Mangli: ಅಪಘಾತಕ್ಕೆ ಒಳಗಾಯ್ತು ಖ್ಯಾತ ಗಾಯಕಿ ಮಂಗ್ಲಿ ಕಾರು

ರಂಗಾ ರೆಡ್ಡಿ ಜಿಲ್ಲೆಯ ನಂದಿಗ್ರಾಮ ಕನ್ಹಾ ಆಧ್ಯಾತ್ಮಿಕ ಉತ್ಸವದಲ್ಲಿ ಮಂಗ್ಲಿ ಭಾಗವಹಿಸಿದ್ದರು. ಆ ಬಳಿಕ ಅವರು ಬೆಂಗಳೂರು-ಹೈದರಾಬಾದ್ ಹೈವೇ ಮೂಲಕ ಹೈದರಾಬಾದ್​ಗೆ ಬರುತ್ತಿದ್ದರು. ಶಂಶಾಬಾದ್ ತೊಂಡುಪಲ್ಲಿ ಬಳಿ ಕಾರು ಅಪಘಾತಕ್ಕೆ ಒಳಗಾಗಿದೆ. ಭಾನುವಾರ (ಮಾರ್ಚ್ 17) ತಡರಾತ್ರಿ ಈ ಘಟನೆ ನಡೆದಿದೆ.

Mangli: ಅಪಘಾತಕ್ಕೆ ಒಳಗಾಯ್ತು ಖ್ಯಾತ ಗಾಯಕಿ ಮಂಗ್ಲಿ ಕಾರು
ಮಂಗ್ಲಿ

Updated on: Mar 18, 2024 | 11:23 AM

‘ಹೂ ಅಂತೀಯಾ ಮಾವ…’ ಹಾಡನ್ನು ಹಾಡಿ ಕನ್ನಡದ ಜನತೆಗೂ ಪರಿಚಯಗೊಂಡಿರುವ ಗಾಯಕಿ ಮಂಗ್ಲಿ (Mangli) ಅವರು ಕಾರು ಅಪಘಾತಕ್ಕೆ ಒಳಗಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅವರು ತೆಲುಗು ರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಈಗ ಕಾರ್ಯಕ್ರಮ ಮುಗಿಸಿ ಬರುವಾಗ ಈ ಘಟನೆ ನಡೆದಿದೆ. ಮಂಗ್ಲಿ ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದು ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

ರಂಗಾ ರೆಡ್ಡಿ ಜಿಲ್ಲೆಯ ನಂದಿಗ್ರಾಮ ಕನ್ಹಾ ಆಧ್ಯಾತ್ಮಿಕ ಉತ್ಸವದಲ್ಲಿ ಮಂಗ್ಲಿ ಭಾಗವಹಿಸಿದ್ದರು. ಆ ಬಳಿಕ ಅವರು ಬೆಂಗಳೂರು-ಹೈದರಾಬಾದ್ ಹೈವೇ ಮೂಲಕ ಹೈದರಾಬಾದ್​ಗೆ ಬರುತ್ತಿದ್ದರು. ಶಂಶಾಬಾದ್ ತೊಂಡುಪಲ್ಲಿ ಬಳಿ ಕಾರು ಅಪಘಾತಕ್ಕೆ ಒಳಗಾಗಿದೆ. ಭಾನುವಾರ (ಮಾರ್ಚ್ 17) ತಡರಾತ್ರಿ ಈ ಘಟನೆ ನಡೆದಿದೆ. ಮಂಗ್ಲಿ ಕಾರಿಗೆ ಸಣ್ಣ ಟ್ರಕ್ ಗುದ್ದಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬಳ್ಳಾರಿ ಉತ್ಸವದಲ್ಲಿ ಸಿಂಗರ್​ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ ಆಗಿಲ್ಲ, ಆದ್ರೂ ಗ್ಲಾಸ್ ಒಡೆದಿದ್ಯಾಕೆ? ಎಸ್ಪಿ ಸ್ಪಷ್ಟನೆ ಇಲ್ಲಿದೆ

ಕಾರಿನಲ್ಲಿ ಇದ್ದ ಎಲ್ಲರಿಗೂ ಸಣ್ಣಪುಟ್ಟ ಗಾಯಗಳು ಆಗಿವೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ದಿವ್ಯಾ ಪ್ರಿಯಾ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಹೈದರಾಬಾದ್-ಬೆಂಗಳೂರು ಹೆದ್ದಾರಿಯ ತೊಂಡುಪಲ್ಲಿ ಸೇತುವೆ ಬಳಿಕ ಗಾಯಕ ಮಂಗ್ಲಿ ಕಾರಿಗೆ ಸಣ್ಣ ಟ್ರಕ್ ಡಿಕ್ಕಿ ಹೊಡೆದಿದೆ. ಮಂಗ್ಲಿ ಹಾಗೂ ಇತರ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಬರೆಯಲಾಗಿದೆ.

ಮಂಗ್ಲಿ ಬಗ್ಗೆ ಮಾಡಿದ ಟ್ವೀಟ್

ಮಂಗ್ಲಿ ಅವರು 2018ರಲ್ಲಿ ಸಿನಿಮಾ ರಂಗಕ್ಕೆ ಗಾಯಕಿ ಆಗಿ ಕಾಲಿಟ್ಟರು. ಆರಂಭದಲ್ಲಿ ಅವರು ತೆಲುಗು ಚಿತ್ರರಂಗದಲ್ಲಿ ಮಿಂಚಿದರು. ‘ಪುಷ್ಪ’ ಚಿತ್ರದ ಕನ್ನಡ ವರ್ಷನ್​ನಲ್ಲಿ ಬರುವ ‘ಹೂ ಅಂತೀಯಾ ಮಾವ..’ ಹಾಡನ್ನು ಹಾಡಿ ಗಮನ ಸೆಳೆದರು. ನಂತರ ಕನ್ನಡದಲ್ಲಿ ಹಲವು ಹಾಡುಗಳನ್ನು ಹಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:21 am, Mon, 18 March 24

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us