Sonu Sood Corona Positive: ಸೋನು ಸೂದ್​ಗೆ ಕೊರೊನಾ ಪಾಸಿಟಿವ್​; ಬಡವರ ಪಾಲಿನ ರಿಯಲ್​ ಹೀರೋಗೆ ಈಗ ಕಷ್ಟಕಾಲ

‘ನನಗೆ ಕೊವಿಡ್​-19 ಪಾಸಿಟಿವ್​ ಆಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್​ ಆಗಿದ್ದೇನೆ. ಆದರೆ ಚಿಂತೆ ಮಾಡುವುದು ಬೇಡ. ನಿಮ್ಮೆಲ್ಲರ ಸಮಸ್ಯೆಯನ್ನು ಪರಿಹರಿಸಲು ನನಗೆ ಇದರಿಂದ ಹೆಚ್ಚಿನ ಸಮಯ ಸಿಗಲಿದೆ’ ಎಂದು ಸೋನು ಸೂದ್​ ತಿಳಿಸಿದ್ದಾರೆ.

Sonu Sood Corona Positive: ಸೋನು ಸೂದ್​ಗೆ ಕೊರೊನಾ ಪಾಸಿಟಿವ್​; ಬಡವರ ಪಾಲಿನ ರಿಯಲ್​ ಹೀರೋಗೆ ಈಗ ಕಷ್ಟಕಾಲ
ಸೋನು ಸೂದ್
Edited By:

Updated on: Apr 17, 2021 | 2:44 PM

ಕಳೆದ ವರ್ಷ ಲಾಕ್​ಡೌನ್​ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿದ್ದ ನಟ ಸೋನು ಸೂದ್​ ಅವರಿಗೆ ಈಗ ಕೊರೊನಾ ವೈರಸ್​ ಸೋಂಕು ತಗುಲಿರುವುದು ಧೃಡವಾಗಿದೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೊವಿಡ್​ ಸೋಂಕಿಗೆ ಒಳಗಾಗಿರುವ ಅವರು ಬೇಗ ಗುಣಮುಖರಾಗಲಿ ಎಂದು ಲಕ್ಷಾಂತರ ಜನರು ಪ್ರಾರ್ಥಿಸುತ್ತಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿಯೂ ಬಡವರಿಗೆ ಸಹಾಯ ಮಾಡುವುದನ್ನು ತಾವು ನಿಲ್ಲಿಸುವುದಿಲ್ಲ ಎಂದು ಸೋನು ಸೂದ್​ ಹೇಳಿದ್ದಾರೆ!

‘ಕೊವಿಡ್​ ಪಾಸಿಟಿವ್​ ಆಗಿದೆ. ಆದರೆ ಮನಸ್ಸು ಮತ್ತು ಉತ್ಸಾಹ ಸೂಪರ್​ ಪಾಸಿಟಿವ್​ ಆಗಿದೆ. ಎಲ್ಲರಿಗೂ ಹಾಯ್​. ಇಂದು ಬೆಳಗ್ಗೆ ನನಗೆ ಕೊವಿಡ್​-19 ಪಾಸಿಟಿವ್​ ಆಗಿದೆ ಎಂಬುದನ್ನು ತಿಳಿಸುತ್ತಿದ್ದೇನೆ. ಮುನ್ನೆಚ್ಚರಿಕೆ ಕ್ರಮವಾಗಿ ನಾನು ಕ್ವಾರಂಟೈನ್​ ಆಗಿದ್ದೇನೆ. ಹೆಚ್ಚಿನ ಕಾಳಜಿ ವಹಿಸುತ್ತಿದ್ದೇನೆ. ಆದರೆ ಚಿಂತೆ ಮಾಡುವುದು ಬೇಡ. ನಿಮ್ಮೆಲ್ಲರ ಸಮಸ್ಯೆಯನ್ನು ಪರಿಹರಿಸಲು ನನಗೆ ಇದರಿಂದ ಹೆಚ್ಚಿನ ಸಮಯ ಸಿಗಲಿದೆ. ನಿಮಗಾಗಿ ನಾನು ಸದಾ ಇರುತ್ತೇನೆ ಎಂಬುದನ್ನು ನೆನಪಿಡಿ’ ಎಂದು ಸೋಶಿಯಲ್​ ಮೀಡಿಯಾ ಮೂಲಕ ಸೋನು ಸೂದ್​​ ತಿಳಿಸಿದ್ದಾರೆ.

2020ರಲ್ಲಿ ಕಠಿಣ ಲಾಕ್​ಡೌನ್​ ಜಾರಿಯಾಗಿದ್ದಾಗ ಸಾವಿರಾರು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಕಷ್ಟಪಡುತ್ತಿದ್ದರು. ಎಷ್ಟೋ ಜನರು ಕಾಲ್ನಡಿಗೆಯಲ್ಲೇ ನೂರಾರು ಕಿಲೋ ಮೀಟರ್​ ಪ್ರಯಾಣ ಮಾಡಿದರು. ಆ ವೇಳೆ ಸಾವುಗಳು ಸಂಭವಿಸಿದವು. ಇದನ್ನೆಲ್ಲ ಕಂಡ ಸೋನು ಸೂದ್​ ರಿಯಲ್​ ಹೀರೋ ರೀತಿಯಲ್ಲಿ ಬಡಜನರ ಸಹಾಯಕ್ಕೆ ಧಾವಿಸಿದ್ದರು. ಸರ್ಕಾರಗಳು ಕೂಡ ಕೈಕಟ್ಟಿ ಕುಳಿತ ಸಂದರ್ಭದಲ್ಲಿ ಜನರಿಗೆ ಸೋನು ಸೂದ್​​ ಬಸ್​ ವ್ಯವಸ್ಥೆ ಮಾಡಿದ್ದರು.

ವಿದೇಶದಲ್ಲಿ ಸಿಲುಕಿಕೊಂಡಿದ್ದವರನ್ನು ಭಾರತಕ್ಕೆ ಕರೆತರಲು ಸೋನು ಸೂದ್​ ಶ್ರಮಿಸಿದ್ದರು. ಕಾರ್ಮಿಕರನ್ನು ವಿಮಾನದ ಮೂಲಕ ಅವರವರ ಊರುಗಳಿಗೆ ತಲುಪಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸೋನು ಸೂದ್​ ಗಮನ ಸೆಳೆದಿದ್ದರು. ಈ ಎಲ್ಲ ಘಟನೆಗಳ ಬಳಿಕ ಎಷ್ಟೋ ಬಡವರ ಮನೆಯಲ್ಲಿ ಸೋನು ಸೂದ್​​ ಫೋಟೋ ಇಟ್ಟು ಪೂಜೆ ಮಾಡಿದ ಬಗ್ಗೆ ವರದಿ ಆಗಿತ್ತು. ಈಗ ಅವರಿಗೇ ಕೊರೊನಾ ವೈರಸ್​ ತಗುಲಿರುವುದರಿಂದ ಕೋಟ್ಯಂತರ ಅಭಿಮಾನಿಗಳಿಗೆ ಬೇಸರ ಆಗಿದೆ.

ಇದನ್ನೂ ಓದಿ: ವಿಮಾನದ ಮೇಲೆ ಸೋನು ಸೂದ್​ಗೆ ವಿಶೇಷ ಗೌರವ! ತಂದೆ-ತಾಯಿಯೇ ಇಲ್ಲ ಎಂದು ಮರುಗಿದ ನಟ

(Sonu Sood tests Coronavirus positive and is now in quarantine)

Published On - 2:22 pm, Sat, 17 April 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us