23 ವರ್ಷದ ಯುವರತ್ನ ನಾಯಕಿ ಸಾಯೇಶಾ ಪತಿ ತಮಿಳಿನ ಸ್ಟಾರ್​ ಹೀರೋ; ಇಲ್ಲಿದೆ ಇವರ ಲವ್​ ಸ್ಟೋರಿ

ಸಾಯೇಶಾ ಮೂಲತಃ ಮುಂಬೈನವರು. 1997ರ ಆಗಸ್ಟ್​ 12ರಂದು ಸಾಯೇಶಾ ಜನಿಸಿದರು. 1987ರಿಂದ 1995ರ ಅವಧಿಯಲ್ಲಿ ಬಾಲಿವುಡ್​ನಲ್ಲಿ ಆ್ಯಕ್ಟಿವ್​ ಆಗಿದ್ದ ನಟ ಹಾಗೂ ನಿರ್ಮಾಪಕ ಸುಮೀತ್​ ಸೈಗಲ್​ ಪುತ್ರಿ ಸಾಯೇಶಾ.

23 ವರ್ಷದ ಯುವರತ್ನ ನಾಯಕಿ ಸಾಯೇಶಾ ಪತಿ ತಮಿಳಿನ ಸ್ಟಾರ್​ ಹೀರೋ; ಇಲ್ಲಿದೆ ಇವರ ಲವ್​ ಸ್ಟೋರಿ
ಸಾಯೇಶಾ ಸೈಗಲ್​

Updated on: Apr 09, 2021 | 8:42 PM

ತೆಲುಗು ಹಾಗೂ ತಮಿಳಿನಲ್ಲಿ ಮಿಂಚಿ ನಂತರ ಯುವರತ್ನ ಸಿನಿಮಾ ಮೂಲಕ ಸ್ಯಾಂಡಲ್​​ವುಡ್​ಗೆ ಕಾಲಿಟ್ಟವರು ನಟಿ ಸಾಯೇಶಾ ಸೈಗಲ್​. ಯುವರತ್ನದಲ್ಲಿ ಸಿಕ್ಕ ಅವಕಾಶವನ್ನು ಸಾಯೇಶಾ ಸರಿಯಾಗಿ ಬಳಸಿಕೊಂಡಿದ್ದರು. ಸಾಯೇಶಾಗೆ ಮದುವೆ ಆಗಿದೆ ಅನ್ನೋ ವಿಚಾರ ಅನೇಕರಿಗೆ ಗೊತ್ತಿಲ್ಲ. ಅದರಲ್ಲೂ ಇವರದ್ದು ಲವ್​ ಮ್ಯಾರೇಜ್​ ಅನ್ನೋದು ವಿಶೇಷ.

ಸಾಯೇಶಾ ಮೂಲತಃ ಮುಂಬೈನವರು. 1997ರ ಆಗಸ್ಟ್​ 12ರಂದು ಸಾಯೇಶಾ ಜನಿಸಿದರು. 1987ರಿಂದ 1995ರ ಅವಧಿಯಲ್ಲಿ ಬಾಲಿವುಡ್​ನಲ್ಲಿ ಆ್ಯಕ್ಟಿವ್​ ಆಗಿದ್ದ ನಟ ಹಾಗೂ ನಿರ್ಮಾಪಕ ಸುಮೀತ್​ ಸೈಗಲ್​ ಪುತ್ರಿ ಸಾಯೇಶಾ. ಹೀಗಾಗಿ, ಇವರಿಗೆ ಸಹಜವಾಗಿಯೇ ನಟನೆ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತ್ತು.

2015ರಲ್ಲಿ ತೆರೆಗೆ ಬಂದ ತೆಲುಗಿನ ‘ಅಖಿಲ್​’ ಸಿನಿಮಾ ಮೂಲಕ ಸಾಯೆಶಾ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ನಂತರ ಅಜಯ್​ ದೇವಗನ್​ ನಟನೆಯ ಶಿವಾಯ್​ ಸಿನಿಮಾದಲ್ಲಿ ಬಣ್ಣ ಹಚ್ಚಲು ಅವಕಾಶ ಗಿಟ್ಟಿಸಿಕೊಂಡರು. ಈ ಮೂಲಕ ಬಾಲಿವುಡ್​ನಲ್ಲೂ ಅವರು ಖಾತೆ ತೆರೆದರು. ನಂತರ ಸಾಲು ಸಾಲು ತಮಿಳು ಸಿನಿಮಾಗಳಲ್ಲಿ ಸಾಯೇಶಾ ಬಣ್ಣ ಹಚ್ಚಿದ್ದರು.
2018ರಲ್ಲಿ ತೆರೆಗೆ ಬಂದ ಗಜನಿಕಾಂತ್​ ಸಿನಿಮಾದಲ್ಲಿ ತಮಿಳಿನ ಸ್ಟಾರ್​ ಹೀರೋ ಆರ್ಯಗೆ ಜೋಡಿಯಾಗಿ ಸಾಯೇಶಾ ಕಾಣಿಸಿಕೊಂಡಿದ್ದರು. ನಂತರ ಕಾಪನ್​, ಟೆಡ್ಡಿ ಸಿನಿಮಾಗಳಲ್ಲೂ ಇಬ್ಬರೂ ಒಟ್ಟಾಗಿ ನಟಿಸಿದ್ದರು.

ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ ಇವರ ಮಧ್ಯೆ ಸೆಟ್​ನಲ್ಲೇ ಪ್ರೀತಿ ಮೂಡಿತು. ಇವರು ಕದ್ದುಮುಚ್ಚಿ ಓಡಾಡುತ್ತಿರುವ ಸುದ್ದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ನಂತರ 2019ರ ಮಾರ್ಚ್​​ 10ರಂದು ಇಬ್ಬರೂ ಮದುವೆ ಆಗಿ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದರು. ಈ ಮೂಲಕ 21ನೇ ವಯಸ್ಸಿಗೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

2019ರಲ್ಲಿ ತೆರೆಗೆ ಬಂದ ಟೆಡ್ಡಿ ಸಿನಿಮಾ ನಂತರ ತೆರೆಕಂಡಿದ್ದು ಯುವರತ್ನ ಚಿತ್ರ. ಈ ಸಿನಿಮಾದಲ್ಲಿ ಕೆಲವೇ ಕೆಲವು ದೃಶ್ಯಗಳಿಗೆ ಹಾಗೂ ಹಾಡುಗಳಿಗೆ ಮಾತ್ರ ಸಾಯೆಶಾ ಸೀಮಿತವಾದರು. ಆದಾಗ್ಯೂ, ಸಿಕ್ಕ ಪಾತ್ರವನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದರು. ಸದ್ಯ, ಸಾಯೇಶಾ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ. ಕನ್ನಡದಿಂದ ಅವರಿಗೆ ಬೇರೆ ಯಾವುದಾದರೂ ಆಫರ್​ ಬರಬಹುದೇ ಎಂಬುದು ಸದ್ಯದ ಕುತೂಹಲ.

ಇದನ್ನೂ ಓದಿ: Yuvarathnaa On Prime: ನೀವು ಹೀಗೆ ಮಾಡಿದ್ದು ಸರಿನಾ?; ಪುನೀತ್​ ನಿರ್ಧಾರಕ್ಕೆ ಫ್ಯಾನ್ಸ್​ ಆಕ್ರೋಶ 

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us