Sreeleela: ಈ ಬಾರಿ ಪುಷ್ಪರಾಜ್​ ಜೊತೆ ಕುಣಿಯೋದು ಸಮಂತಾ ಅಲ್ಲ; ಭರ್ಜರಿ ಚಾನ್ಸ್ ಪಡೆದ ಶ್ರೀಲೀಲಾ?

Pushpa 2 Movie: ‘ಪುಷ್ಪ 2’ ಸಿನಿಮಾ ತಂಡದ ಜೊತೆ ಶ್ರೀಲೀಲಾ ಹೆಸರು ತಳುಕು ಹಾಕಿಕೊಂಡಿದೆ. ತೆಲುಗು ಸಿನಿಮಾ ಪ್ರೇಕ್ಷಕರಿಗೆ ಶ್ರೀಲೀಲಾ ಇಷ್ಟವಾಗಿದ್ದಾರೆ. ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Sreeleela: ಈ ಬಾರಿ ಪುಷ್ಪರಾಜ್​ ಜೊತೆ ಕುಣಿಯೋದು ಸಮಂತಾ ಅಲ್ಲ; ಭರ್ಜರಿ ಚಾನ್ಸ್ ಪಡೆದ ಶ್ರೀಲೀಲಾ?
ಸಮಂತಾ, ಅಲ್ಲು ಅರ್ಜುನ್​, ಶ್ರೀಲೀಲಾ

Updated on: Jul 28, 2023 | 6:18 PM

ನಟಿ ಶ್ರೀಲೀಲಾ (Sreeleela) ಅವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಟಾಲಿವುಡ್​ನಲ್ಲೂ ಒಳ್ಳೊಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ರೀತಿಯೇ ಶ್ರೀಲೀಲಾ ಅವರಿಗೂ ತೆಲುಗಿನ ಸ್ಟಾರ್​ ಹೀರೋಗಳ ಸಿನಿಮಾಗಳಲ್ಲಿ ನಟಿಸುವ ಚಾನ್ಸ್​ ಸಿಗುತ್ತಿದೆ. ಈಗಾಗಲೇ ಅವರು ನಂದಮೂರಿ ಬಾಲಕೃಷ್ಣ ಜೊತೆ ‘ಭಗವಂತ್​ ಕೇಸರಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಹೇಶ್​ ಬಾಬು ನಟನೆಯ ‘ಗುಂಟೂರು ಖಾರಂ’ ಚಿತ್ರದಲ್ಲೂ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ. ಈ ನಡುವೆ ಇನ್ನೊಂದು ಸುದ್ದಿ ಹರಿದಾಡುತ್ತಿದೆ. ಅಲ್ಲು ಅರ್ಜುನ್​ ಅಭಿನಯದ ‘ಪುಷ್ಪ 2’ (Pushpa 2 Movie) ಸಿನಿಮಾದಲ್ಲಿನ ಸ್ಪೆಷಲ್​ ಸಾಂಗ್​ಗೆ ಶ್ರೀಲೀಲಾ ಡ್ಯಾನ್ಸ್​ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ‘ಪುಷ್ಪ’ ಸಿನಿಮಾದಲ್ಲಿ ಸಮಂತಾ ರುತ್​ ಪ್ರಭು (Samantha Ruth Prabhu) ಕುಣಿದಿದ್ದರು. ಸೀಕ್ವೆಲ್​ನಲ್ಲಿ ಆ ಅವಕಾಶ ಶ್ರೀಲೀಲಾ ಪಾಲಾಗಿದೆ ಎನ್ನಲಾಗುತ್ತಿದೆ.

ಸಮಂತಾ ರುತ್​ ಪ್ರಭು ಅವರು ಡ್ಯಾನ್ಸ್ ಮಾಡಿದ್ದ ‘ಉ ಅಂಟಾವಾ ಮಾವ, ಉಊ ಅಂಟಾವಾ ಮಾವ..’ ಹಾಡು ಸೂಪರ್​ ಹಿಟ್​ ಆಗಿತ್ತು. ‘ಪುಷ್ಪ’ ಸಿನಿಮಾ ಗೆಲ್ಲಲು ಆ ಹಾಡಿನ ಜನಪ್ರಿಯತೆ ಕೂಡ ಕಾರಣ. ಹಾಗಾಗಿ ‘ಪುಷ್ಪ 2’ ಸಿನಿಮಾದಲ್ಲೂ ಅಂಥ ಒಂದು ಸ್ಪೆಷಲ್​ ಸಾಂಗ್​ ಇರಲಿದೆ. ಆದರೆ ಅದರಲ್ಲಿ ಸಮಂತಾ ರುತ್​ ಪ್ರಭು ಸ್ಟೆಪ್​ ಹಾಕಲು ಸಾಧ್ಯವಿಲ್ಲ. ಯಾಕೆಂದರೆ Myositis ಕಾಯಿಲೆಗೆ ಹೆಚ್ಚಿನ ಚಿಕಿತ್ಸೆ ಪಡೆಯಲು ಅವರು ಅಮೆರಿಕಕ್ಕೆ ತೆರಳುತ್ತಿದ್ದಾರೆ. ಅದಕ್ಕಾಗಿ ಅವರು ಹಲವು ತಿಂಗಳ ಕಾಲ ಬ್ರೇಕ್​ ಪಡೆಯುತ್ತಿದ್ದಾರೆ. ಈಗ ‘ಪುಷ್ಪ 2’ ತಂಡದ ಮುಂದಿರುವ ಆಯ್ಕೆ ಶ್ರೀಲೀಲಾ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Sakshi Dhoni: ‘ಅಲ್ಲು ಅರ್ಜುನ್​ ಅವರ ಎಲ್ಲ ಸಿನಿಮಾ ನೋಡಿದ್ದೇನೆ’: ಅಭಿಮಾನ ಮೆರೆದ ಧೋನಿ ಪತ್ನಿ ಸಾಕ್ಷಿ

‘ಪುಷ್ಪ 2’ ಸಿನಿಮಾ ಬಗ್ಗೆ ಕೇಳಿಬಂದ ಗಾಸಿಪ್​ಗಳು ಒಂದೆರಡಲ್ಲ. ಆದರೆ ಆ ಬಗ್ಗೆ ಚಿತ್ರತಂಡದವರು ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಈಗ ಈ ಟೀಮ್​ ಜೊತೆ ಶ್ರೀಲೀಲಾ ಹೆಸರು ತಳುಕು ಹಾಕಿಕೊಂಡಿದೆ. ತೆಲುಗು ಸಿನಿಮಾ ಪ್ರೇಕ್ಷಕರಿಗೆ ಶ್ರೀಲೀಲಾ ಇಷ್ಟವಾಗಿದ್ದಾರೆ. ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೊಸ ಹೊಸ ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆ ಆಗುತ್ತಿರುವ ಅವರಿಗೆ ‘ಪುಷ್ಪ 2’ ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಳ್ಳುವ ಚಾನ್ಸ್​ ಸಿಕ್ಕರೆ ಅಚ್ಚರಿ ಏನಿಲ್ಲ. ಈ ಬಗ್ಗೆ ಅಧಿಕೃತ ಮಾಹಿತಿ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: Pushpa 2 Bus Accident: ‘ಪುಷ್ಪ 2’ ಚಿತ್ರೀಕರಣಕ್ಕೆ ತೆರಳಿದ್ದ ಕಲಾವಿದರ ಬಸ್​ ಅಪಘಾತ; ಫೋಟೋ ನೋಡಿ ಅಲ್ಲು ಅರ್ಜುನ್​ ಅಭಿಮಾನಿಗಳಿಗೆ ಗಾಬರಿ

ಸುಕುಮಾರ್ ಅವರು ‘ಪುಷ್ಪ 2’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಮೊದಲ ಪಾರ್ಟ್ ಸೂಪರ್​ ಹಿಟ್​ ಆದ ಕಾರಣ ಸೀಕ್ವೆಲ್​ ಮೇಲೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆ ನಿರೀಕ್ಷೆಯ ಮಟ್ಟವನ್ನು ತಲುಪಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯನಿರತವಾಗಿದೆ. ‘ಮೈತ್ರಿ ಮೂವೀ ಮೆಕರ್ಸ್​’ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಶೂಟಿಂಗ್ ಪ್ರಗತಿಯಲ್ಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us