Yuvarathnaa Trailer: ಕೌಂಟರ್​ ಕೊಟ್ರೆ ಎನ್​ಕೌಂಟರ್​​; ಯುವರತ್ನ ಟ್ರೇಲರ್​ನಲ್ಲಿ ಮಿಂಚಿದ ಪುನೀತ್​ ರಾಜ್​ಕುಮಾರ್​

ಸಿನಿಮಾದಲ್ಲಿ ಡಾಲಿ ಧನಂಜಯ್​ ಖಳನಾಗಿ ಕಾಣಿಸಿಕೊಂಡಿದ್ದು, ಅವರ ಪಾತ್ರ ಹೇಗಿರಲಿದೆ ಎಂಬುದಕ್ಕೆ ಸಾಕ್ಷ್ಯ ಸಿಕ್ಕಿದೆ. ಸಿನಿಮಾದಲ್ಲಿ ಡ್ರಗ್​ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಕೂಡ ನಡೆದಿದೆ ಎಂಬುದು ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾಗುತ್ತದೆ.

Yuvarathnaa Trailer: ಕೌಂಟರ್​ ಕೊಟ್ರೆ ಎನ್​ಕೌಂಟರ್​​; ಯುವರತ್ನ ಟ್ರೇಲರ್​ನಲ್ಲಿ ಮಿಂಚಿದ ಪುನೀತ್​ ರಾಜ್​ಕುಮಾರ್​
ಪುನೀತ್​ ರಾಜ್​ಕುಮಾರ್​

Updated on: Mar 20, 2021 | 3:10 PM

ಬಹುನಿರೀಕ್ಷಿತ ಯುವರತ್ನ ಸಿನಿಮಾದ ಟ್ರೇಲರ್​ ರಿಲೀಸ್​ ಆಗಿದೆ. ಒಂದು ಕಡೆ ಕಾಲೇಜು ಹುಡುಗ ಮತ್ತೊಂದು ಕಡೆ ಪೊಲೀಸ್​ ಆಗಿ ಪುನೀತ್​ ರಾಜ್​ಕುಮಾರ್​ ಮಿಂಚಿದ್ದಾರೆ. ಡಾಲಿ ಧನಂಜಯ್​ ವಿಲನ್​ ಆಗಿ ಪುನೀತ್​ಗೆ ಟಫ್​ ಫೈಟ್​ ಕೊಡೋ ಎಲ್ಲ ಲಕ್ಷಣ ಟ್ರೇಲರ್​ನಲ್ಲಿ ಎದ್ದು ಕಾಣುತ್ತಿದೆ. ಇಂದು ಮಧ್ಯಾಹ್ನ ಯುವರತ್ನ ಸಿನಿಮಾದ ಟ್ರೇಲರ್​ ರಿಲೀಸ್​ ಆಗಿದೆ. ಟ್ರೇಲರ್​ನ ಮೊದಲಾರ್ಧದಲ್ಲಿ ಪುನೀತ್​ ಕಾಲೇಜು ಹುಡುಗನಾಗಿ ಕಾಣಿಸಿಕೊಂಡರೆ ಕೊನೆಯ ಒಂದು ನಿಮಿಷದಲ್ಲಿ ಪುನೀತ್​ ಪೊಲೀಸ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಸಿನಿಮಾದಲ್ಲಿ ಪುನೀತ್​ಗೆ ಎರಡು ಶೇಡ್​ ಇರೋ ವಿಚಾರವನ್ನು ನಿರ್ದೇಶಕ ಸಂತೋಷ್​​​ ಆನಂದ್​ರಾಮ್​ ಬಿಟ್ಟುಕೊಟ್ಟಿದ್ದಾರೆ.

ಪೊಲೀಸರಿಗೆ ಕೊಟ್ಟಿರೋ ಸ್ಟಾರ್​ ಡ್ಯುಟಿಯಲ್ಲಿ ಇರೋವರೆಗೂ ಮಾತ್ರ, ಆದರೆ, ಜನ ನಮಗೆ ಕೊಟ್ಟ ಸ್ಟಾರ್​ ಉಸಿರು ಇರೋವರೆಗೂ. ಜನಕ್ಕೆ ದುಡ್ಡು ಕೊಟ್ಟು ವೋಟ್​ ಹಾಕಿ ಗೆಲ್ಲೋ ನಿನಗೆ, ನಿಮ್​ ಅಪ್ಪನಿಗೆ ಇಷ್ಟು ಇರಬೇಕಾದರೆ.. ಜನ ನಮಗೆ ದುಡ್​ ಕೊಟ್ಟು ವೋಟ್​ ಹಾಕಿ ಗೆಲ್ಸಿರೋದು ನಮಗೆಷ್ಟ್​ ಇರಬಾರದು. ದಮ್​ ಹೊಡಿತೀಯಾ ಎಂದು ಕೇಳಿದಾಗ, ದಮ್​ ಗುಂಡಿಗೇಲಿದೆ ಬಾಯಿಗೆ ಬೇಡ ಎಂಬಿತ್ಯಾದಿ ಡೈಲಾಗ್​ಗಳು ಇಂಟರೆಸ್ಟಿಂಗ್​ ಆಗಿವೆ.

ಸಿನಿಮಾದಲ್ಲಿ ಡಾಲಿ ಧನಂಜಯ್​ ಖಳನಾಗಿ ಕಾಣಿಸಿಕೊಂಡಿದ್ದು, ಅವರ ಪಾತ್ರ ಹೇಗಿರಲಿದೆ ಎಂಬುದಕ್ಕೆ ಸಾಕ್ಷ್ಯ ಸಿಕ್ಕಿದೆ. ಸಿನಿಮಾದಲ್ಲಿ ಡ್ರಗ್​ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಕೂಡ ನಡೆದಿದೆ ಎಂಬುದು ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾಗುತ್ತದೆ.

YouTube video player

ಪುನೀತ್​ ಹಾಗೂ ನಿರ್ದೇಶಕ ಸಂತೋಷ್​​​ ಆನಂದ್​​ರಾಮ್​ ಕಾಂಬಿನೇಷನ್​ನಲ್ಲಿ ಮೂಡಿಬಂದ ರಾಜಕುಮಾರ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದಾದ ನಾಲ್ಕು ವರ್ಷಗಳ ನಂತರದಲ್ಲಿ ಇದೇ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಚಿತ್ರ ಯುವರತ್ನ. ಈ ಮೊದಲು ರಿಲೀಸ್​ ಆಗಿರುವ ಸಿನಿಮಾ ಟೀಸರ್​ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಈ ಸಿನಿಮಾದಲ್ಲಿ ಪುನೀತ್​ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಪುನೀತ್​ಗೆ ಜತೆಯಾಗಿ ಸಯ್ಯೇಶಾ ನಟಿಸಿದ್ದಾರೆ. ಧನಂಜಯ್​ ಹಾಗೂ ಪ್ರಕಾಶ್​ ರಾಜ್​ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್​ 1ರಂದು ಸಿನಿಮಾ ತೆರೆಗೆ ಬರುತ್ತಿದೆ.

YouTube video player

ಇದನ್ನೂ ಓದಿ: ‘ವ್ಯಾಕ್ಸಿನ್​ ಬಂದಮೇಲೂ ಲಾಕ್​ಡೌನ್​ ಮಾಡುವುದು ವಿಪರ್ಯಾಸ’: ಯುವರತ್ನ ನಿರ್ದೇಶಕ ಸಂತೋಷ್ ಆನಂದ್​ರಾಮ್​!

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us