ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬೇಡಿಕೆಯ ನಟಿ. ಅವರು ಹಲವು ಭಾಷೆಗಳಲ್ಲಿ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಕಳೆದ ತಿಂಗಳು ರಶ್ಮಿಕಾ ಮಂದಣ್ಣ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ್ದಾರೆ. ಅವರ ನಟನೆಯ ‘ಅನಿಮಲ್’ ಹಾಗೂ ‘ಪುಷ್ಪ 2’ ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ‘ಮಿಷನ್ ಮಜ್ನು’ (Mission Majnu Movie) ಸಿನಿಮಾದ ಸೆಟ್ನಲ್ಲಿ ರಶ್ಮಿಕಾ ಮಂದಣ್ಣ ಅವರು ಯಾವ ರೀತಿ ಇರುತ್ತಿದ್ದರು ಎನ್ನುವ ಬಗ್ಗೆ ಸಿದ್ದಾರ್ಥ್ ಮಲ್ಹೋತ್ರ ಮಾಹಿತಿ ನೀಡಿದ್ದಾರೆ. ಅವರ ವರ್ತನೆ ಕಂಡು ಆರಂಭದಲ್ಲಿ ಸಿದ್ದಾರ್ಥ್ ಅಚ್ಚರಿಗೊಂಡಿದ್ದರಂತೆ.
ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದಿಂದ ಬಣ್ಣದ ಬದುಕು ಆರಂಭಿಸಿದರು. ಕೆಲವೇ ವರ್ಷಗಳಲ್ಲಿ ಅವರು ಯಶಸ್ಸಿನ ಉತ್ತುಂಗಕ್ಕೆ ಹೋದರು. ತೆಲುಗು, ಬಾಲಿವುಡ್ ಹಾಗೂ ಕಾಲಿವುಡ್ನಲ್ಲಿ ನೆಲೆ ಕಂಡುಕೊಂಡರು. ಜನವರಿ ತಿಂಗಳಲ್ಲಿ ಅವರ ನಟನೆಯ ‘ವಾರಿಸು’ ಹಾಗೂ ‘ಮಿಷನ್ ಮಜ್ನು’ ಸಿನಿಮಾಗಳು ರಿಲೀಸ್ ಆಗಿ ಯಶಸ್ಸು ಕಂಡಿವೆ. ‘ವಾರಿಸು’ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ಬಾಚಿಕೊಂಡರೆ, ‘ಮಿಷನ್ ಮಜ್ನು’ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿ ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ರಶ್ಮಿಕಾ ‘ಮಿಷನ್ ಮಜ್ನು’ ಸೆಟ್ನಲ್ಲಿ ಹೇಗಿರುತ್ತಿದ್ದರು ಎಂಬುದನ್ನು ಸಿದ್ದಾರ್ಥ್ ವಿವರಿಸಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಸಂದರ್ಶನ ನೀಡುವಾಗ, ಪಾಪರಾಜಿಗಳು ಎದುರಾದಾಗ ಕೈ ಸನ್ನೆ ಮೂಲಕ ತಮ್ಮ ಭಾವನೆ ಹೊರಹಾಕುತ್ತಾರೆ. ಹಾರ್ಟ್ ಮಾರ್ಕ್ ಮತ್ತಿತ್ಯಾದಿ ಸನ್ನೆಗಳನ್ನು ತೋರಿಸುತ್ತಾರೆ. ಕೆಲವರಿಗೆ ಇದು ಓವರ್ಆ್ಯಕ್ಟಿಂಗ್ ಎಂದನಿಸಿದ್ದಿದೆ. ರಶ್ಮಿಕಾ ಅವರು ಸೆಟ್ನಲ್ಲಿ ಬಂದಾಗ ಇದೇ ರೀತಿ ಮಾಡಿದ್ದರಂತೆ. ಈ ಬಗ್ಗೆ ಸಿದ್ದಾರ್ಥ್ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಕೆಲವರು ಈ ಹೇಳಿಕೆಯನ್ನು ಟ್ರೋಲ್ ಮಾಡಿದ್ದಾರೆ.
‘ರಶ್ಮಿಕಾ ಅವರು ಒಪ್ಪಿಕೊಂಡ ಮೊದಲು ಹಿಂದಿ ಸಿನಿಮಾ (ಮಿಷನ್ ಮಜ್ನು) ಇದು. ಅವರಿಂದ ಸಾಕಷ್ಟು ವಿಚಾರ ಕಲಿತೆ’ ಎಂದಿದ್ದಾರೆ ಸಿದ್ದಾರ್ಥ್ ಮಲ್ಹೋತ್ರ. ಈ ವೇಳೆ ರಶ್ಮಿಕಾ ಯಾವ ರೀತಿ ನಡೆದುಕೊಳ್ಳುತ್ತಿದ್ದರು ಎಂಬುದನ್ನು ಹೇಳಿದ್ದಾರೆ. ಅವರ ಕೈ ಸನ್ನೆಗಳು ಸಿದ್ದಾರ್ಥ್ಗೆ ತುಂಬಾನೇ ವಿಚಿತ್ರ ಎನಿಸಿದ್ದವು.
ಇದನ್ನೂ ಓದಿ: ಅಭಿಮಾನಿಗೆ ಪ್ರಪೋಸ್ ಮಾಡೋದು ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ; ವಿಡಿಯೋ ವೈರಲ್
ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಹಾಗೂ ‘ಅನಿಮಲ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇನ್ನೂ ಅನೇಕ ಚಿತ್ರಗಳ ಕಥೆಯನ್ನು ಅವರು ಕೇಳುತ್ತಿದ್ದಾರೆ. ‘ವಾರಿಸು’ ಸಿನಿಮಾ ಹಿಟ್ ಆದ ಕಾರಣ ಅವರಿಗೆ ತಮಿಳಿನಲ್ಲಿ ಹಲವು ಆಫರ್ಗಳು ಬರುತ್ತಿವೆ. ಎಲ್ಲವನ್ನೂ ಒಪ್ಪಿಕೊಂಡು ಅವರು ನಟಿಸುತ್ತಿಲ್ಲ. ಇನ್ನು ಸಿದ್ದಾರ್ಥ್ ಮಲ್ಹೋತ್ರ ಅವರು ಕಿಯಾರಾ ಜತೆ ಇತ್ತೀಚೆಗಷ್ಟೇ ಮದುವೆ ಆಗಿದ್ದಾರೆ. ಪತ್ನಿ ಜತೆ ಅವರು ಹನಿಮೂನ್ಗೆ ತೆರಳಲಿದ್ದಾರೆ ಎನ್ನಲಾಗಿದೆ.
ಶ್ರೀಲಕ್ಷ್ಮಿ ಎಚ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ