ ಇದರಲ್ಲಿದೆ ಎಂದ ವಿಷ್ಣುವರ್ಧನ್​ ಅಳಿಯ ಅನಿರುದ್ಧ್​​

ಒರಿಸ್ಸಾದ ಸಮುದ್ರ ತೀರದಲ್ಲಿ ಡಾ.ವಿಷ್ಣುವರ್ಧನ್ ಮರಳು ಶಿಲ್ಪ

Loading...
Unable to load recommendations.
Follow Us