‘ಆಕಡೆ ಹೋಗಮ್ಮ’; ಯೋಗ ದಿನ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾಗೆ ಅವಮಾನ

ನಟಿ ಶ್ರೀಲೀಲಾ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಹಾರಾಷ್ಟ್ರ ಸಿಎಂ ಪತ್ನಿ ಅಮೃತಾ ಫಡ್ನವೀಸ್ ಅವರು ಶ್ರೀಲೀಲಾ ಅವರಿಗೆ ಫೋಟೋ ಸೆಷನ್ ವೇಳೆ ಅಸಭ್ಯವಾಗಿ ಪಕ್ಕಕ್ಕೆ ಸರಿಯುವಂತೆ ಸನ್ನೆ ಮಾಡಿ ಅವಮಾನಿಸಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಮತ್ತು ಅಭಿಮಾನಿಗಳು ಅಮೃತಾ ಅವರ ಅಹಂಕಾರದ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಆಕಡೆ ಹೋಗಮ್ಮ’; ಯೋಗ ದಿನ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾಗೆ ಅವಮಾನ
ಶ್ರೀಲೀಲಾ

Updated on: Jun 22, 2026 | 1:17 PM

ನಟಿ ಶ್ರೀಲೀಲಾ (Sreeleela) ಪ್ರಸ್ತುತ ದಕ್ಷಿಣ ಚಿತ್ರರಂಗದಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಸದ್ದು ಮಾಡುತ್ತಿದ್ದಾರೆ. ಕನ್ನಡ ಸಿನಿಮಾ ರಂಗದಿಂದ ಕರಿಯರ್ ಆರಂಭಿಸಿದ ಇವರು ಟಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾ ಮಾಡುತ್ತಿದ್ದಾರೆ. ಸ್ಟಾರ್ ನಟಿ ಎಂಬ ಪಟ್ಟ ಪಡೆದ ಅವರು ಹಲವು ಸೂಪರ್​​ ಸ್ಟಾರ್​​ಗಳ ಜೊತೆ ನಟಿಸಿದ್ದಾರೆ. ಸದ್ಯ ದಕ್ಷಿಣ ಭಾರತದಲ್ಲಿ ಮಿಂಚುತ್ತಿರುವ ಈ ನಟಿಗೆ ಈಗ ಅವಮಾನ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಭಾನುವಾರ (ಜೂನ್ 22) ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮುಂಬೈನಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ ಶ್ರೀಲೀಲಾ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯವರ ಪತ್ನಿ ಅಮೃತಾ ಫಡ್ನವೀಸ್ ಹಾಗೂ ಬಾಲಿವುಡ್ ಸ್ಟಾರ್ ನಟ ಶಾಹಿದ್ ಕಪೂರ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಶ್ರೀಲೀಲಾ ಅವರು ಕೆಲ ಸಮಯ ಯೋಗಾಸನಗಳನ್ನು ಮಾಡಿದ್ದಲ್ಲದೆ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢವಾಗಿಡಲು ಯೋಗ ಹೇಗೆ ಸಹಾಯ ಮಾಡುತ್ತದೆ ಎಂಬ ವಿಷಯಗಳ ಬಗ್ಗೆ ಮಾತನಾಡಿದರು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು, ಆದರೆ ಕಾರ್ಯಕ್ರಮದ ಕೊನೆಯಲ್ಲಿ ಮಹಾರಾಷ್ಟ್ರ ಸಿಎಂ ಪತ್ನಿಯ ನಡವಳಿಕೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವೇದಿಕೆ ಮೇಲೆ ಶ್ರೀಲೀಲಾ ಅವರೊಂದಿಗೆ ಅಮೃತಾ ಫಡ್ನವೀಸ್ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ನೆಟ್ಟಿಗರು ಮತ್ತು ಶ್ರೀಲೀಲಾ ಅಭಿಮಾನಿಗಳು ಅಭಿಪ್ರಾಯ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ: ಸತತ ಸೋಲುಗಳಿಂದ ಕಂಗೆಟ್ಟ ನಟಿ ಶ್ರೀಲೀಲಾ; ಬೇಕಿದೆ ದೊಡ್ಡ ಗೆಲುವು

ವೇದಿಕೆಯ ಮೇಲೆ ಯೋಗಾಸನಗಳ ಪ್ರದರ್ಶನ ಮುಗಿದ ನಂತರ ಅಮೃತಾ ಫಡ್ನವೀಸ್, ಅವರ ಮಗಳು ಹಾಗೂ ನಟಿ ಶ್ರೀಲೀಲಾ ಮೂವರೂ ಮಾಧ್ಯಮದವರಿಗೆ ಜಂಟಿಯಾಗಿ ಫೋಟೋ ಪೋಸ್ ನೀಡುತ್ತಿದ್ದರು. ಈ ವೇಳೆ ಕೆಲವು ಮಾಧ್ಯಮ ಪ್ರತಿನಿಧಿಗಳು ಸಿಎಂ ಪತ್ನಿ ಮತ್ತು ಅವರ ಮಗಳ ಫೋಟೋವನ್ನು ಮಾತ್ರ ಪ್ರತ್ಯೇಕವಾಗಿ ತೆಗೆಯಲು ಬಯಸಿದರು. ಆಗ ಅಮೃತಾ ಫಡ್ನವೀಸ್ ಅವರು ಪಕ್ಕದಲ್ಲೇ ಇದ್ದ ಶ್ರೀಲೀಲಾ ಅವರಿಗೆ ಕನಿಷ್ಠ ಸೌಜನ್ಯಕ್ಕೂ ವಿನಮ್ರವಾಗಿ ವಿನಂತಿಸದೆ, ಕೇವಲ ಬೆರಳುಗಳ ಸನ್ನೆ ಮೂಲಕ ಪಕ್ಕಕ್ಕೆ ಸರಿಯುವಂತೆ ಅಸಭ್ಯವಾಗಿ ಸನ್ನೆ ಮಾಡಿದರು. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ಮುಖ್ಯಮಂತ್ರಿ ಪತ್ನಿಗೆ ಇಷ್ಟೊಂದು ದುರಹಂಕಾರ ಶೋಭಿಸುವುದಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us