
ಸೂಪರ್ಸ್ಟಾರ್ ರಜನೀಕಾಂತ್ ಆರೋಗ್ಯ ತಪಾಸಣೆಗೆಂದು ಕುಟುಂಬದವರೊಂದಿಗೆ ಯುಎಸ್ಗೆ ತೆರಳಿದ್ದಾರೆ. 2016ರಲ್ಲಿ ಅವರು ಅಮೆರಿಕದಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಅದಾದ ಬಳಿಕ ಆಗಾಗ ತಪಾಸಣೆಗೆಂದು ಯುಎಸ್ಗೆ ತೆರಳುತ್ತಿರುತ್ತಾರೆ. ಹಾಗೇ ಈ ಬಾರಿಯೂ ಅಮೆರಿಕಕ್ಕೆ ಹೋಗಿರುವ ಅವರ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ರಜನೀಕಾಂತ್ ಅವರು ಯುಎಸ್ನ ಪಶ್ಚಿಮ ವರ್ಜೀನಿಯಾದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಇರುವ ಫೋಟೋ ಇದು.
ರಜನೀಕಾಂತ್ ಹಾಗೂ ಪತ್ನಿ ಲತಾ, ಮಗಳು ಐಶ್ವರ್ಯಾ ಮತ್ತು ಅಳಿಯ ಧನುಷ್ ಹಾಗೂ ಈ ದಂಪತಿಯ ಪುತ್ರರು ಜೂ.19ರಂದು ಚೆನ್ನೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದರು. ಅಂದು ದುಬೈ ಮೂಲಕ ಯುಎಸ್ಗೆ ತೆರಳಿದ್ದಾರೆ. ಇನ್ನೂ ಕೆಲವು ತಿಂಗಳಗಳ ಕಾಲ ಈ ಕುಟುಂಬ ಯುಎಸ್ನಲ್ಲಿಯೇ ಇರಲಿದೆ. ಪದೇಪದೇ ಅಮೆರಿಕಕ್ಕೆ ಹೋಗುವ ರಜನೀಕಾಂತ್ಗೆ ಅಲ್ಲಿಯೂ ಕೂಡ ದೊಡ್ಡ ಅಭಿಮಾನಿ ಬಳಗವಿದೆ. ಈ ಬಾರಿ ಹೋದಾಗ ರಜನೀಕಾಂತ್ ಪಶ್ಚಿಮ ವರ್ಜೀನಿಯಾಕ್ಕೆ ಭೇಟಿ ಕೊಟ್ಟು ಅಲ್ಲಿರುವ ತಮ್ಮ ಅಭಿಮಾನಿಗಳೊಟ್ಟಿಗೆ ಮಾತುಕತೆ ನಡೆಸಿದ್ದಾರೆ. ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ.

ಅಭಿಮಾನಿಗಳೊಂದಿಗೆ ನಟ ರಜನಿಕಾಂತ್
ಖ್ಯಾತ ಗೀತರಚನೆಕಾರ ವೈರಮುತ್ತು ರಜನೀಕಾಂತ್ಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಿದ್ದಾಗಿ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರಜನೀಕಾಂತ್ ಅವರ ಆರೋಗ್ಯ ತಪಾಸಣೆ ನಡೆಯುತ್ತಿದೆ. ಅವರು ಇನ್ನೇನು ಕೆಲವೇ ದಿನಗಳಲ್ಲಿ ಭಾರತಕ್ಕೆ ವಾಪಸ್ ಆಗುತ್ತಾರೆ ಎಂದೂ ತಿಳಿಸಿದ್ದಾರೆ. ರಜನೀಕಾಂತ್ ಅಮೆರಿಕದಿಂದ ವಾಪಸ್ ಆಗುತ್ತಿದ್ದಂತೆ ಮತ್ತೆ ತಮ್ಮ ಮುಂದಿನ ಸಿನಿಮಾ ಅಣ್ಣಾತೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಸಿರುಥೈ ಸಿವಾ ನಿರ್ದೇಶನ ಮಾಡುತ್ತಿದ್ದು, ನಯನತಾರಾ, ಕೀರ್ತಿ ಸುರೇಶ್, ಖುಷ್ಬು, ಮೀನಾ, ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ‘ಮೊದಲಿನಂತೆ ಇರೋಕೆ ಸಾಧ್ಯವಿಲ್ಲ, ನನ್ನ ಬಳಿ ಮಾತನಾಡಬೇಡ’; ದಿವ್ಯಾಗೆ ಕಟು ಮಾತಿನಿಂದ ಎಚ್ಚರಿಕೆ ನೀಡಿದ ಮಂಜು
Superstar Rajinikanths latest Photos with fans from West Virginia goes Viral in Social Media
Published On - 3:15 pm, Wed, 30 June 21