Yash: ಯಶ್​ ಪುತ್ರ ಹೇಳಿದ ಒಂದೇ ಪದಕ್ಕೆ ಮಿಲಿಯನ್​ ವ್ಯೂಸ್​! ಯಾವ ಸ್ಟಾರ್​ಗೂ ಕಮ್ಮಿ ಇಲ್ಲ ಯಥರ್ವ್​ ಹವಾ

Yatharv Yash: ‘ರಾಕಿಂಗ್​ ಸ್ಟಾರ್​’ ಯಶ್​ ಮತ್ತು ರಾಧಿಕಾ ಪಂಡಿತ್​ ದಂಪತಿಯ ಪುತ್ರ ಯಥರ್ವ್​ನ ಒಂದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ. 14 ಲಕ್ಷಕ್ಕೂ ಅಧಿಕ ವೀವ್ಸ್​ ಪಡೆದುಕೊಂಡಿದೆ.ತಮ್ಮ ಮಕ್ಕಳ ವಿಡಿಯೋ ಮತ್ತು ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಯಶ್​ ಮತ್ತು ರಾಧಿಕಾ ಆಗಾಗ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಯಶ್​ ಈಗೊಂದು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಪುತ್ರ ಯಥರ್ವ್​ ತೊದಲು ನುಡಿಯಲ್ಲಿ ಮಾತನಾಡಿರುವುದು ಮುದ್ದಾಗಿದೆ. ಅಪ್ಪನ ಜೊತೆ ಆಟವಾಡುತ್ತ ಆತ ನಗು ಚೆಲ್ಲಿದ್ದಾನೆ. ಪುಟ್ಟ ಕಂದನ ಜೊತೆ ತಾವು ಕೂಡ ಮಗುವಾಗಿ ಬೆರೆತು ಹೋಗಿದ್ದಾರೆ ‘ರಾಕಿಂಗ್​ ಸ್ಟಾರ್​’ ಯಶ್​. ಇಡೀ ವಿಡಿಯೋದಲ್ಲಿ ಯಥರ್ವ್​ ಹೇಳಿರುವುದು ಒಂದೇ ಒಂದು ಪದ!

Yash: ಯಶ್​ ಪುತ್ರ ಹೇಳಿದ ಒಂದೇ ಪದಕ್ಕೆ ಮಿಲಿಯನ್​ ವ್ಯೂಸ್​! ಯಾವ ಸ್ಟಾರ್​ಗೂ ಕಮ್ಮಿ ಇಲ್ಲ ಯಥರ್ವ್​ ಹವಾ
ಯಶ್​ ಯಥರ್ವ್​
Edited By:

Updated on: Apr 03, 2026 | 11:10 AM

ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ನಟ ಯಶ್​ ಅವರು ತಮ್ಮ ಕುಟುಂಬಕ್ಕಾಗಿ ಸಮಯ ಮೀಸಲಿಡುತ್ತಾರೆ. ಸದ್ಯ ಅವರ ಗಮನವೆಲ್ಲ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಬಿಡುಗಡೆಯ ಮೇಲಿದೆ. ಅದರ ನಡುವೆಯೂ ಅವರು ಮುದ್ದು ಮಗ ಯಥರ್ವ್​ ಜೊತೆ ಕಾಲ ಕಳೆಯುತ್ತಿದ್ದಾರೆ. ಆ ಸುಂದರ ಕ್ಷಣಗಳ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದು, ಅಭಿಮಾನಿಗಳ ವಲಯದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ತಮ್ಮ ಮಕ್ಕಳ ವಿಡಿಯೋ ಮತ್ತು ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಯಶ್​ ಮತ್ತು ರಾಧಿಕಾ ಆಗಾಗ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಯಶ್​ ಈಗೊಂದು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಪುತ್ರ ಯಥರ್ವ್​ ತೊದಲು ನುಡಿಯಲ್ಲಿ ಮಾತನಾಡಿರುವುದು ಮುದ್ದಾಗಿದೆ. ಅಪ್ಪನ ಜೊತೆ ಆಟವಾಡುತ್ತ ಆತ ನಗು ಚೆಲ್ಲಿದ್ದಾನೆ. ಪುಟ್ಟ ಕಂದನ ಜೊತೆ ತಾವು ಕೂಡ ಮಗುವಾಗಿ ಬೆರೆತು ಹೋಗಿದ್ದಾರೆ ‘ರಾಕಿಂಗ್​ ಸ್ಟಾರ್​’ ಯಶ್​. ಇಡೀ ವಿಡಿಯೋದಲ್ಲಿ ಯಥರ್ವ್​ ಹೇಳಿರುವುದು ಒಂದೇ ಒಂದು ಪದ!

ಯಥರ್ವ್​ ಈಗಷ್ಟೇ ಮಾತನಾಡುವುದನ್ನು ಕಲಿಯುತ್ತಿದ್ದಾನೆ. ತನ್ನದೇ ಭಾಷೆಯಲ್ಲಿ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಾನೆ. ಅಪಾಪೀನ್​… ಆಪಾಪೀನ್​… ಎಂದು ಪದೇಪದೇ ಹೇಳಿದ್ದಾನೆ. ಅದು ಏನೆಂಬುದು ಸ್ವತಃ ಯಶ್​ಗೂ ಗೊತ್ತಾಗಿಲ್ಲ. ‘ಅಪಾಪೀನ್​… ಅಂದರೆ ಏನು ಮಗನೇ’ ಎಂದು ಅವರು ಪ್ರಶ್ನಿಸಿದ್ದಾರೆ. ವಿಮಾನ ಹೋಗುವ ರೀತಿಯಲ್ಲಿ ಯಥರ್ವ್​ ಸನ್ನೆ ಮಾಡಿ ತೋರಿಸಿದ್ದಾನೆ. ಆಗಲೇ ಯಶ್​ಗೆ ಗೊತ್ತಾಗಿದ್ದು ‘ಅಪಾಪೀನ್​’ ಎಂದರೆ ಯಥರ್ವ್​ನ ತೊದಲು ಭಾಷೆಯಲ್ಲಿ ‘ಏರೋಪ್ಲೇನ್​’ ಅಂತ!

ಈ ಅಪ್ಪ-ಮಗನ ಮುದ್ದಾದ ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಅಪ್​ಲೋಡ್​ ಮಾಡಿದ ಕೆಲವೇ ಗಂಟೆಗಳಲ್ಲಿ 14 ಲಕ್ಷಕ್ಕೂ ಅಧಿಕ ಬಾರಿ ಇದು ವೀಕ್ಷಣೆ ಕಂಡಿದೆ. ಅಷ್ಟರಮಟ್ಟಿಗೆ ಸೋಶಿಯಲ್​ ಮೀಡಿಯಾದಲ್ಲಿ ಹವಾ ಹೊಂದಿದ್ದಾನೆ ಪುಟಾಣಿ ಯಥರ್ವ್​! ಇನ್ನು, ಯಶ್​-ರಾಧಿಕಾ ಪುತ್ರಿ ಆಯ್ರಾ ಕೂಡ ಸಿಕ್ಕಾಪಟ್ಟೆ ಚೂಟಿ ಆಗಿದ್ದಾಳೆ. ಅವಳ ವಿಡಿಯೋಗಳು ಕೂಡ ಮಿಲಿಯನ್​ ಗಟ್ಟಲೆ ವ್ಯೂಸ್​ ಪಡೆದುಕೊಳ್ಳುತ್ತವೆ.

ಇದನ್ನೂ ಓದಿ: Chahal dhanashree meet Yash Radhika ಬೆಂಗಳೂರಲ್ಲಿ ಯಶ್​-ರಾಧಿಕಾ ದಂಪತಿಯ ಭೇಟಿ ಮಾಡಿದ ಚಹಾಲ್​-ಧನಶ್ರೀ

 

Published On - 11:42 am, Sat, 6 March 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us