ಅಂಬರೀಷ್ ಆಸೆ ಈಡೇರಿಸಿದ ಯಶ್; ಅಭಿಷೇಕ್ ಮಗನಿಗೆ ವಿಶೇಷ ಉಡುಗೊರೆ

ರಾಕಿಂಗ್ ಸ್ಟಾರ್ ಯಶ್ ಹಾಗೂ ಅಂಬರೀಷ್ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಅಂಬರೀಷ್ ಅವರ ಆಸೆಯಂತೆ ಅಭಿಷೇಕ್ ಅವರ ಮಗುವಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಈ ಮೂಲಕ ನಟನ ಮೇಲಿರುವ ವಿಶೇಷ ಪ್ರೀತಿಯನ್ನು ಯಶ್ ತೋರಿಸಿದ್ದಾರೆ. ಯಶ್ ಅವರು ಈಗ 'ಟಾಕ್ಸಿಕ್' ಮತ್ತು 'ರಾಮಾಯಣ' ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಅಂಬರೀಷ್ ಆಸೆ ಈಡೇರಿಸಿದ ಯಶ್; ಅಭಿಷೇಕ್ ಮಗನಿಗೆ ವಿಶೇಷ ಉಡುಗೊರೆ
ಸುಮಲತಾ-ಯಶ್
Edited By:

Updated on: Mar 05, 2025 | 11:39 AM

ನಟ ರಾಕಿಂಗ್ ಸ್ಟಾರ್ ಯಶ್ ಅವರು ಅಂಬರೀಷ್ ಜೊತೆ ವಿಶೇಷ ನಂಟು ಹೊಂದಿದ್ದಾರೆ. ಈ ಕಾರಣಕ್ಕೆ ಸುಮಲತಾ ಆಯೋಜನೆ ಮಾಡುವ ವಿಶೇಷ ಕಾರ್ಯಕ್ರಮಗಳಿಗೆ ಯಶ್ ಹಾಜರಿ ಹಾಕುತ್ತಾರೆ. ಯಶ್ ಹಾಗೂ ದರ್ಶನ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವಾಗಲೇ ಇಬ್ಬರನ್ನೂ ಒಟ್ಟಿಗೆ ಕರೆತಂದು ‘ಜೋಡೆತ್ತು’ ಮಾಡಿದ್ದು ಸುಮಲತಾ (Sumalatha) ಅವರು. ಇದು ಯಶ್​​ಗೆ ಅಂಬರೀಷ್ ಮೇಲಿರುವ ಗೌರವವನ್ನು ತೋರಿಸುತ್ತದೆ. ಈಗ ಅಂಬರೀಷ್ ಅವರ ಆಸೆಯನ್ನು ಯಶ್ ಅವರು ಈಡೇರಿಸಿದ್ದಾರೆ. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ಯಶ್ ಅವರಿಗೆ ಆಯ್ರಾ ಜನಿಸಿದಾಗ ಎಲ್ಲ ಕಡೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಆಗ ಅಂಬರೀಷ್ ಕೂಡ ಇದ್ದರು. ಯಶ್ ಮಗಳಿಗೆ ಕಲಘಟಗಿ ತೊಟ್ಟಿಲನ್ನು ರೆಬೆಲ್ ಸ್ಟಾರ್ ಅಂಬರೀಷ್ ಮಾಡಿಸಿಕೊಟ್ಟಿದ್ದರು. ಇದನ್ನು ಯಶ್ ಅವರು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಈಗ ಅವರು ಕೂಡ ವಿಶೇಷ ತೊಟ್ಟಿಲು ಮಾಡಿಸಿ ಅಭಿಷೇಕ್ ಮನೆಗೆ ಕಳುಹಿಸಿದ್ದಾರೆ.

ಅಭಿಷೇಕ್ ಅವರಿಗೆ ಇತ್ತೀಚೆಗೆ ಗಂಡು ಮಗು ಜನಿಸಿತ್ತು. ಶೀಘ್ರವೇ ತೊಟ್ಟಿಲು ಶಾಸ್ತ್ರ ನಡೆಯಲಿದೆ. ಈ ಕಾರಣಕ್ಕೆ ಯಶ್ ಅವರು ಕಲಘಟಗಿಯಿಂದ ತೊಟ್ಟಿಲು ಮಾಡಿಸಿ ಅಭಿಷೇಕ್ ಮನೆ ತಲುಪಿಸಿದ್ದಾರೆ. ಇದು ಯಶ್ ಹಾಗೂ ಅಂಬಿ ಅಭಿಮಾನಿಗಳಿಗೆ ಖುಷಿ ನೀಡಿದೆ.

ಇದನ್ನೂ ಓದಿ
ಯಶ್, ಸುದೀಪ್ ಅವರೆಲ್ಲ ಬಂದ್ರೆ ಮೇಂಟೇನ್ ಮಾಡೋದು ಕಷ್ಟ: ಸಾಧು ಕೋಕಿಲ
ತಮಿಳಿನಲ್ಲಿ ಹಿಟ್ ಕೊಟ್ಟ ನಿರ್ದೇಶಕನ ಜೊತೆ ಯಶ್ ಮುಂದಿನ ಸಿನಿಮಾ?
Fact Check: ಯಶ್ ಫ್ಯಾಮಿಲಿ ಸಮೇತ ಕುಂಭಮೇಳಕ್ಕೆ ಹೋಗಿದ್ದು ನಿಜವೇ?
ಬಿ. ಜಯಶ್ರೀಗೆ ಟಿವಿ9 ‘ಹೆಮ್ಮೆಯ ಕನ್ನಡತಿ’ ಜೀವಮಾನ ಸಾಧನೆ ಪ್ರಶಸ್ತಿ

ಇದನ್ನೂ ಓದಿ: ಯಶ್, ಸುದೀಪ್ ಅವರೆಲ್ಲ ಬಂದ್ರೆ ಮೇಂಟೇನ್ ಮಾಡೋದು ಕಷ್ಟ: ಸಾಧು ಕೋಕಿಲ

 ಅಂಬಿಯ ಆಸೆ

ಅಭಿಷೇಕ್​ಗೆ ಮಗು ಆದ ಬಳಿಕ ಕಲಘಟಗಿ ತೊಟ್ಟಿಲಿನಲ್ಲಿ ಮಗುವನ್ನು ಮಲಗಿಸಿ ತೂಗಿಸಬೇಕು ಎಂಬ ಆಸೆ ಅಂಬರೀಷ್ ಅವರದ್ದಾಗಿತ್ತು. ಆ ಮಾತನ್ನು ಯಶ್ ನೆನಪಿನಲ್ಲಿಟ್ಟುಕೊಂಡಿದ್ದರು. ಅಭಿಷೇಕ್​ಗೆ ಮಗು ಜನಿಸುತ್ತಿದ್ದಂತೆ ತೊಟ್ಟಿಲು ಮಾಡೋಕೆ ಆರ್ಡರ್ ಕೊಟ್ಟಿದ್ದರು ಎನ್ನಲಾಗಿದೆ. ಯಶ್ ಅವರು ಈಗ ಅಭಿಷೇಕ್ ಅಂಬರೀಷ್ ಮಗನ ನಾಮಕರಣಕ್ಕೆ ಅವಿಸ್ಮರಣೀಯ ಉಡುಗೊರೆಯನ್ನ ನೀಡಿದ್ದಾರೆ.

ತೊಟ್ಟಿಲು

ತೊಟ್ಟಿಲು

ಟಾಕ್ಸಿಕ್ ಸಿನಿಮಾ

ಸಿನಿಮಾ ವಿಚಾರಕ್ಕೆ ಬರೋದಾದರೆ ಯಶ್ ಅವರು ಸದ್ಯ ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಯಶ್ ಅವರು ‘ರಾಮಾಯಣ’ ಚಿತ್ರದ ಶೂಟ್​ನಲ್ಲಿ ಭಾಗಿ ಆಗುತ್ತಿದ್ದಾರೆ ಎನ್ನುವ ಮಾಹಿತಿ ಇತ್ತೀಚೆಗೆ ಲಭ್ಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:37 am, Wed, 5 March 25

ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More
Loading...
Unable to load recommendations.
Follow Us