
ನಟ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್ ಕಾಂಬಿನೇಷನ್ನ ‘ಪುಷ್ಪ’ ಸಿನಿಮಾ ಶುಕ್ರವಾರ (ಡಿಸೆಂಬರ್ 17)ಸಾಕಷ್ಟು ಹೈಪ್ನೊಂದಿಗೆ ರಿಲೀಸ್ ಆಗಿತ್ತು. ಎರಡು ಪಾರ್ಟ್ಗಳಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಮೊದಲ ಭಾಗ ಬಿಡುಗಡೆ ಆಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಸಿನಿಮಾ ಉತ್ತಮವಾಗಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಮಧ್ಯೆ ‘ಕೆಜಿಎಫ್’ ಬಗ್ಗೆ ಹಗುರವಾಗಿ ಮಾತನಾಡಿದ್ದ ಆಂಧ್ರದ ನಿರ್ದೇಶಕರಿಗೆ ಈಗ ಕರ್ನಾಟಕದವರು ಪ್ರಶ್ನೆ ಮಾಡುತ್ತಿದ್ದಾರೆ.
‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪಕ್ಕಾ ಹಳ್ಳಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ರಕ್ತ ಚಂದನದ ಕಳ್ಳ ಸಾಗಾಣಿಕೆಯ ಬಗ್ಗೆ ಹೇಳಲಾಗಿದೆ. ಅಲ್ಲು ಅರ್ಜುನ್ ಲುಕ್ ಬಗ್ಗೆ, ಸಿನಿಮಾ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಸಿನಿಮಾದ ಅವಧಿ ದೀರ್ಘ ಎನಿಸುತ್ತದೆ. ಸಿನಿಮಾ ಬಗ್ಗೆ ನೆಗೆಟಿವ್ ಮಾತನಾಡಿದವರೇ ಹೆಚ್ಚು. ಈ ಕಾರಣಕ್ಕೆ ಅನೇಕರು ಈ ಸಿನಿಮಾ ಟ್ರೋಲ್ ಮಾಡುತ್ತಿದ್ದಾರೆ.
ಈ ಮೊದಲು ‘ಪುಷ್ಪ’ ಬಗ್ಗೆ ಮಾತನಾಡಿದ್ದ ‘ಉಪ್ಪೇನಾ’ ನಿರ್ದೇಶಕ ಬುಚಿ ಬಾಬು, ‘ನಾನು ಸಿನಿಮಾದ ಮೊದಲ ಭಾಗವನ್ನು ವೀಕ್ಷಣೆ ಮಾಡಿದ್ದೇನೆ. ಈ ಚಿತ್ರ 10 ಕೆಜಿಎಫ್ಗೆ ಸಮ. ಸಿನಿಮಾದಲ್ಲಿ ಬರುವ ಪಾತ್ರಗಳು ತುಂಬಾನೇ ಅದ್ಭುತವಾಗಿ ಮೂಡಿ ಬಂದಿವೆ. ನಾನು ಇದನ್ನು ಅತಿಶಯೋಕ್ತಿಯಾಗಿ ಹೇಳುತ್ತಿಲ್ಲ. ಸಿನಿಮಾ ನೋಡಿದ ಮೇಲೆ ನಿಮಗೇ ತಿಳಿಯಲಿದೆ’ ಎಂದಿದ್ದರು. ಈಗ ಚಿತ್ರ ರಿಲೀಸ್ ಆಗಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕನ್ನಡಿಗರು ಹೇಳುತ್ತಿದ್ದಾರೆ.
ಈ ವಿಚಾರ ಚರ್ಚೆ ಆಗುತ್ತಿದೆ. ‘ಕೆಜಿಎಫ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಸಿನಿಮಾ ಬಗ್ಗೆ ಎಲ್ಲ ಕಡೆಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿತ್ತು. ‘ಪುಷ್ಪ’ ಸಿನಿಮಾ ನಮ್ಮ ಚಿತ್ರದ ಅರ್ಧಕ್ಕೂ ನಿಲ್ಲೋಕೆ ಸಾಧ್ಯವಿಲ್ಲ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ, ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.
ಇದನ್ನೂ ಓದಿ: ಸಂಕಷ್ಟದಲ್ಲಿದ್ದ ಅಲ್ಲು ಅರ್ಜುನ್ ಸಹಾಯಕ್ಕೆ ನಿಂತ ‘ಕೆಜಿಎಫ್ 2’ ನಟಿ ರವೀನಾ ಟಂಡನ್ ಕುಟುಂಬ
KGF Chapter 2: ಕೆಜಿಎಫ್ ಚಾಪ್ಟರ್ 2 ಡಬ್ಬಿಂಗ್ ಮುಗಿಸಿದ ಸಂಜಯ್ ದತ್; ಕುತೂಹಲ ಹೆಚ್ಚಿಸಿದ ಅಧೀರನ ಪಾತ್ರ
Published On - 7:00 am, Sat, 18 December 21