ಭಾರತದಲ್ಲೇ ‘ಧುರಂಧರ್’, ‘ಪಠಾಣ್’ ಸಿನಿಮಾಗಳ ಹಿಂದಿಕ್ಕಿದ ಸ್ಪೈಡರ್ ಮ್ಯಾನ್

Spider Man Brand New Day: ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿಯೇ ಭಾರತದ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕಲೆಕ್ಷನ್ ಅಲ್ಲಿ ಹಿಂದಿಕ್ಕಿದೆ. ಆ ಮೂಲಕ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಭಾರತದ ಸೂಪರ್ ಹಿಟ್ ಸಿನಿಮಾಗಳಾದ ‘ಧುರಂಧರ್’ ಮತ್ತು ಶಾರುಖ್ ಖಾನ್ ನಟನೆಯ ‘ಪಠಾಣ್’ ಕಲೆಕ್ಷನ್ ದಾಖಲೆಯನ್ನೇ ಹಿಂದಿಕ್ಕಿದೆ ಈ ಸಿನಿಮಾ.

ಭಾರತದಲ್ಲೇ ‘ಧುರಂಧರ್’, ‘ಪಠಾಣ್’ ಸಿನಿಮಾಗಳ ಹಿಂದಿಕ್ಕಿದ ಸ್ಪೈಡರ್ ಮ್ಯಾನ್
Spider Man Brand New Day

Updated on: Aug 02, 2026 | 9:22 PM

ಸ್ಪೈಡರ್‌ಮ್ಯಾನ್: ಬ್ರಾಂಡ್ ನ್ಯೂ ಡೇ’ (Spider Man) ಬಿಡುಗಡೆ ಆಗಿ ಮೂರು ದಿನಗಳಾಗಿವೆ. ಭಾರತದಲ್ಲಿ ಈ ಸಿನಿಮಾ ಜುಲೈ 30ಕ್ಕೆ ರಿಲೀಸ್ ಆಗಿತ್ತು. ಸಿನಿಮಾ ಬಿಡುಗಡೆಗೆ ಮುಂಚೆಯೇ ಭಾರಿ ಸಂಖ್ಯೆಯ ಟಿಕೆಟ್​​ಗಳನ್ನು ಮುಂಗಡವಾಗಿ ಮಾರಾಟ ಮಾಡಲಾಗಿತ್ತು. ಅದೂ ದುಬಾರಿ ಮೊತ್ತಕ್ಕೆ. ಇದೀಗ ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿಯೇ ಭಾರತದ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕಲೆಕ್ಷನ್ ಅಲ್ಲಿ ಹಿಂದಿಕ್ಕಿದೆ. ಆ ಮೂಲಕ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಭಾರತದ ಸೂಪರ್ ಹಿಟ್ ಸಿನಿಮಾಗಳಾದ ‘ಧುರಂಧರ್’ ಮತ್ತು ಶಾರುಖ್ ಖಾನ್ ನಟನೆಯ ‘ಪಠಾಣ್’ ಕಲೆಕ್ಷನ್ ದಾಖಲೆಯನ್ನೇ ಹಿಂದಿಕ್ಕಿದೆ ಈ ಸಿನಿಮಾ.

ಸ್ಪೈಡರ್‌ಮ್ಯಾನ್ ಪಾತ್ರದಲ್ಲಿ ಟಾಮ್ ಹಾಲಂಡ್ ನಟಿಸಿರುವ ನಾಲ್ಕನೇ ಸೋಲೋ ಚಿತ್ರವು ಭಾರತದಲ್ಲಿ 72 ಕೋಟಿ ರೂಪಾಯಿ ಕಲೆಕ್ಷನ್‌ನೊಂದಿಗೆ ಆರಂಭಗೊಂಡಿತು. ಇದು ಹಾಲಿವುಡ್ ಚಿತ್ರವೊಂದರ ಸಾರ್ವಕಾಲಿಕ ಅತ್ಯುತ್ತಮ ಓಪನಿಂಗ್ ಆಗಿದೆ. ಶುಕ್ರವಾರದಂದು ಈ ಚಿತ್ರವು 50 ಕೋಟಿಗೂ ಹೆಚ್ಚು ಮೊತ್ತ ಗಳಿಸಿತು. ಕೇವಲ ಎರಡೇ ದಿನಕ್ಕೆ ಈ ಸಿನಿಮಾ 130 ಕೋಟಿಗೂ ಹೆಚ್ಚು ಮೊತ್ತವನ್ನು ಭಾರತದ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿತು. ಹಾಲಿವುಡ್​​ನ ಯಾವ ಸಿನಿಮಾ ಸಹ ಭಾರತದಲ್ಲಿ ಇಷ್ಟು ದೊಡ್ಡ ಗಳಿಕೆ ಮಾಡಿಲ್ಲ.

ಹಾಲಿವುಡ್ ಮಾತ್ರವಲ್ಲ, ಭಾರತದ ದೊಡ್ಡ ಸ್ಟಾರ್ ನಟರ ಸಿನಿಮಾಗಳ ದಾಖಲೆಯನ್ನು ಸಹ ಈ ಸಿನಿಮಾ ಮೊದಲ ದಿನವೇ ಮುರಿದು ಹಾಕಿತ್ತು. ಮೊದಲ ದಿನವೇ ಈ ಸಿನಿಮಾ 72 ಕೋಟಿಗೂ ಹೆಚ್ಚು ಮೊತ್ತ ಗಳಿಸಿತ್ತು. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಮೊದಲ ದಿನ ಗಳಿಸಿದ್ದು 67 ಕೋಟಿಯಷ್ಟೆ. 2025ರಲ್ಲಿ ಬಿಡುಗಡೆ ಆದ ‘ಧುರಂಧರ್’ ಸಿನಿಮಾದ ಮೊದಲ ದಿನದ ದಾಖಲೆಯನ್ನು ಸಹ ಈ ಸಿನಿಮಾ ಮುರಿದಿದೆ. ಆದರೆ ‘ಧುರಂಧರ್ 2’ ಸಿನಿಮಾದ ದಾಖಲೆ ಅಳಿಸಲಾಗಿಲ್ಲ.

ಇದನ್ನೂ ಓದಿ:‘ದಿ ಆಡಸ್ಸಿ’ ಅಡ್ವಾನ್ಸ್ ಬುಕಿಂಗ್: ಐಮ್ಯಾಕ್ಸ್ ಟಿಕೆಟ್​​ಗಳು ಸೋಲ್ಡ್ ಔಟ್

‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಬಿಡುಗಡೆ ಆದ ನಾಲ್ಕು ದಿನಕ್ಕೆ 300 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಕೇವಲ ಭಾರತದಲ್ಲಿ. ಭಾನುವಾರದ ಗಳಿಕೆಯನ್ನೂ ಸೇರಿ ‘ಸ್ಪೈಡರ್ ಮ್ಯಾನ್’ ಸಿನಿಮಾ 300 ಕೋಟಿ ಕ್ಲಬ್ ಸೇರಿಕೊಂಡಿದೆ. ಇನ್ನೂ ಒಂದು ವಾರ ಸ್ಪೈಡರ್ ಮ್ಯಾನ್ ಸಿನಿಮಾಕ್ಕೆ ಯಾವುದೇ ಎದುರಾಳಿ ಸಿನಿಮಾಗಳು ಸಹ ಇಲ್ಲ. ಹಾಗಾಗಿ ಈ ಗಳಿಕೆ ದುಪ್ಪಟ್ಟಾಗುವ ಸಂಭವ ಹೆಚ್ಚಾಗಿದೆ. ಮುಂದಿನ ವಾರದಲ್ಲಿ ಈ ಸಿನಿಮಾ ಇನ್ನಷ್ಟು ದಾಖಲೆಗಳನ್ನು ಪುಡಿಗಟ್ಟುವುದು ಖಾತ್ರಿ.

‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ಗೆ ಮುಂಚೆ ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಾಲಿವುಡ್ ಸಿನಿಮಾ ಎಂಬ ದಾಖಲೆ ‘ಅವೇಂಜರ್ಸ್: ಎಂಡ್ ಗೇಮ್’ ಹೆಸರಲ್ಲಿತ್ತು. ಆ ಸಿನಿಮಾದ ದಾಖಲೆಯನ್ನು ಕೇವಲ ಮೂರೇ ದಿನಕ್ಕೆ ‘ಸ್ಪೈಡರ್ ಮ್ಯಾನ್’ ಸಿನಿಮಾ ಮುರಿದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:02 pm, Sun, 2 August 26

Loading...
Unable to load recommendations.
Follow Us