ನಟಿ ಶ್ರುತಿ ಹಾಸನ್ (Shruti Haasan) ಅವರಿಗೆ ಈವಾರ ತುಂಬಾನೇ ವಿಶೇಷವಾಗಿತ್ತು. ಇದಕ್ಕೆ ಕಾರಣ ಅವರ ನಟನೆಯ ಎರಡು ಸಿನಿಮಾಗಳು ಒಂದೇ ವಾರ ರಿಲೀಸ್ ಆಗಿವೆ. ನಂದಮೂರಿ ಬಾಲಕೃಷ್ಣ ನಟನೆಯ ‘ವೀರ ಸಿಂಹ ರೆಡ್ಡಿ’ ಹಾಗೂ ಚಿರಂಜೀವಿ ಅಭಿನಯದ ‘ವಾಲ್ತೇರು ವೀರಯ್ಯ’ (Waltair Veerayya) ಸಿನಿಮಾಗಳು ಒಂದು ದಿನ ಗ್ಯಾಪ್ನಲ್ಲಿ ತೆರೆಗೆ ಬಂದಿವೆ. ಈ ಎರಡೂ ಚಿತ್ರಕ್ಕೆ ಶ್ರುತಿ ಹಾಸನ್ ನಾಯಕಿ. ಈ ಸಿನಿಮಾದ ಪ್ರಮೋಷನ್ನಲ್ಲಿ ಶ್ರುತಿ ಭಾಗಿ ಆಗಿಲ್ಲ. ಬದಲಿಗೆ ಮುಂಬೈನಲ್ಲಿ ಬಾಯ್ಫ್ರೆಂಡ್ ಜತೆ ಸುತ್ತಾಟ ನಡೆಸಿದ್ದಾರೆ.
ಶ್ರುತಿ ಹಾಸನ್ ಅವರು ‘ವಾಲ್ತೇರು ವೀರಯ್ಯ’ ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಭಾಗಿ ಆಗಿರಲಿಲ್ಲ. ಶ್ರುತಿಗೆ ಮಾನಸಿಕ ಆರೋಗ್ಯ ಕೆಟ್ಟಿದೆ, ಹೀಗಾಗಿ ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿಲ್ಲ ಎಂದು ಕೆಲವು ಕಡೆಗಳಲ್ಲಿ ವರದಿ ಆಗಿತ್ತು. ಆದರೆ, ಇದನ್ನು ಶ್ರುತಿ ಅಲ್ಲಗಳೆದಿದ್ದರು. ಅನಾರೋಗ್ಯದ ಕಾರಣ ಈ ಕಾರ್ಯಕ್ರಮಕ್ಕೆ ಬಂದಿರಲಿಲ್ಲ ಎಂದು ಹೇಳಿದ್ದರು.
ಅಚ್ಚರಿ ಎಂದರೆ, ‘ವಾಲ್ತೇರು ವೀರಯ್ಯ’ ರಿಲೀಸ್ ದಿನ ಶ್ರುತಿ ಹಾಸನ್ ಅವರು ಮುಂಬೈನಲ್ಲಿ ತಮ್ಮ ಬಾಯ್ಫ್ರೆಂಡ್ ಶಾಂತನು ಜತೆ ಸುತ್ತಾಟ ನಡೆಸಿದ್ದಾರೆ. ಇದರ ಫೋಟೋಗಳನ್ನು ಅವರ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ.
‘ವಾಲ್ತರು ವೀರಯ್ಯ’ ಬಗ್ಗೆ ಆಗಲೀ ‘ವೀರ ಸಿಂಹ ರೆಡ್ಡಿ’ ಚಿತ್ರದ ಬಗ್ಗೆಯಾಗಲೀ ಶ್ರುತಿ ಹಾಸನ್ ಒಂದೇ ಒಂದು ಅಕ್ಷರ ಬರೆದುಕೊಂಡಿಲ್ಲ. ಅಭಿಮಾನಿಗಳ ಬಳಿ ಸಿನಿಮಾ ನೋಡಿ ಎಂದು ಕೋರಿಲ್ಲ. ಬದಲಿಗೆ ಬಾಯ್ಫ್ರೆಂಡ್ ಜತೆ ಸುತ್ತಾಟ ನಡೆಸಿದ್ದಾರೆ. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ. ‘ತೆಲುಗು ಸಿನಿಮಾ ಎಂಬ ಕಾರಣಕ್ಕೆ ಶ್ರುತಿ ಈ ರೀತಿ ಮಾಡಿದ್ದಾರೆ. ತಮಿಳು ಸಿನಿಮಾ ಆದರೆ ಶ್ರುತಿ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದರು’ ಎಂದು ಕೆಲವರು ಬರೆದುಕೊಂಡಿದ್ದಾರೆ. ಸದ್ಯ ಶ್ರುತಿ ನಡೆ ಬಗ್ಗೆ ಫ್ಯಾನ್ಸ್ ಕಡೆಯಿಂದ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: Shruti Haasan: ಶ್ರುತಿ ಹಾಸನ್ ಆರೋಗ್ಯದ ಬಗ್ಗೆ ಅಪಪ್ರಚಾರ; ಮಾನಸಿಕ ಕಾಯಿಲೆ ಎಂದವರಿಗೆ ನಟಿ ತಿರುಗೇಟು
ಕಮಲ್ ಹಾಸನ್ ಮಗಳಾದರೂ ಶ್ರುತಿ ಹಾಸನ್ ತಾವಾಗೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಭಾಸ್ ನಟನೆಯ ‘ಸಲಾರ್’ ಚಿತ್ರಕ್ಕೆ ಶ್ರುತಿ ನಾಯಕಿ ಆಗಿದ್ದಾರೆ. ಈ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ