ತಮಿಳುನಾಡಿನಲ್ಲಿ ಹಿಂದಿ ಸಿನಿಮಾ ಬ್ಯಾನ್; ಕಠಿಣ ನಿಯಮ ತರಲು ಮುಂದಾದ ಸರ್ಕಾರ

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಈ ಬಿಲ್​ನ ತರಲು ಸಿದ್ಧತೆ ನಡೆಸಿದೆ. ಸಾರ್ವಜನಿಕ ಸ್ಥಳ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಹಿಂದಿ ಬಳಕೆ ಆಗದಂತೆ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಸ್ಟಾಲಿನ್ ಮನೆಯಲ್ಲಿ ನಡೆದ ತುರ್ತು ಸಭೆಯಲ್ಲಿಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ತಮಿಳುನಾಡಿನಲ್ಲಿ ಹಿಂದಿ ಸಿನಿಮಾ ಬ್ಯಾನ್; ಕಠಿಣ ನಿಯಮ ತರಲು ಮುಂದಾದ ಸರ್ಕಾರ
ತಮಿಳುನಾಡಿನಲ್ಲಿ ಹಿಂದಿ ಸಿನಿಮಾ ಬ್ಯಾನ್

Updated on: Oct 15, 2025 | 2:49 PM

ತಮಿಳುನಾಡು ಸರ್ಕಾರ ಈ ಮೊದಲಿನಿಂದಲೂ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಲೇ ಬರುತ್ತಿದೆ. ಈಗ ಸರ್ಕಾರ ಒಂದು ಮಹತ್ವದ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಹಿಂದಿ ಸಿನಿಮಾ, ಹಿಂದಿ ಬೋರ್ಡ್ ಹಾಗೂ ಹಾಡುಗಳನ್ನು ರಾಜ್ಯಾದ್ಯಂತ ಬ್ಯಾನ್ ಮಾಡಲು ನಿರ್ಧರಿಸಿದೆ. ಈ ಬಿಲ್​ನ ಅಧಿವೇಶನದಲ್ಲಿ ಮಂಡಿಸಿ, ಒಪ್ಪಿಗೆ ಪಡೆಯಲು ಸಿಎಂ ಸ್ಟಾಲಿನ್ ಸರ್ಕಾರ ಮುಂದಾಗಿದೆ. ಈ ನಿರ್ಧಾರಕ್ಕೆ ಪರ-ವಿರೋಧ ಚರ್ಚೆ ಆಗುತ್ತಿದೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಈ ಬಿಲ್​ನ ತರಲು ಸಿದ್ಧತೆ ನಡೆಸಿದೆ. ಸಾರ್ವಜನಿಕ ಸ್ಥಳ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಹಿಂದಿ ಬಳಕೆ ಆಗದಂತೆ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಸ್ಟಾಲಿನ್ ಮನೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ದ್ರಾವಿಡ ಅಸ್ಮಿತೆಯ ಕೂಗು ತಮಿಳುನಾಡಿನಲ್ಲಿ ಆಗಾಗ ಕೇಳಿ ಬರುತ್ತಲೇ ಇರುತ್ತವೆ. ‘ಭಾಷೆ ಉಳಿದರೆ ಮಾತ್ರ, ಜನಾಂಗ ಉಳಿಯುತ್ತದೆ’ ಎಂದು ಸ್ಟಾಲಿನ್ ಹೇಳುತ್ತಲೇ ಬರುತ್ತಿದ್ದಾರೆ. ‘ಡಿಎಂಕೆ ಹಿಂದಿಯನ್ನು ಒಂದು ಭಾಷೆಯಾಗಿ ವಿರೋಧಿಸುವುದಿಲ್ಲ ಆದರೆ ತಮಿಳುನಾಡಿನಲ್ಲಿ ಅದರ ಹೇರಿಕೆಯನ್ನು ಬಲವಾಗಿ ವಿರೋಧಿಸುತ್ತದೆ’ ಎಂದು ಈ ಮೊದಲು ಅವರು ಹೇಳಿದ್ದರು. ಶೈಕ್ಷಣಿಕ ನೀತಿ ಮೂಲಕ ಹಿಂದಿ ಹಾಗೂ ಸಂಸ್ಕೃತವನ್ನು ಪ್ರಚಾರ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂಬುದು ಸ್ಟಾಲಿನ್ ಆರೋಪಗಳಲ್ಲಿ ಒಂದು. ಈ ಎಲ್ಲಾ ಚರ್ಚೆಗಳ ಮಧ್ಯೆ ಸರ್ಕಾರ ಒಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುವುದರಲ್ಲಿದೆ.

ತಮಿಳುನಾಡಿನಲ್ಲಿ ಹಿಂದಿ ಸಿನಿಮಾ ಬ್ಯಾನ್ ಬಗ್ಗೆ ವಿವರ

ಇದನ್ನೂ ಓದಿ: ವಿಜಯ್ ರ್ಯಾಲಿ ಕಾಲ್ತುಳಿತದಿಂದ 36 ಜನ ಸಾವು; ನ್ಯಾಯಾಂಗ ತನಿಖೆಗೆ ತಮಿಳುನಾಡು ಸರ್ಕಾರ ಆದೇಶ

2026ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ನಟ ದಳಪತಿ ವಿಜಯ್ ಕೂಡ ತಮ್ಮದೇ ಪಕ್ಷ ಸ್ಥಾಪಿಸಿ ಚುನಾಚಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಅವರು ಡಿಎಂಕೆಗೆ ಪ್ರಬಲ ಸ್ಪರ್ಧಿ ಆಗುವ ಸೂಚನೆ ಇದೆ. ಈ ಕಾರಣದಿಂದ ಡಿಎಂಕೆ ದ್ರಾವಿಡ ಹಾಗೂ ಭಾಷಾ ವಿಚಾರ ಇಟ್ಟುಕೊಂಡು ಮತ ಬ್ಯಾಂಕ್​ನ ಗಟ್ಟಿಮಾಡಿಕೊಳ್ಳುವ ತಂತ್ರದಂತೆಯೂ ಇದು ಕಾಣಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:31 pm, Wed, 15 October 25