AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ಆಡಸ್ಸಿ’ ಅಡ್ವಾನ್ಸ್ ಬುಕಿಂಗ್: ಐಮ್ಯಾಕ್ಸ್ ಟಿಕೆಟ್​​ಗಳು ಸೋಲ್ಡ್ ಔಟ್

The Odyssey: ಕೆಲ ದಿನಗಳ ಹಿಂದಷ್ಟೆ ಕ್ರಿಸ್ಟೊಫರ್ ನೋಲನ್ ಅವರು ಮುಂಬೈನ ಐಮ್ಯಾಕ್ಸ್ ನಲ್ಲಿ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಿದ್ದರು. ಆದರೆ ಸಿನಿಮಾ ಅಧಿಕೃತವಾಗಿ ಜುಲೈ 17ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಈಗಾಗಲೇ ಹಲವು ದಿನಗಳಾಗಿದ್ದು, ಬಿಡುಗಡೆ ದಿನ ಹತ್ತಿರ ಬಂದಷ್ಟೂ ಬುಕಿಂಗ್ ಜೋರಾಗುತ್ತಿದೆ.

‘ದಿ ಆಡಸ್ಸಿ’ ಅಡ್ವಾನ್ಸ್ ಬುಕಿಂಗ್: ಐಮ್ಯಾಕ್ಸ್ ಟಿಕೆಟ್​​ಗಳು ಸೋಲ್ಡ್ ಔಟ್
The Odyssey
ಮಂಜುನಾಥ ಸಿ.
|

Updated on: Jul 15, 2026 | 2:41 PM

Share

ಕ್ರಿಸ್ಟೊಫರ್ ನೋಲನ್ (christopher nolan) ನಿರ್ದೇಶಿಸಿ ಹಲವು ಸೂಪರ್ ಸ್ಟಾರ್ ಹಾಲಿವುಡ್ ನಟ-ನಟಿಯರು ನಟಿಸಿರುವ ‘ದಿ ಆಡಸ್ಸಿ’ ಸಿನಿಮಾ ಬಿಡುಗಡೆಗೆ ಎರಡು ದಿನಗಳಷ್ಟೆ ಬಾಕಿ ಇದೆ. ಕೆಲ ದಿನಗಳ ಹಿಂದಷ್ಟೆ ಕ್ರಿಸ್ಟೊಫರ್ ನೋಲನ್ ಅವರು ಮುಂಬೈನ ಐಮ್ಯಾಕ್ಸ್ ನಲ್ಲಿ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಿದ್ದರು. ಆದರೆ ಸಿನಿಮಾ ಅಧಿಕೃತವಾಗಿ ಜುಲೈ 17ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಈಗಾಗಲೇ ಹಲವು ದಿನಗಳಾಗಿದ್ದು, ಬಿಡುಗಡೆ ದಿನ ಹತ್ತಿರ ಬಂದಷ್ಟೂ ಬುಕಿಂಗ್ ಜೋರಾಗುತ್ತಿದೆ.

‘ದಿ ಆಡಸ್ಸಿ’ ಸಿನಿಮಾ ಬಿಡುಗಡೆಗೆ ಎರಡು ದಿನಗಳಿರುವಾಗ ಮಲ್ಟಿಪ್ಲೆಕ್ಸ್​​ಗಳಲ್ಲಿ 75,000 ಟಿಕೆಟ್‌ಗಳನ್ನು ಮುಂಗಡವಾಗಿ ಮಾರಾಟ ಮಾಡಲಾಗಿದೆ. ಇದು ಭಾರಿ ದೊಡ್ಡ ಸಂಖ್ಯೆ ಅಲ್ಲದಿದ್ದರೂ ಹಾಲಿವುಡ್ ಸಿನಿಮಾ ಒಂದು ಹೀಗೆ 75 ಸಾವಿರ ಟಿಕೆಟ್ ಮುಂಗಡವಾಗಿ ಮಾರಾಟ ಮಾಡಿರುವುದು ಸಣ್ಣ ಸಾಧನೆ ಅಲ್ಲ. ಬಿಡುಗಡೆಗೆ ಇನ್ನೂ ಎರಡು ದಿನಗಳು ಇರುವ ಕಾರಣದಿಂದಾಗಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

‘ದಿ ಆಡಸ್ಸಿ’ ಸಿನಿಮಾವನ್ನು ಸಂಪೂರ್ಣವಾಗಿ ಐಮ್ಯಾಕ್ಸ್ ರೀಲ್ ಬಳಸಿ, ಐಮ್ಯಾಕ್ಸ್ ಕ್ಯಾಮೆರಾನಲ್ಲಿ ಶೂಟ್ ಮಾಡಲಾಗಿದ್ದು, ಹೀಗೆ ಸಂಪೂರ್ಣ ಐಮ್ಯಾಕ್ಸ್ ಬಳಸಿ ಶೂಟ್ ಮಾಡಿದ ಮೊದಲ ಸಿನಿಮಾ ಎನಿಸಿಕೊಂಡಿದೆ. ಸಿನಿಮಾವನ್ನು ಐಮ್ಯಾಕ್ಸ್ ಸ್ಕ್ರೀನ್​​​ಗಳಿಗಾಗಿಯೇ ಮಾಡಲಾಗಿದೆ. ಹಾಗಾಗಿ ಪ್ರೇಕ್ಷಕರು ಸಹ ಐಮ್ಯಾಕ್ಸ್ 2ಡಿ, ಐಮ್ಯಾಕ್ಸ್ 2ಡಿ ಸ್ಕ್ರೀನ್​​ಗಳಲ್ಲಿ ಮಾತ್ರವೇ ಟಿಕೆಟ್ ಬುಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಪರಿಪೂರ್ಣ ಐಮ್ಯಾಕ್ಸ್ ಸ್ಕ್ರೀನ್​​ಗಳ ಸಂಖ್ಯೆ ಬಹಳ ಕಡಿಮೆ ಇದೆ. ಹಾಗಾಗಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ತುಸು ಕಡಿಮೆ ಆಗಿರುವ ಸಾಧ್ಯತೆಯೂ ಇದೆ. ಪ್ರೇಕ್ಷಕರು ಈ ಸಿನಿಮಾವನ್ನು ಐಮ್ಯಾಕ್ಸ್​​​ನಲ್ಲಿಯೇ ನೋಡಲು ಕಾತರರಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ:ಹೊಸ ಹಾಲಿವುಡ್ ಸಿನಿಮಾ ಘೋಷಿಸಿದ ನಟಿ ಪ್ರಿಯಾಂಕಾ ಚೋಪ್ರಾ

ಬೆಂಗಳೂರಿನಲ್ಲಿ ಆರು ಐಮ್ಯಾಕ್ಸ್ 2ಡಿ ಸ್ಕ್ರೀನುಗಳಲ್ಲಿ ‘ದಿ ಆಡಸ್ಸಿ’ಗೆ ಸಿನಿಮಾ ಪ್ರದರ್ಶಿಸಲಾಗುತ್ತಿದ್ದು, ಈ ಆರು ಸ್ಕ್ರೀನ್​​ಗಳ ಮೊದಲ ದಿನದ ಎಲ್ಲ ಟಿಕೆಟ್​​ಗಳು ಮಾರಾಟ ಆಗಿವೆ. ಆದರೆ ಐಮ್ಯಾಕ್ಸ್ ಹೊರತುಪಡಿಸಿ ಬೇರೆ ಸ್ಕ್ರೀನ್​​ಗಳ ಶೋಗಳು ಮಾರಾಟ ಆಗಿಲ್ಲ. ಬೆಂಗಳೂರಿನಲ್ಲಿ ಐಮ್ಯಾಕ್ಸ್​ ಸ್ಕ್ರೀನ್​​ಗಳ ಮುಂದಿನ ಮೂರು ದಿನದ ಟಿಕೆಟ್​​ಗಳು ಮುಂಗಡವಾಗಿ ಸೋಲ್ಡ್ ಔಟ್ ಆಗಿವೆ. ಮುಂಬೈನಲ್ಲೂ ಇದೇ ಪರಿಸ್ಥಿತಿ ಇದೆ. ಐಮ್ಯಾಕ್ಸ್ ಹೊರತಾಗಿ ಬೇರೆ ಸ್ಕ್ರೀನ್​​ಗಳಲ್ಲಿ ಜನ ಈ ಸಿನಿಮಾ ನೋಡಲು ಆಸಕ್ತಿ ತೋರುತ್ತಿಲ್ಲ. ಹಾಗಾಗಿ ಸಿನಿಮಾದ ಮುಂಗಡ ಬುಕಿಂಗ್ ತುಸು ನಿಧಾನಕ್ಕೆ ನಡೆಯುತ್ತಿದೆ.

‘ದಿ ಆಡಸ್ಸಿ’ ಸಿನಿಮಾ ಅನ್ನು ಕ್ರಿಸ್ಟೊಫರ್ ನೋಲನ್ ನಿರ್ದೇಶಿಸಿದ್ದು, ಸಿನಿಮಾನಲ್ಲಿ ಮ್ಯಾಟ್ ಡೇಮನ್, ಸ್ಪೈಡರ್​ಮ್ಯಾನ್ ಖ್ಯಾತಿಯ ಟಾಮ್ ಹಾಲಂಡ್, ಅನ್ನಾ ಹಾತ್​​ವೇ, ಜೆಂಡೆಯಾ, ರಾಬರ್ಟ್ ಪ್ಯಾಟಿನ್​ಸನ್, ಟ್ರೈವಿಸ್ ಸ್ಕಾಟ್ ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?