ಯೂಟ್ಯೂಬ್​​ನಿಂದ ಬಾಲಿವುಡ್​​ ವರೆಗೆ ಬೆಂಗಳೂರು ಯುವತಿಯ ಛಲ ಸಾಮಾನ್ಯದ್ದಲ್ಲ

Niharika NM movies: ಬೆಂಗಳೂರಿನ ಈ ಯುವತಿ, ಯೂಟ್ಯೂಬ್ ಕಾಮಿಡಿ ವಿಡಿಯೋಗಳನ್ನು ನಟಿಸುತ್ತಿದ್ದರು. ಆದರೆ ತಾವು ಯೂಟ್ಯೂಬಿನಿಂದ ಹೊರಬಂದು ಸಿನಿಮಾ ನಾಯಕಿಯಾಗ ಬೇಕು ಎಂದು ನಿಶ್ಚಯಿಸಿದ್ದು ಮಾತ್ರವಲ್ಲದೆ ಸತತ ಪ್ರಯತ್ನ, ಶ್ರಮ, ತ್ಯಾಗದ ಬಳಿಕ ಈಗ ನಾಯಕಿ ಆಗಿದ್ದಾರೆ. ಬಾಲಿವುಡ್​​ ಯುವ ಸ್ಟಾರ್ ನಟನ ಜೊತೆಗೆ ನಾಯಕಿಯಾಗಿ ನಟಿಸಿದ್ದಾರೆ.

ಯೂಟ್ಯೂಬ್​​ನಿಂದ ಬಾಲಿವುಡ್​​ ವರೆಗೆ ಬೆಂಗಳೂರು ಯುವತಿಯ ಛಲ ಸಾಮಾನ್ಯದ್ದಲ್ಲ
Niharika Nm

Updated on: Aug 02, 2026 | 6:46 PM

ಮುಖ್ಯಾಂಶಗಳು

  • ಯೂಟ್ಯೂಬ್​ನಲ್ಲಿ ಕಾಮಿಡಿ ವಿಡಿಯೋ ಮಾಡುತ್ತಿದ್ದ ಬೆಂಗಳೂರಿನ ಯುವತಿ.
  • ಸಿನಿಮಾ ತಾರೆಯರ ಜೊತೆ ಪ್ರೊಮೋಷನ್ ವಿಡಿಯೋ ಸಹ ಮಾಡುತ್ತಿದ್ದರು.
  • ಈಗ ಬಾಲಿವುಡ್​​ನಲ್ಲಿ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಛಲ ಒಂದಿದ್ದರೆ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂಬುದಕ್ಕೆ ಬೆಂಗಳೂರಿನ ಯುವತಿ ನಿಹಾರಿಕ ಎನ್​​ಎಂ (Niharika NM) ತಾಜಾ ಸಾಕ್ಷಿ. ನಿಹಾರಿಕಾ ಈಗ ಬಾಲಿವುಡ್​​ ಸಿನಿಮಾದ ನಾಯಕಿ. ಇದಕ್ಕೂ ಮುಂಚೆ ತೆಲುಗಿನ ಕೆಲ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ವಿಶೇಷವೆಂದರೆ ಬೆಂಗಳೂರಿನ ಈ ಯುವತಿ, ಯೂಟ್ಯೂಬ್ ಕಾಮಿಡಿ ವಿಡಿಯೋಗಳನ್ನು ನಟಿಸುತ್ತಿದ್ದರು. ಆದರೆ ತಾವು ಯೂಟ್ಯೂಬಿನಿಂದ ಹೊರಬಂದು ಸಿನಿಮಾ ನಾಯಕಿಯಾಗ ಬೇಕು ಎಂದು ನಿಶ್ಚಯಿಸಿದ್ದು ಮಾತ್ರವಲ್ಲದೆ ಸತತ ಪ್ರಯತ್ನ, ಶ್ರಮ, ತ್ಯಾಗದ ಬಳಿಕ ಈಗ ನಾಯಕಿ ಆಗಿದ್ದಾರೆ. ಬಾಲಿವುಡ್​​ ಯುವ ಸ್ಟಾರ್ ನಟನ ಜೊತೆಗೆ ನಾಯಕಿಯಾಗಿ ನಟಿಸಿದ್ದಾರೆ.

ಯೂಟ್ಯೂಬ್​​ನಲ್ಲಿ ಕಾಮಿಡಿ ವಿಡಿಯೋ ನೋಡುವವರು ನಿಹಾರಿಕಾ ಅವರನ್ನು ನೋಡಿರುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ನಿಹಾರಿಕಾ ಬೆಂಗಳೂರಿನ ಬಲು ಜನಪ್ರಿಯ ಯೂಟ್ಯೂಬ್ ಚಾನೆಲ್ ಆಗಿರುವ ‘ಜಾರ್ಡ್ ಇಂಡಿಯನ್​​’ನ ಯೂಟ್ಯೂಬ್ ವಿಡಿಯೋಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರು. ನಾಸರ್ ಹಾಗೂ ವಿನೀತ್ ಅವರು ಥರಹೇವಾರಿ ಹಾಸ್ಯ ಪ್ರಧಾನ ವಿಡಿಯೋಗಳನ್ನು ಈ ಜಾರ್ಡ್ ಇಂಡಿಯನ್ ಚಾನೆಲ್​​ನಲ್ಲಿ ಅಪ್​ಲೋಡ್ ಮಾಡುತ್ತಿದ್ದರು. ಇವರ ವಿಡಿಯೋಗಳಲ್ಲಿ ಆಗೊಮ್ಮೆ ಈಗೊಮ್ಮೆ, ವಿಶೇಷವಾಗಿ ವಯಸ್ಸಾದ ಮಹಿಳೆಯ ಪಾತ್ರದಲ್ಲಿ ನಿಹಾರಿಕಾ ಕಾಣಿಸಿಕೊಳ್ಳುತ್ತಿದ್ದರು. ನಿಹಾರಿಕ ಮೂಲತಃ ಕನ್ನಡತಿ ಅಲ್ಲದೇ ಹೋದರೂ ಅವರು ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ.

ಜಾರ್ಡ್ ಇಂಡಿಯನ್ ವಿಡಿಯೋಗಳಲ್ಲಿ ಸಾಮಾನ್ಯವಾಗಿ ತಾಯಿಯ ಪಾತ್ರದಲ್ಲಿ ನಿಹಾರಿಕಾ ಕಾಣಿಸಿಕೊಳ್ಳುತ್ತಿದ್ದರು. ತಮ್ಮ ನಟನೆ, ತಮಾಷೆ ರೀತಿಯ ಇಂಗ್ಲೀಷ್ ಮಾತು, ಹಾವ-ಭಾವಗಳಿಂದ ಸಖತ್ ನಗಿಸುತ್ತಿದ್ದರು. ಆ ಬಳಿಕ ಒಬ್ಬರೇ ಯೂಟ್ಯೂಬ್ ಕಂಟೆಂಟ್ ಕೊಡಲು ಪ್ರಾರಂಭಿಸಿದರು. ‘ಕೆಜಿಎಫ್’ ಸಿನಿಮಾ ಬಿಡುಗಡೆ ಸಮಯದಲ್ಲಿ ನಿಹಾರಿಕಾ ಅವರು ಯಶ್ ಜೊತೆಗೆ ಮಾಡಿದ್ದ ವಿಡಿಯೋ ನೆನಪಿದ್ದೇ ಇರುತ್ತದೆ. ಅದಾದ ಬಳಿಕ ಮಹೇಶ್ ಬಾಬು, ಚಿಯಾನ್ ವಿಕ್ರಂ ಇನ್ನೂ ಹಲವರೊಟ್ಟಿಗೆ ವಿಡಿಯೋಗಳನ್ನು ಸಹ ನಿಹಾರಿಕಾ ಮಾಡಿದರು. ಹಾಲಿವುಡ್​​ಗೆ ಹೋಗಿ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಅವರನ್ನು ಭೇಟಿ ಆದರು, ಮೈಖಲ್ ಜಾರ್ಡನ್ ಅನ್ನು ಅಪ್ಪಿಕೊಂಡರು. ಚಿತ್ರರಂಗವನ್ನು ಸಹ ಆ ಸಮಯದಲ್ಲಿ ಹತ್ತಿರದಿಂದ ನೋಡಿದರು. ತಾವೂ ನಟಿ ಆಗಬೇಕು ಎಂದು ಕನಸು ಕಟ್ಟಿಕೊಂಡರು.

ಇದನ್ನೂ ಓದಿ:‘ಡಯಾಲಿಸಿಸ್ ಮಾಡಿಸಿಕೊಂಡು ಸಿನಿಮಾ ಶೂಟಿಂಗ್​​ಗೆ ಬರುತ್ತಿದ್ದರು ಅಂಬರೀಶ್’

ತಮ್ಮನ್ನು ಯೂಟ್ಯೂಬ್​​ಗೆ ಸೀಮಿತಗೊಳಿಸಿಕೊಳ್ಳದ ನಿಹಾರಿಕಾ ಮುಂದುವರೆದು ಪ್ರಯತ್ನ ಮಾಡಿ ಈಗ ಸಿನಿಮಾ ನಾಯಕಿ ಆಗಿದ್ದಾರೆ. ನಿಹಾರಿಕಾ ಮೊದಲು ‘ಪೆರುಸು’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾನಲ್ಲಿ ಮಧ್ಯಮ ವರ್ಗ ಕುಟುಂಬದ ಯುವತಿಯ ಪಾತ್ರ. ಆ ಸಿನಿಮಾ ಸಾಧಾರಣ ಯಶಸ್ಸು ಕಂಡಿತು. ಬಳಿಕ 2025ರಲ್ಲೇ ತೆಲುಗಿನ ‘ಮಿತ್ರ ಮಂಡಳಿ’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದರು. ಆ ಸಿನಿಮಾ ಹಿಟ್ ಆಯ್ತು. ನಿಹಾರಿಕಾ ನಟನೆಗೂ ಮೆಚ್ಚುಗೆ ವ್ಯಕ್ತವಾಯ್ತು.

ಇದೀಗ ನಿಹಾರಿಕಾ, ಬಾಲಿವುಡ್​​ನ ಯುವ ಸ್ಟಾರ್ ನಟ ರಾಘವ್ ಜುರೆಲ್ ಜೊತೆಗೆ ‘ಭಾಯಿ ಥೆರ ಸ್ಟಾರ್ ಹೇ’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಪ್ರಚಾರವನ್ನು ರಾಘವ್ ಜೊತೆ ಸೇರಿ ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಲೇಟೆಂಟ್​​ಗೆ ಸಹ ಹೋಗಿ ಬಂದರು. ಯೂಟ್ಯೂಬರ್ ಆಗಿ ಕಾಮಿಡಿ ವಿಡಿಯೋಗಳನ್ನು ಮಾಡುತ್ತಿದ್ದ ನಿಹಾರಿಕಾ ತನ್ನ ಸತತ ಪರಿಶ್ರಮ, ಶ್ರಮದಿಂದ ಇಂದು ಬಾಲಿವುಡ್ ಹೀರೋಯಿನ್ ಆಗಿದ್ದಾರೆ. ‘ಭಾಯಿ ಥೆರ ಸ್ಟಾರ್ ಹೇ’ ಸಿನಿಮಾದ ಬಳಿಕ ‘ಇದಯುಂ ಮುರಲಿ’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:45 pm, Sun, 2 August 26

Loading...
Unable to load recommendations.
Follow Us