ಸಮಂತಾ ಬಗ್ಗೆ ನಾಗ ಚೈತನ್ಯ 2ನೇ ಪತ್ನಿ ಶೋಭಿತಾಗೆ ಇರುವ ಅಭಿಪ್ರಾಯ ಏನು? ವಿಡಿಯೋ ವೈರಲ್​

ಪ್ರೀತಿಸಿ ಮದುವೆಯಾದ ಸಮಂತಾ ರುತ್​ ಪ್ರಭು ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ್ದ ನಾಗ ಚೈತನ್ಯ ಅವರು ಈಗ ನಟಿ ಶೋಭಿತಾ ಜೊತೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. 2023ರಲ್ಲೇ ಶೋಭಿತಾ ಅವರು ನಾಗ ಚೈತನ್ಯ ಮತ್ತು ಸಮಂತಾ ಬಗ್ಗೆ ಮಾತನಾಡಿದ್ದರು. ಆ ವಿಡಿಯೋವನ್ನು ಈಗ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ.

ಸಮಂತಾ ಬಗ್ಗೆ ನಾಗ ಚೈತನ್ಯ 2ನೇ ಪತ್ನಿ ಶೋಭಿತಾಗೆ ಇರುವ ಅಭಿಪ್ರಾಯ ಏನು? ವಿಡಿಯೋ ವೈರಲ್​
ಶೋಬಿತಾ, ನಾಗಾರ್ಜುನ, ನಾಗ ಚೈತನ್ಯ. ಸಮಂತಾ

Updated on: Aug 09, 2024 | 3:27 PM

ಟಾಲಿವುಡ್​ ನಟ ನಾಗ ಚೈತನ್ಯ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಇಷ್ಟು ದಿನ ಗುಟ್ಟಾಗಿ ಡೇಟಿಂಗ್​ ಮಾಡುತ್ತಿದ್ದ ಶೋಭಿತಾ ಹಾಗೂ ನಾಗ ಚೈತನ್ಯ ಅವರು ಆಗಸ್ಟ್​ 8ರಂದು ಎಂಗೇಜ್​ ಆದರು. ಆ ಮೂಲಕ ನಾಗ ಚೈತನ್ಯ ಅವರು ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಈ ಮೊದಲು ಸಮಂತಾ ರುತ್​ ಪ್ರಭು ಜೊತೆ ನಾಗ ಚೈತನ್ಯ ಮದುವೆ ಆಗಿದ್ದರು. ಆದರೆ ಸಂಸಾರದಲ್ಲಿ ಬಿರುಕು ಮೂಡಿದ್ದರಿಂದ ಅವರು ವಿಚ್ಛೇದನ ಪಡೆದರು. ನಾಗ ಚೈತನ್ಯ ಮತ್ತು ಸಮಂತಾ ಬಗ್ಗೆ ತಮಗೆ ಯಾವ ರೀತಿಯ ಅಭಿಪ್ರಾಯ ಇದೆ ಎಂಬುದನ್ನು ಶೋಬಿತಾ ಅವರು ಈ ಮೊದಲೇ ತಿಳಿಸಿದ್ದರು. ಆ ವಿಡಿಯೋ ಈಗ ವೈರಲ್​ ಆಗುತ್ತಿದೆ.

ನಾಗ ಚೈತನ್ಯ ಮತ್ತು ಶೋಭಿತಾ ಅವರು ಈವರೆಗೂ ಯಾವುದೇ ಸಿನಿಮಾದಲ್ಲಿ ಜೊತೆಯಾಗಿ ನಟಿಸಿಲ್ಲ. ಹಾಗಿದ್ದರೂ ಕೂಡ ಅವರಿಬ್ಬರ ನಡುವೆ ಆತ್ಮೀಯತೆ ಬೆಳೆಯಿತು. ಹಲವು ಸಂದರ್ಭಗಳಲ್ಲಿ ಅವರಿಬ್ಬರು ಜೊತೆಯಾಗಿ ಸುತ್ತಾಡಿದ್ದು ಜನರ ಗಮನಕ್ಕೆ ಬಂತು. ಆರಂಭದಲ್ಲಿ ತಮ್ಮಿಬ್ಬರ ರಿಲೇಷನ್​ಶಿಪ್​ ಬಗ್ಗೆ ಸಿಕ್ಕಾಪಟ್ಟೆ ಗೌಪ್ಯತೆ ಕಾಪಾಡಿಕೊಂಡಿದ್ದ ಈ ಸೆಲೆಬ್ರಿಟಿಗಳು ಈಗ ಎಂಗೇಜ್​ಮೆಂಟ್​ ಮಾಡಿಕೊಂಡು ತಮ್ಮ ಸಂಬಂಧವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಮಾಜಿ ಗಂಡನ 2ನೇ ನಿಶ್ಚಿತಾರ್ಥದ ದಿನವೇ ಒಡೆದ ಹೃದಯದ ಎಮೋಜಿ ಹಾಕಿದ ಸಮಂತಾ; ಆದರೆ..

ಶೋಭಿತಾ ಅವರಿಗೆ ಈಗ 32 ವರ್ಷ ವಯಸ್ಸು. ಸಿನಿಮಾ, ವೆಬ್​ ಸಿರೀಸ್​ ಹಾಗೂ ಮಾಡೆಲಿಂಗ್​ ಕ್ಷೇತ್ರದಲ್ಲಿ ಅವರು ಹೆಸರು ಮಾಡಿದ್ದಾರೆ. 2023ರಲ್ಲಿ ‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್’ ಮೂಲಕ ಬಿಡುಗಡೆಯಾದ ‘ದಿ ನೈಟ್​ ಮ್ಯಾನೇಜರ್​’ ವೆಬ್​ ಸರಣಿಯಲ್ಲಿ ಶೋಭಿತಾ ನಟಿಸಿದ್ದರು. ಅದರ ಪ್ರಚಾರ ಸಲುವಾಗಿ ನೀಡಿದ್ದ ಸಂದರ್ಶನದಲ್ಲಿ ಶೋಬಿತಾಗೆ ಸಮಂತಾ ಮತ್ತು ನಾಗ ಚೈತನ್ಯ ಬಗ್ಗೆ ಪ್ರಶ್ನೆ ಕೇಳಲಾಗತ್ತು.

‘ನನಗೆ ಅನಿಸಿದ ಹಾಗೆ, ಸಮಂತಾ ಅವರ ಜರ್ನಿ ತುಂಬ ಕೂಲ್​ ಆಗಿದೆ. ನೀವು ಅವರ ಸಿನಿಮಾಗಳ ಪಟ್ಟಿಯನ್ನು ಗಮನಿಸಿ. ಯಾವುದೇ ಪ್ರಾಜೆಕ್ಟ್​ನಲ್ಲಿ ಸಮಂತಾ ಅವರು ಬಳಹ ಕೂಲ್​ ಆಗಿ ಪ್ರಮುಖ ಪಾತ್ರ ನಿಭಾಯಿಸುತ್ತಾರೆ’ ಎಂದು ಶೋಭಿತಾ ಹೇಳಿದ್ದರು. ಇನ್ನು, ನಾಗ ಚೈತನ್ಯ ಬಗ್ಗೆಯೂ ಅವರು ಮಾತನಾಡಿದ್ದರು. ‘ನಾಗ ಚೈತನ್ಯ ಅವರ ವ್ಯಕ್ತಿತ್ವ ಕೂಡ ಕೂಲ್​. ತುಂಬ ಶಾಂತ ಸ್ವಭಾವದ ವ್ಯಕ್ತಿ, ಘನತೆಯುಳ್ಳವರು. ಅದನ್ನು ನಾನು ಮೆಚ್ಚುತ್ತೇನೆ’ ಎಂದು ಶೋಭಿತಾ ಹೇಳಿದ್ದರು. ಅದೇ ರೀತಿ ಪ್ರಭಾಸ್​, ರಶ್ಮಿಕಾ ಮಂದಣ್ಣ ಮುಂತಾದವರ ಬಗ್ಗೆಯೂ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us