ಬಿಗ್ ಬಾಸ್​ನಿಂದ ಹೊರ ಹೋಗುವ ಮುನ್ನ ಸ್ಪರ್ಧಿಗಳನ್ನು ಮನೆಗೆ ಆಹ್ವಾನಿಸಿದ ಶುಭಾ; ಇದರ ಹಿಂದಿದೆಯೇ ವಿಚಿತ್ರ ಉದ್ದೇಶ?

| Updated By: ಮದನ್​ ಕುಮಾರ್​

Updated on: May 11, 2021 | 7:32 AM

ಶುಭಾ ಪೂಂಜಾ ನಿದ್ದೆ ಪ್ರಿಯೆ. ಅವರು ಕೆಲವೊಮ್ಮೆ ಮನೆಯಲ್ಲಿ ತುಂಬಾನೇ ಆಲಸ್ಯ ತೋರುತ್ತಾರೆ. ಇದು ಮನೆಯವರಿಗೂ ಗೊತ್ತಾಗಿದೆ. ಇತ್ತೀಚೆಗೆ ಶುಭಾ ಮನೆಯಲ್ಲಿ ಹಗಲಿನಲ್ಲೇ ನಿದ್ರಿಸಿಬಿಟ್ಟಿದ್ದರು.

ಬಿಗ್ ಬಾಸ್​ನಿಂದ ಹೊರ ಹೋಗುವ ಮುನ್ನ ಸ್ಪರ್ಧಿಗಳನ್ನು ಮನೆಗೆ ಆಹ್ವಾನಿಸಿದ ಶುಭಾ; ಇದರ ಹಿಂದಿದೆಯೇ ವಿಚಿತ್ರ ಉದ್ದೇಶ?
ಶುಭಾ ಪೂಂಜಾ - ನಿಧಿ ಸುಬ್ಬಯ್ಯ
Follow us on

ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಂತಿದೆ. ಇದರಿಂದ ಸ್ಪರ್ಧಿಗಳಿಗೆ ಹಾಗೂ ವೀಕ್ಷಕರಿಗೆ ಇಬ್ಬರಿಗೂ ಶಾಕ್ ಆಗಿದೆ. ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಬಂದಾಗಿದೆ. ಅಂತಿಮ ದಿನದ ಎಪಿಸೋಡ್​​ಗಳನ್ನು ಮೇ 11 ಹಾಗೂ 12ರಂದು ಪ್ರಸಾರ ಮಾಡಲಾಗುತ್ತಿದೆ. ಈ ಮಧ್ಯೆ ಕೊನೆಯ ದಿನ ಸಾಕಷ್ಟು ಮೆಮೊರೆಬಲ್​ ಘಟನೆಗಳು ನಡೆದಿವೆ. ಶುಭಾ ಎಲ್ಲಾ ಸ್ಪರ್ಧಿಗಳಿಗೆ ತಮ್ಮ ಮನೆಗೆ ಬರುವಂತೆ ಆಮಂತ್ರಣ ನೀಡಿದ್ದರು. ಇದಕ್ಕೆ ಕಾರಣ ಈಗ ಬಯಲಾಗಿದೆ.

ಶುಭಾ ಪೂಂಜಾ ನಿದ್ದೆ ಪ್ರಿಯೆ. ಅವರು ಕೆಲವೊಮ್ಮೆ ಮನೆಯಲ್ಲಿ ತುಂಬಾನೇ ಆಲಸ್ಯ ತೋರುತ್ತಾರೆ. ಇದು ಮನೆಯವರಿಗೂ ಗೊತ್ತಾಗಿದೆ. ಇತ್ತೀಚೆಗೆ ಶುಭಾ ಮನೆಯಲ್ಲಿ ಹಗಲಿನಲ್ಲೇ ನಿದ್ರಿಸಿಬಿಟ್ಟಿದ್ದರು. ಆಗ ಎದ್ದೇಳು ಮಂಜುನಾಥ್ ಸಾಂಗ್ ಹಾಕಿ ಎಬ್ಬಿಸಲಾಯಿತು. ನನ್ನಲ್ಲಿ ಆಲಸ್ಯ ಹೆಚ್ಚಿದೆ ಎಂಬುದನ್ನು ಶುಭಾ ಕೂಡ ಅನೇಕ ಬಾರಿ ಒಪ್ಪಿಕೊಂಡಿದ್ದಾರೆ.

ಕೊನೆಯ ದಿನವೂ ಈ ವಿಚಾರ ಬಿಗ್ ಬಾಸ್ ಮನೆಯಲ್ಲಿ ಚರ್ಚೆಗೆ ಬಂದಿದೆ. ‘ನಾನು ಮನೆಯಲ್ಲಿ ತುಂಬಾನೇ ಸ್ಲೋ. ಕೆಲವೊಮ್ಮೆ ಬೆಲ್ಟ್ ಕಾಣುತ್ತಿರುವುದಿಲ್ಲ. ನಾನು ಹಾಸಿಗೆಯ ಮೇಲೆ ಕುಳಿತುಕೊಂಡು ಚಿನ್ನಿ ಬಾಂಬ್ (ಸುಮಂತ್) ಬೆಲ್ಟ್ ಹುಡುಕಿಕೊಡು ಎಂದು ಹೇಳುತ್ತೇನೆ. ನಮ್ಮ ಮನೆಯಲ್ಲಿ ಬಟ್ಟೆ ತೊಳೆಯೋಕು ನನಗೆ ಆಲಸ್ಯ’ ಎಂದರು.

ಶುಭಾ ಪೂಂಜಾ ಎಲ್ಲಾ ಸ್ಪರ್ಧಿಗಳಿಗೂ ನಮ್ಮ ಮನೆಗೆ ಬರುವಂತೆ ಕರೆ ನೀಡಿದ್ದರು. ಬಟ್ಟೆ ತೊಳೆಸುವ ಉದ್ದೇಶದಿಂದಲೇ ಶುಭಾ ಮನೆಗೆ ಕರೆದಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಇದಕ್ಕೆ ನಗುತ್ತಲೇ ಹೌದು ಎಂದು ಶುಭಾ ಉತ್ತರಿಸಿದ್ದಾರೆ.

ಎಲ್ಲಾ ಸ್ಪರ್ಧಿಗಳು ಹೊರ ಹೋಗಬೇಕು ಎಂದು ಬಿಗ್​ ಬಾಸ್​ ಘೋಷಣೆ ಮಾಡುವುದಕ್ಕೂ ಮೊದಲು ಎಲ್ಲರೂ ಹೊಟ್ಟೆತುಂಬ ನಕ್ಕಿದ್ದಾರೆ. ಕೊನೆಗೆ ಹೊರ ಹೋಗುತ್ತಿರುವ ವಿಚಾರ ಕೇಳಿ ಎಲ್ಲರೂ ಗಳಗಳನೆ ಅತ್ತಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆ ಸೇರಿ ಕ್ಯಾಶ್​ ಪ್ರೈಜ್​ಗಿಂತ ಹೆಚ್ಚಿನದ್ದನ್ನೇ ಸಂಪಾದಿಸಿದ್ದಾರೆ ದಿವ್ಯಾ ಉರುಡುಗ