ಟಾಲಿವುಡ್​ ಸ್ಟಾರ್​ ನಟರ ಸಮಾಗಮದಲ್ಲಿ ನಡೆಯಲಿದೆ ಯುವರತ್ನ ಪ್ರೀ ರಿಲೀಸ್​ ಇವೆಂಟ್​!

ಯುವರತ್ನ ಸಿನಿಮಾ ತೆಲುಗಿನಲ್ಲೂ ರಿಲೀಸ್​ ಆಗುತ್ತಿದೆ. ಈ ಸಿನಿಮಾಗೆ ಪ್ರಚಾರ ಕೊಡುವ ಉದ್ದೇಶದಿಂದ ಆಂಧ್ರದಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀ ರಿಲೀಸ್​ ಕಾರ್ಯಕ್ರಮ ನಡೆಸೋ ಆಲೋಚನೆ ಚಿತ್ರತಂಡದ್ದು.

ಟಾಲಿವುಡ್​ ಸ್ಟಾರ್​ ನಟರ ಸಮಾಗಮದಲ್ಲಿ ನಡೆಯಲಿದೆ ಯುವರತ್ನ ಪ್ರೀ ರಿಲೀಸ್​ ಇವೆಂಟ್​!
ಪುನೀತ್​ ರಾಜ್​ಕುಮಾರ್​
Edited By:

Updated on: Mar 14, 2021 | 4:09 PM

ಪುನೀತ್​ ರಾಜ್​ಕುಮಾರ್​ ನಟನೆಯ ಯುವರತ್ನ ಚಿತ್ರತಂಡ ಮೈಸೂರಿನಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಏರ್ಪಡಿಸಿದೆ. ಮಾರ್ಚ್ 20ರಂದು ಮೈಸೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಯುವರತ್ನ ಪ್ರೀ ರಿಲೀಸ್ ಇವೆಂಟ್​ ಮತ್ತು ಆಡಿಯೋ ಲಾಂಚ್ ಒಟ್ಟಿಗೆ ನೆರವೇರಲಿದೆ. ಇದಕ್ಕಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೀಗಿರುವಾಗಲೇ ಚಿತ್ರತಂಡದಿಂದ ಮತ್ತೊಂದು ಅಪ್​ಡೇಟ್​ ಸಿಕ್ಕಿದೆ. ಟಾಲಿವುಡ್​ ಸ್ಟಾರ್​ ನಟರ ಸಮಾಗಮದಲ್ಲಿ ಆಂಧ್ರ ಪ್ರದೇಶದಲ್ಲಿ ಮತ್ತೊಂದು ಪ್ರೀ ರಿಲೀಸ್​ ಇವೆಂಟ್​ ಮಾಡಲು ತಂಡ ನಿರ್ಧರಿಸಿದೆ.

ಹೌದು, ಯುವರತ್ನ ಸಿನಿಮಾ ತೆಲುಗಿನಲ್ಲೂ ರಿಲೀಸ್​ ಆಗುತ್ತಿದೆ. ಈ ಸಿನಿಮಾಗೆ ಪ್ರಚಾರ ಕೊಡುವ ಉದ್ದೇಶದಿಂದ ಆಂಧ್ರದಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀ ರಿಲೀಸ್​ ಕಾರ್ಯಕ್ರಮ ನಡೆಸೋ ಆಲೋಚನೆ ಚಿತ್ರತಂಡದ್ದು. ಈ ಕಾರ್ಯಕ್ರಮಕ್ಕೆ ಸ್ಟಾರ್​ ನಟರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಟಾಲಿವುಡ್​ನ ಅನೇಕ ಸ್ಟಾರ್​ಗಳಿಗೆ ರಾಜ್​ಕುಮಾರ್​ ಫ್ಯಾಮಿಲಿ ತುಂಬಾನೇ ಆಪ್ತವಾಗಿದೆ. ಬೆಂಗಳೂರಿಗೆ ಬಂದಾಗೆಲ್ಲ ಅವರು ರಾಜ್​ಕುಮಾರ್​ ಕುಟುಂಬದವರನ್ನು ಭೇಟಿ ಮಾಡಿ ಹೋದ ಉದಾಹರಣೆ ಇದೆ. ಈಗ ತೆಲುಗು ನಾಡಿಗೆ ಪುನೀತ್​ ಹೋಗುತ್ತಾರೆ ಎಂದರೆ, ಅಲ್ಲಿ ಟಾಲಿವುಡ್​ ನಟರಿಂದ ಭರ್ಜರಿ ಸ್ವಾಗತ ಸಿಗುವ ನಿರೀಕ್ಷೆ ಇದೆ.

ಪುನೀತ್​ ಹಾಗೂ ನಿರ್ದೇಶಕ ಸಂತೋಷ್​​​ ಆನಂದ್​​ರಾಮ್​ ಕಾಂಬಿನೇಷನ್​ನಲ್ಲಿ ಮೂಡಿಬಂದ ರಾಜಕುಮಾರ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದಾದ ನಾಲ್ಕು ವರ್ಷಗಳ ನಂತರದಲ್ಲಿ ಇದೇ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಚಿತ್ರ ಯುವರತ್ನ. ಈ ಮೊದಲು ರಿಲೀಸ್​ ಆಗಿರುವ ಸಿನಿಮಾ ಟೀಸರ್​ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಈ ಸಿನಿಮಾದಲ್ಲಿ ಪುನೀತ್​ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಪುನೀತ್​ಗೆ ಜತೆಯಾಗಿ ಸಯ್ಯೇಶಾ ನಟಿಸಿದ್ದಾರೆ. ಧನಂಜಯ್​ ಹಾಗೂ ಪ್ರಕಾಶ್​ ರಾಜ್​ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್​ 1ರಂದು ಸಿನಿಮಾ ತೆರೆಗೆ ಬರುತ್ತಿದೆ.

ಇದನ್ನೂ ಓದಿ: Yuvarathnaa Pre-Release: ಮೈಸೂರಲ್ಲಿ ಅದ್ದೂರಿಯಾಗಿ ನೆರವೇರಲಿದೆ ಯುವರತ್ನ ಪ್ರೀ ರಿಲೀಸ್ ಇವೆಂಟ್

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us