ಸ್ಯಾಂಡಲ್ವುಡ್ನ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಕೊರೊನಾದ ಆರ್ಭಟ ಹೆಚ್ಚಾಗಿರೋದ್ರಿಂದ ಮನೆಯಲ್ಲೇ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಎಲ್ಲೂ ಹೊರಹೋಗಲು ಬಯಸದೆ ಎರಡು ಪುಟ್ಟ ಪುಟ್ಟ ಕಂದಮ್ಮಗಳ ಜೊತೆ ಕುಟುಂಬದವರೊಂದಿಗೆ ಎಂಜಾಯ್ ಮಾಡ್ತಿದ್ದಾರೆ.
ಈ ಬಗ್ಗೆ ತಮಾಷೆಯಾಗಿ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿರುವ ಯಶ್, ಸರ್ಕಾರ ಹೊಸ ಲಾಕ್‌ಡೌನ್ ನಿಯಮಗಳನ್ನು ಘೋಷಿಸಿದೆ. ಆದರೆ ಏಕೋ, ಏನೋ ಗೊತ್ತಿಲ್ಲ. ಇದರ ಹಿಂದೆ ನನ್ನ ಪತ್ನಿಯ ಕೈವಾಡವಿದೆ ಅಂತಾ ಅನಿಸುತ್ತಿದೆ ಎಂದು ಜೋಕ್ ಹೊಡೆದಿದ್ದಾರೆ.
ರಾತ್ರಿ 8 ಗಂಟೆಗೆ ಮನೆಗೆ ವಾಪಸ್ ಬಾ, ವೀಕೆಂಡ್‌ನಲ್ಲಿ ಮನೆಯಲ್ಲೇ ಇರು ಎಂಬ ನಿಯಮಗಳಿಂದ ಮನೆಯಲ್ಲೇ ಕಾಲ ಕಳೆಯುವಂತೆ ಆಗಿದೆ. ಆದರೆ, ಇಂಥ ‘ಪತ್ನಿ ಸ್ನೇಹಿ’ ನಿಯಮಗಳು ನಮ್ಮನ್ನು ಸುರಕ್ಷಿತವಾಗಿರಿಸುತ್ತದೆ’ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Published On - 1:05 pm, Mon, 29 June 20