ಪಾರ್ಟಿಯಲ್ಲಿ ಶಂಕರ್​​ ನಾಗ್ ಹಾಡು ಹಾಡಿದ ಯಶ್; ಇಲ್ಲಿದೆ ವಿಡಿಯೋ

ನಟ ಯಶ್ ಅವರು ಶಂಕರ್ ನಾಗ್ ಅವರ ದೊಡ್ಡ ಅಭಿಮಾನಿ. ಇತ್ತೀಚೆಗೆ ಯಶ್ ಶಂಕರ್ ನಾಗ್ ಅವರ ಹಾಡನ್ನು ಹಾಡಿರುವ ವಿಡಿಯೋ ವೈರಲ್ ಆಗಿದೆ. ಇದು ಅವರ ಕನ್ನಡ ಪ್ರೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ತಮ್ಮ ಎತ್ತರಕ್ಕೆ ಬೆಳೆದರೂ, ಯಶ್ ಯಾವಾಗಲೂ ಕನ್ನಡದ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವ ಹೊಂದಿದ್ದಾರೆ.

ಪಾರ್ಟಿಯಲ್ಲಿ ಶಂಕರ್​​ ನಾಗ್ ಹಾಡು ಹಾಡಿದ ಯಶ್; ಇಲ್ಲಿದೆ ವಿಡಿಯೋ
ಯಶ್

Updated on: Jan 09, 2026 | 1:13 PM

ನಟ ರಾಕಿಂಗ್ ಸ್ಟಾರ್ ಯಶ್ ಅವರು ಶಂಕರ್​ ನಾಗ್ ಅವರ ದೊಡ್ಡ ಅಭಿಮಾನಿ. ಇದು ಹಲವು ಬಾರಿ ಸಾಬೀತಾಗಿದೆ. ಯಶ್​ ಅವರು ‘ಗೂಗ್ಲಿ’ ಸಿನಿಮಾದಲ್ಲಿ ಶಂಕರ್ ನಾಗ್ ಗೆಟಪ್​​ನಲ್ಲಿಯೂ ಕಾಣಿಸಿಕೊಂಡಿದ್ದರು. ಈಗ ಯಶ್ ಅವರು ಪಾರ್ಟಿಯಲ್ಲಿ ಶಂಕರ್ ನಾಗ್ ಸಿನಿಮಾದ ಹಾಡು ಹಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಯಶ್ ಅವರ ಕನ್ನಡ ಪ್ರೀತಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಅಂದಹಾಗೆ ಇದು ಅವರ ಬರ್ತ್​​​ಡೇ ಪಾರ್ಟಿ ಸಂದರ್ಭದ ವಿಡಿಯೋ ಹೌದೋ ಅಥವಾ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಯಶ್ ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಕನ್ನಡದ ಬಗ್ಗೆ ಅವರು ತೋರುವ ಪ್ರೀತಿ ಕಡಿಮೆ ಮಾಡಿಲ್ಲ. ಪರಭಾಷೆಯಲ್ಲಿ ಹೆಚ್ಚು ನಟಿಸೋ ಬದಲು, ಪರಭಾಷೆಯವರನ್ನು ಇಲ್ಲಿಗೆ ಕರೆಸಬೇಕು ಎಂಬ ಆಲೋಚನೆ ಅವರಿಗೆ ಯಾವಾಗಲೂ ಇತ್ತು. ‘ಟಾಕ್ಸಿಕ್’ ಚಿತ್ರ ಅದಕ್ಕೆ ಉತ್ತಮ ಉದಾಹರಣೆ. ಪರಭಾಷಾ ತಂತ್ರಜ್ಞರು ಹಾಗೂ ಕಲಾವಿದರನ್ನು ಯಶ್ ಈ ಚಿತ್ರಕ್ಕಾಗಿ ಕರೆಸಿಕೊಂಡಿದ್ದಾರೆ. ಹಾಲಿವುಡ್ ತಂತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಆದರೆ, ಅವರ ಕನ್ನಡ ಪ್ರಿತಿ ಕಡಿಮೆ ಆಗಿಲ್ಲ.

ಇದನ್ನೂ ಓದಿ: ದಾಖಲೆಯ ವೀಕ್ಷಣೆ ಕಂಡ ‘ಟಾಕ್ಸಿಕ್’ ಟೀಸರ್; ಇದು ಯಶ್ ಹವಾ

ಜನವರಿ 8 ಯಶ್ ಬರ್ತ್​​ಡೇ. ಈ ಸಂದರ್ಭದ ವಿಡಿಯೋ ಎಂದು ವಿಡಿಯೋ ಒಂದು ವೈರಲ್ ಆಗುತ್ತಿದೆ.ಈ ವಿಡಿಯೋದಲ್ಲಿ ಯಶ್ ಅವರು ಶಂಕರ್ ನಾಗ್ ಅವರ ‘ಸಿಬಿಐ ಶಂಕರ್’ ಸಿನಿಮಾದ ‘ಗೀತಾಂಜಲಿ’ ಹಾಡನ್ನು ಹಾಡುತ್ತಿದ್ದಾರೆ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಇದು ಹಳೆಯ ವಿಡಿಯೋ ಎನ್ನಲಾಗುತ್ತಿದೆ.

ಯಶ್ ಅವರು ಸದ್ಯ ಮುಂಬೈನಲ್ಲಿದ್ದಾರೆ. ಅಲ್ಲದೆ, ಯಶ್ ಅವರು ಇತ್ತೀಚೆಗೆ ಗೆಟಪ್​ ಬದಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಅವರು ಮುಖ ಹಾಗೂ ತಲೆಯನ್ನು ಮುಚ್ಚಿಕೊಂಡು ಹೋಗಿದ್ದರು. ಈ ವಿಡಿಯೋದಲ್ಲಿ ಅವರು ಹಳೆಯ ಗೆಟಪ್​​ನಲ್ಲೇ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.