ಯಶ್ ಅವರು ಇತ್ತೀಚೆಗೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಮದುವೆಯಲ್ಲಿ ಭಾಗಿ ಆಗಿದ್ದರು. ಈ ವೇಳೆ ಯಶ್ ಅವರು ಹೊಸ ಹೇರ್ಸ್ಟೈಲ್ನಲ್ಲಿ ಕಾಣಿಸಿಕೊಂಡಿದ್ದರು. ಅವರು ತಲೆ ಕೂದಲನ್ನು ಶಾರ್ಟ್ ಮಾಡಿಸಿದ್ದರು. ಇದಕ್ಕೆ ಕಾರಣ ಏನು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಇದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಯಶ್ ಹೇರ್ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇದರ ಹಿಂದಿನ ರಹಸ್ಯ ಏನು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ.
‘ನಾವು ಇನ್ನೂ ಹೋಟೆಲ್ ತಲುಪಿರಲಿಲ್ಲ. ಆಗಲೇ ಫೋಟೋಗಳು ಹರಿದಾಡಲು ಆರಂಭಿಸಿದ್ದವು. ಕೆಲವೇ ನಿಮಿಷಗಳಲ್ಲಿ ಇಂಟರ್ನೆಟ್ನಲ್ಲಿ ಫೋಟೋ ವೈರಲ್ ಆಯಿತು. ಪ್ರತಿಕ್ರಿಯೆ ಅಗಾಧವಾಗಿತ್ತು. ಈ ಲುಕ್ ಸಾಕಷ್ಟು ಪರಿಣಾಮ ಬೀರಿತ್ತು’ ಎಂದು ಹಿಂದುಸ್ತಾನ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಅಲೆಕ್ಸ್ ವಿಜಯಕಾಂತ್ ಹೇಳಿಕೊಂಡಿದ್ದಾರೆ.
‘ಸ್ಕ್ರಿಪ್ಟ್ನಿಂದ ಸ್ಫೂರ್ತಿ ಪಡೆದು ಈ ಹೇರ್ಸ್ಟೈಲ್ ಮಾಡಿದ್ದೇನೆ. ನಾನು ಮೊದಲು ಸ್ಕ್ರಿಪ್ಟ್ ಕೇಳಿದೆ. ಈ ಕಥೆಗೆ ಸಣ್ಣ ತಲೆಗೂದಲು ಹೊಂದುತ್ತದೆ ಎಂದುಕೊಂಡೆ. ಸಿನಿಮಾದ ಪಾತ್ರ ಏನನ್ನು ಬೇಡುತ್ತದೆಯೋ ಅದೇ ರೀತಿಯಲ್ಲಿ ಹೇರ್ಸ್ಟೈಲ್ ಮಾಡಿರುವೆ’ ಎಂದು ಮಾಹಿತಿ ನೀಡಿದ್ದಾರೆ ಅವರು.
ಹೇರ್ಸ್ಟೈಲ್ನ ನೋಡಿ ಯಶ್ ಅವರು ಯಾವ ರೀತಿಯ ರಿಯಾಕ್ಷನ್ ನೀಡಿದರು ಎನ್ನುವ ಬಗ್ಗೆಯೂ ವಿಜಯಕಾಂತ್ ಅವರು ಮಾತನಾಡಿದ್ದಾರೆ. ‘ಅವರು ನನ್ನನ್ನು ಹಗ್ ಮಾಡಿದರು. ಅಲೆಕ್ಸ್ ನೀವು ಸಾಧಿಸಿದಿರಿ ಎಂದರು’ ಎಂಬುದು ವಿಜಯಕಾಂತ್ ಮಾತು.
ಯಶ್ಗೆ ಹೇರ್ಸ್ಟೈಲ್ ಮಾಡುತ್ತಿರುವ ಫೋಟೋನ ಅಲೆಕ್ಸ್ ವಿಜಯಕಾಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಶ್ ಅವರು ‘ಕೆಜಿಎಫ್’ ಚಿತ್ರಗಳಿಗಾಗಿ ಉದ್ದ ಕೂದಲು ಬಿಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರು ಇದೇ ರೀತಿಯ ಹೇರ್ಸ್ಟೈಲ್ನ ಕಾಯ್ದುಕೊಂಡು ಬಂದಿದ್ದರು. ಈಗ ಅದಕ್ಕೆ ಕತ್ತರಿ ಹಾಕಿದ್ದಾರೆ.
ಇದನ್ನೂ ಓದಿ: ಸ್ಟೈಲಿಶ್ ಸ್ಟಾರ್ ಎಂದು ಮೆರೆಯುತ್ತಿದ್ದ ಅಲ್ಲು ಅರ್ಜುನ್ಗೆ ಶಾಕ್ ಕೊಟ್ಟಿದ್ದ ಯಶ್
ಯಶ್ ಹೇರ್ಸ್ಟೈಲ್ ಮೊದಲು ರಿವೀಲ್ ಆಗಿದ್ದು ಅನಂತ್ ಅಂಬಾನಿ ಮದುವೆ ಸಂದರ್ಭದಲ್ಲಿ. ಇದಾದ ಬಳಿಕ ಅನೇಕರು ಈ ಫೋಟೋಗಳನ್ನು ಹಂಚಿಕೊಳ್ಳುತ್ತಾ ಬರುತ್ತಿದ್ದಾರೆ. ಅನೇಕರು ಈ ಹೇರ್ಸ್ಟೈಲ್ನ ಫಾಲೋ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.