ಆದಿತ್ಯ ಆಳ್ವಾ ಬಗ್ಗೆ ನಾವೇನೂ ಹೇಳುವುದಿಲ್ಲ: ವಿವೇಕ್ ಒಬೆರಾಯ್, ಪ್ರಿಯಾಂಕಾ ಅಡ್ಡಗಾಲು

| Updated By: ಸಾಧು ಶ್ರೀನಾಥ್​

Updated on: Oct 15, 2020 | 3:55 PM

ಮುಂಬೈ: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ಶೋಧ ಕಾರ್ಯಕ್ಕೆ ಬಾಲಿವುಡ್​ ನಟ ವಿವೇಕ್ ಒಬೆರಾಯ್ ಮತ್ತು ಅವರ ಪತ್ನಿ ಪ್ರಿಯಾಂಕಾ ಆಳ್ವಾ ಒಬೆರಾಯ್ ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಪ್ರಕರಣದ A6 ಆರೋಪಿ ಹಾಗೂ ವಿವೇಕ್​ ಒಬೆರಾಯ್ ಪತ್ನಿ ಪ್ರಿಯಾಂಕಾ ತಮ್ಮನಾಗಿರುವ ಆದಿತ್ಯ ಆಳ್ವಾ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ವಿವೇಕ್ ಒಬೆರಾಯ್ ಮನೆಯಲ್ಲಿ ಆದಿತ್ಯಗಾಗಿ ಶೋಧ ನಡೆಸಲಾಗುತ್ತಿದೆ. ಸಿಸಿಬಿ ಇನ್​ಸ್ಪೆಕ್ಟರ್​ ಮಹಾನಂದ್ ಹಾಗೂ ರವಿ ಪಾಟೀಲ್ ನೇತೃತ್ವದ ತಂಡದಿಂದ ಶೋಧ ನಡೆಸಲಾಗುತ್ತಿದೆ. […]

ಆದಿತ್ಯ ಆಳ್ವಾ ಬಗ್ಗೆ ನಾವೇನೂ ಹೇಳುವುದಿಲ್ಲ: ವಿವೇಕ್ ಒಬೆರಾಯ್, ಪ್ರಿಯಾಂಕಾ ಅಡ್ಡಗಾಲು
Follow us on

ಮುಂಬೈ: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ಶೋಧ ಕಾರ್ಯಕ್ಕೆ ಬಾಲಿವುಡ್​ ನಟ ವಿವೇಕ್ ಒಬೆರಾಯ್ ಮತ್ತು ಅವರ ಪತ್ನಿ ಪ್ರಿಯಾಂಕಾ ಆಳ್ವಾ ಒಬೆರಾಯ್ ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಪ್ರಕರಣದ A6 ಆರೋಪಿ ಹಾಗೂ ವಿವೇಕ್​ ಒಬೆರಾಯ್ ಪತ್ನಿ ಪ್ರಿಯಾಂಕಾ ತಮ್ಮನಾಗಿರುವ ಆದಿತ್ಯ ಆಳ್ವಾ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ವಿವೇಕ್ ಒಬೆರಾಯ್ ಮನೆಯಲ್ಲಿ ಆದಿತ್ಯಗಾಗಿ ಶೋಧ ನಡೆಸಲಾಗುತ್ತಿದೆ.

ಸಿಸಿಬಿ ಇನ್​ಸ್ಪೆಕ್ಟರ್​ ಮಹಾನಂದ್ ಹಾಗೂ ರವಿ ಪಾಟೀಲ್ ನೇತೃತ್ವದ ತಂಡದಿಂದ ಶೋಧ ನಡೆಸಲಾಗುತ್ತಿದೆ. ಮುಂಬೈನ ಜುಹೂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಟ ವಿವೇಕ್​ ಒಬೆರಾಯ್​ ನಿವಾಸವಿದೆ.

‘ನಿಮ್ಮ ತನಿಖೆ ನೀವೇ ಮಾಡಿಕೊಳ್ಳಿ’
ನಿವಾಸದಲ್ಲಿ ಸಿಸಿಬಿ ಪೊಲೀಸರ ಜೊತೆ ವಾಗ್ವಾದ ನಡೆಸಿದ ದಂಪತಿ ನಮ್ಮ ಮನೆಗೆ ಯಾಕೆ ಬಂದಿದ್ದೀರಾ ಎಂದು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರಂತೆ. ಆದಿತ್ಯ ಆಳ್ವಾ ಬಗ್ಗೆ ನಾವೇನು ಹೇಳುವುದಿಲ್ಲ. ನಿಮ್ಮ ತನಿಖೆ ನೀವೇ ಮಾಡಿಕೊಳ್ಳಿ ಎಂದು ದಂಪತಿ ಅಧಿಕಾರಿಗಳಿಗೆ ಹೇಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇದಲ್ಲದೆ, ಒಬೆರಾಯ್ ದಂಪತಿಯ ಮೊಬೈಲ್ ಪಡೆದು ಪರಿಶೀಲನೆ ನಡೆಸಲು ಮುಂದಾಗಿದ್ದ ಅಧಿಕಾರಿಗಳಿಗೆ ದಂಪತಿ ತಮ್ಮ ಮೊಬೈಲ್ ಫೋನ್ ಸಹ ನೀಡುತ್ತಿಲ್ಲವಂತೆ. ಜೊತೆಗೆ, ಸಂಪೂರ್ಣವಾಗಿ ತಮ್ಮ ಮನೆಯನ್ನು ಸರ್ಚ್ ಮಾಡಲು ಸಹ ಬಿಡದೆ ಪೊಲೀಸರ ತನಿಖೆಗೆ ಅಸಹಕಾರ ನೀಡುತ್ತಿದ್ದಾರೆ ಎಂದು ಸಿಸಿಬಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಸರ್ಚ್ ವಾರಂಟ್ ಹಿಡಿದು ಆದಿತ್ಯ ಆಳ್ವಾ ಇರುವ ಜಾಗಕ್ಕೆ ತೆರಳಿದ ಸಿಸಿಬಿ ಪೊಲೀಸರು

Published On - 3:29 pm, Thu, 15 October 20